Pradeep Eshwar: ಶಾಸಕ ಪ್ರದೀಪ್​ ಈಶ್ವರ್​ ಬಿಗ್​ ಬಾಸ್​ಗೆ ಬಂದಿದ್ದರ ಹಿಂದಿನ ಅಸಲಿ ಟ್ವಿಸ್ಟ್​ ಬಹಿರಂಗ

|

Updated on: Oct 09, 2023 | 11:03 PM

Bigg Boss Kannada: ಬಿಗ್​ ಬಾಸ್​ ಮನೆಗೆ ಪ್ರದೀಪ್​ ಈಶ್ವರ್​ ಬಂದಿದ್ದರ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ಆಗಿದೆ. ಶಾಸಕ ಆಗಿರುವುದರಿಂದ ಅವರು ಇಂಥ ಶೋಗೆ ಬಂದಿದ್ದಕ್ಕೆ ಅನೇಕರು ವಿರೋಧ ವ್ಯಕ್ತಪಡಿಸಿದ್ದುಂಟು. ಅವರು ನಿಜವಾಗಿಯೂ ಸ್ಪರ್ಧಿಸುತ್ತಿದ್ದಾರೋ ಇಲ್ಲವೋ ಎಂಬ ಬಗ್ಗೆ ಕೆಲವರಿಗೆ ಅನುಮಾನ ಮೂಡಿತ್ತು. ಆ ಬಗ್ಗೆ ಈಗ ಸ್ಪಷ್ಟ ಚಿತ್ರಣ ಸಿಕ್ಕಿದೆ.

Pradeep Eshwar: ಶಾಸಕ ಪ್ರದೀಪ್​ ಈಶ್ವರ್​ ಬಿಗ್​ ಬಾಸ್​ಗೆ ಬಂದಿದ್ದರ ಹಿಂದಿನ ಅಸಲಿ ಟ್ವಿಸ್ಟ್​ ಬಹಿರಂಗ
ಪ್ರದೀಪ್​ ಈಶ್ವರ್​
Follow us on

ಒಂದು ದಿನ ತಡವಾಗಿ ಪ್ರದೀಪ್​ ಈಶ್ವರ್​ ಅವರು ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ (Bigg Boss Kannada Season 10) ಶೋಗೆ ಎಂಟ್ರಿ ನೀಡಿದರು. ‘ನಾನು ಈ ಶೋನಲ್ಲಿ ಸ್ಪರ್ಧಿಸುತ್ತಿರುವುದು ಖುಷಿ ನೀಡಿದೆ’ ಎಂದು ಅವರು ಮನೆಯೊಳಗೆ ಬಂದ ಕೂಡಲೇ ಹೇಳಿದರು. ಆದರೆ ಅವರು ಬಂದಿರುವುದು ಸ್ಪರ್ಧಿಯಾಗಿ ಅಲ್ಲ ಎಂಬುದು ಈಗ ಬಹಿರಂಗ ಆಗಿದೆ. ತಾವು ಕೇವಲ ಅತಿಥಿಯಾಗಿ ಬಂದಿರುವುದು ಎಂದು ಪ್ರದೀಪ್​ ಈಶ್ವರ್​ (Pradeep Eshwar) ಹೇಳಿದ್ದಾರೆ. ಅವರು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಆಗಿರುವುದರಿಂದ ಬಿಗ್​ ಬಾಸ್​ಗೆ ಬಂದಿದ್ದರ ಬಗ್ಗೆ ಅನೇಕರು ವಿರೋಧ ವ್ಯಕ್ತಪಡಿಸಿದ್ದುಂಟು. ಆದರೆ ಈಗ ಅಸಲಿ ವಿಷಯ ಏನು ಎಂಬುದನ್ನು ಬಿಗ್ ಬಾಸ್ (Bigg Boss Kannada)​ ಮನೆಯಲ್ಲಿ ರಿವೀಲ್​ ಮಾಡಲಾಗಿದೆ.

‘ತಮಾಷೆಗೆ ಮಾಡಿದ ಪ್ರ್ಯಾಂಕ್​ ಇದು. ನೀವು ಮೊದಲ ಅತಿಥಿಯಾಗಿ ಬಿಗ್​ ಬಾಸ್​ ಮನೆಗೆ ಬಂದಿದ್ದೀರಿ’ ಎಂದು ಪ್ರದೀಪ್​ ಈಶ್ವರ್​ಗೆ ಬಿಗ್​ ಬಾಸ್​ ಹೇಳಿದರು. ಅದನ್ನು ಕೇಳಿದ ಬಳಿಕ ಸ್ಪರ್ಧಿಗಳಿಗೆ ಅಚ್ಚರಿ ಆಯಿತು. ಪ್ರದೀಪ್​ ಈಶ್ವರ್​ ಬಂದಿದ್ದಾರೆ ಎಂದಾಗ ಕೆಲವು ಅಭ್ಯರ್ಥಿಗಳಿಗೆ ಶಾಕ್​ ಆಗಿತ್ತು. ಆದರೆ ಇನ್ನೂ ಕೆಲವರಿಗೆ ಅನುಮಾನ ಮೂಡಿತ್ತು. ಹಾಲಿ ಶಾಸಕರು ಹೀಗೆಲ್ಲ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ ಎಂದು ಅನೇಕರು ಊಹಿಸಿದರು. ಅದು ನಿಜವಾಗಿದೆ.

