ಬರೀ ಹೇಳೋದಕ್ಕೆ ಬರೋದಲ್ಲ ಎಂದು ರಕ್ಷಿತಾಗೆ ವಾರ್ನ್ ಮಾಡಿದ ಕಿಚ್ಚ ಸುದೀಪ್

ರಕ್ಷಿತಾ ಶೆಟ್ಟಿ ಅವರು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದವರು. ಅವರು ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಗಮನ ಸೆಳೆಯುತ್ತಾ ಇದ್ದಾರೆ . ಇದರ ಜೊತೆಗೆ ಕೆಲವು ವಿಚಾರಕ್ಕೆ ಅವರು ಟೀಕೆಯನ್ನು ಕೂಡ ಎದುರಿಸುತ್ತಿದ್ದಾರೆ. ಈಗ ಸುದೀಪ್ ಅವರ ಕಡೆಯಿಂದ ರಕ್ಷಿತಾ ಶೆಟ್ಟಿಗೆ ಖಡಕ್ ವಾರ್ನಿಂಗ್ ಬಂದಿದೆ.

ಬರೀ ಹೇಳೋದಕ್ಕೆ ಬರೋದಲ್ಲ ಎಂದು ರಕ್ಷಿತಾಗೆ ವಾರ್ನ್ ಮಾಡಿದ ಕಿಚ್ಚ ಸುದೀಪ್
Rakshita Sudeep
Updated By: ಮಂಜುನಾಥ ಸಿ.

Updated on: Nov 09, 2025 | 10:10 AM

ಕಿಚ್ಚ ಸುದೀಪ್ ಅವರು ರಕ್ಷಿತಾ ಶೆಟ್ಟಿಯನ್ನು ಸದಾ ಬೆಂಬಲಿಸುತ್ತಾ ಬರುತ್ತಿರುವುದನ್ನು ನೀವು ಕಾಣಬಹುದು. ಆದರೆ, ಅವರು ತಪ್ಪು ಮಾಡಿದಾಗ ಅದನ್ನು ತಪ್ಪು ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಇದು ಹಲವು ಬಾರಿ ಸಾಬೀತಾಗಿದೆ. ಈ ಮಧ್ಯೆ ರಕ್ಷಿತಾ ಶೆಟ್ಟಿ ಮಾಡಿದ ಒಂದು ದೊಡ್ಡ ತಪ್ಪಿಗೆ ಅವರು ಖಡಕ್ ಆಗಿ ವಾರ್ನಿಂಗ್ ಮಾಡಿದ್ದಾರೆ. ಈ ಸಂದರ್ಭದ ವಿಚಾರವನ್ನು ನಾವು ಈಗ ಹೇಳುತ್ತಿದ್ದೇವೆ.

ಬಿಗ್ ಬಾಸ್​ನಲ್ಲಿ ರಕ್ಷಿತಾ ಶೆಟ್ಟಿ ಹಾಗೂ ಅಶ್ವಿನಿ ಮಧ್ಯೆ ಜಗಳ ಆಗಿತ್ತು. ಅಶ್ವಿನಿ ಗೌಡ ಅವರು ಗಜ್ಜೆ ಹಿಡಿದುಕೊಂಡು ಅಲ್ಲಾಡಿಸಿ, ಅದನ್ನು ರಕ್ಷಿತಾ ಶೆಟ್ಟಿ ಮೇಲೆ ಬರುವಂತೆ ಮಾಡಿದರು. ರಕ್ಷಿತಾ ಶೆಟ್ಟಿಯೇ ಇದನ್ನೆಲ್ಲ ಮಾಡುತ್ತಿದ್ದಾರೆ ಎನ್ನುವಂತೆ ಬಿಂಬಿಸಿದರು. ಮೂರನೇ ವಾರದಲ್ಲಿ ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆ ಆಯಿತು. ಆ ಬಳಿಕ ಸುದೀಪ್ ಅವರು ಈ ವಿಚಾರವನ್ನು ಬಗೆ ಹರಿಸಿ, ಕ್ಷಮೆ ಕೇಳುವಂತೆಯೂ ಮಾಡಿದ್ದರು. ಆದರೆ, ಅಲ್ಲಿಗೆ ಸಮಸ್ಯೆ ಪರಿಹಾ ಆಗಿಲ್ಲ.

ಇವರ ಮಧ್ಯೆ ಮತ್ತೆ ಕಿತ್ತಾಟ ಮುಂದುವರಿಯಿತು. ಕಳೆದ ವಾರ ರಕ್ಷಿತಾ ಅವರು, ‘ನೀವು ವೋಟ್ ನೀಡಿದರೆ ಅದನ್ನು ಕಾಲಲ್ಲಿ ಹಾಕಿ ತುಳಿತೀನಿ’ ಎಂದಿದ್ದರು. ಇದನ್ನು ಅಶ್ವಿನಿ ಗೌಡ ತಪ್ಪಾಗಿ ಬಿಂಬಿಸೋ ಕೆಲಸ ಮಾಡಿದರು. ಈ ವಿಚಾರವಾಗಿ ರಕ್ಷಿತಾ ಪರ ಸುದೀಪ್ ಮಾತನಾಡಿದರು. ಈ ವೇಳೆ ಸುದೀಪ್ ಒಂದು ಪ್ರಶ್ನೆ ಕೇಳಿದರು.

ಇದನ್ನೂ ಓದಿ: ಸ್ಪರ್ಧಿಗಳ ಕೈಗೆ ರೆಡ್ ಕಾರ್ಡ್ ಕೊಟ್ಟು ರಿಷಾಗೆ ಮನೆ ದಾರಿ ತೋರಿಸಿದ ಕಿಚ್ಚ ಸುದೀಪ್

‘ಕ್ಷಮೆ ಕೇಳಿ ಸರಿಯಾಗಿದ್ದ ಸಂಬಂಧ ಮತ್ತೆ ಹಾಳಾಗಿದ್ದು ಹೇಗೆ. ಎಲ್ಲಿ ಮತ್ತೆ ತಪ್ಪಾಯಿತು’ ಎಂದು ಸುದೀಪ್ ಕೇಳಿದರು. ಆದರೆ, ರಕ್ಷಿತಾ ಶೆಟ್ಟಿಗೆ ಇದು ನೆನಪಿಗೆ ಬರಲೇ ಇಲ್ಲ. ಸುದೀಪ್ ಬಳಿಯೇ ಈ ಬಗ್ಗೆ ರಕ್ಷಿತಾ ಅವರು ಪ್ರಶ್ನೆ ಮಾಡಿದರು. ‘ನನಗೆ ಗೊತ್ತಾಗ್ತಾ ಇಲ್ಲ. ಸ್ವಲ್ಪ ಐಡಿಯಾ ಕೊಟ್ರೆ ಹೇಳ್ತೀನಿ’ ಎಂದರು. ಇದಕ್ಕೆ ಸಿಟ್ಟಾದ ಸುದೀಪ್, ‘ನಾನು ಇಲ್ಲಿ ಕೇವಲ ಹೇಳೋಕೆ ಮಾತ್ರ ಬರೋದಲ್ಲ. ಹಾಗೆ ಬರೋದಾಗಿದ್ರೆ, ಯೆಸ್ ಆರ್ ನೋ ರೌಂಡ್ ಮಾಡಿ ಮುಗಿಸುತ್ತಿದ್ದೆ’ ಎಂದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.