ಇದನ್ನೂ ಓದಿ: Tukali Santhosh: ‘ತುಕಾಲಿ ಅಂತ ಕರೆಯೋದು ಸರಿ ಎನಿಸುತ್ತಿಲ್ಲ’; ಸಂತೋಷ್​ ಹೆಸರಿಗೆ ಬಿಗ್​ ಬಾಸ್​ ತಕರಾರು

ರಾಜಕಾರಣಿ ಆಗಿ ಅಲ್ಲದೇ ಮೋಟಿವೇಷನಲ್​ ಸ್ಪೀಕರ್ ಆಗಿ ಪ್ರದೀಪ್​ ಈಶ್ವರ್​ ಅವರು ಗುರುತಿಸಿಕೊಂಡಿದ್ದಾರೆ. ಬಿಗ್​ ಬಾಸ್​ ಮನೆಯಲ್ಲೂ ಅವರು ಅದೇ ಕೆಲಸ ಮಾಡಿದ್ದಾರೆ. ಎಲ್ಲ ಸ್ಪರ್ಧಿಗಳನ್ನು ಎದುರುಗಡೆ ಕೂರಿಸಿಕೊಂಡು ಪ್ರೇರಣೆಯ ಮಾತುಗಳನ್ನು ಹೇಳಿದ್ದಾರೆ. ‘ಇಲ್ಲಿ ಇರುವ ಯಾವ ಸ್ಪರ್ಧಿಗಳ ಬಗ್ಗೆ ನಿಮಗೆ ಒಳ್ಳೆಯ ಮತ್ತು ಕೆಟ್ಟ ಇಂಪ್ರೆಷನ್​ ಇದೆ’ ಎಂದು ಪ್ರಶ್ನೆ ಕೇಳಿ ಎಲ್ಲರಿಂದ ಉತ್ತರ ಪಡೆದುಕೊಂಡರು. ಪ್ರದೀಪ್​ ಈಶ್ವರ್​ ಅವರು ಬಂದಿದ್ದಕ್ಕೆ ತುಕಾಲಿ ಸಂತೋಷ್​ ಅವರು ಹೆಚ್ಚು ಖುಷಿಪಟ್ಟರು. ‘ನಾನು ಕೂಡ ನಿಮ್ಮ ಊರಿನವರೇ’ ಎಂದು ಸಿರಿ ಅವರು ಹೇಳಿದ್ದಕ್ಕೆ, ‘ಓಹ್​.. ನೀವು ನಮ್ಮ ಮತದಾರರು’ ಎಂದು ಪ್ರದೀಪ್​ ಈಶ್ವರ್​ ನಮಸ್ಕಾರ ಮಾಡಿದರು.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಲ್ಲಿ ನೈಜೀರಿಯಾ ಕನ್ನಡಿಗ ಮೈಕೆಲ್​ ಅಜಯ್​; ಏನು ಇವರ ಹಿನ್ನೆಲೆ?

ಬಿಗ್​ ಬಾಸ್​ ಆಟ ಈಗಷ್ಟೇ ಆರಂಭ ಆಗಿದೆ. ಈಗತಾನೇ ಟಾಸ್ಕ್​ಗಳನ್ನು ನೀಡಲು ಪ್ರಾರಂಭಿಸಲಾಗಿದೆ. ಒಬ್ಬರನ್ನು ಇನ್ನೊಬ್ಬರು ಅರ್ಥ ಮಾಡಿಕೊಳ್ಳಲು ಆರಂಭಿಸಿದ್ದಾರೆ. ದಿನ ಕಳೆದಂತೆ ದೊಡ್ಮನೆಯ ವಾತಾವರಣ ಬದಲಾಗಲಿದೆ. ಇದು 10ನೇ ಸೀಸನ್​ ಆದ್ದರಿಂದ ಈ ಬಾರಿ ಸಾಕಷ್ಟು ವಿಶೇಷತೆಗಳು ಇವೆ. ಹೊಸ ಹೊಸ ನಿಯಮಗಳನ್ನು ಪರಿಚಯಿಸಲಾಗುತ್ತಿದೆ. ‘ಜಿಯೋ ಸಿನಿಮಾ’ ಒಟಿಟಿಯಲ್ಲಿ ಈ ಶೋ ಉಚಿತವಾಗಿ ಪ್ರಸಾರ ಕಾಣುತ್ತಿದೆ. ಕಿಚ್ಚ ಸುದೀಪ್​ ಅವರ ನಿರೂಪಣೆ ಎಲ್ಲರಿಗೂ ಇಷ್ಟ ಆಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.