‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಒಂದು ಅಚ್ಚರಿಯ ಬೆಳವಣಿಗೆ ನಡೆದಿದೆ. ಶೋಭಾ ಶೆಟ್ಟಿ ಅವರು ಜನರ ವೋಟ್ ಪಡೆದು ಸೇವ್ ಆದರೂ ದೊಡ್ಮನೆಯಿಂದ ಹೊರ ಹೋಗುವ ನಿರ್ಧಾರ ಮಾಡಿದ್ದಾರೆ. ತೆಲುಗು ಬಿಗ್ ಬಾಸ್ನಲ್ಲಿ ಕೂಗಾಡಿಕೊಂಡಿದ್ದ ಅವರು ಕನ್ನಡ ಬಿಗ್ ಬಾಸ್ಗೆ ಬಂದು ಇಷ್ಟೊಂದು ವೀಕ್ ಏಕೆ ಆದರು ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿತ್ತು. ಕೊನೆಗೂ ಅದಕ್ಕೆ ಉತ್ತರ ಸಿಕ್ಕಿದೆ. ಸುದೀಪ್ ಎದುರು ಅವರು ಈ ವಿಚಾರ ಹೇಳಿಕೊಂಡಿದ್ದಾರೆ.
ತೆಲುಗು ಬಿಗ್ ಬಾಸ್ನಲ್ಲಿ ಶೋಭಾ ಶೆಟ್ಟಿ ಹಲ್ಚಲ್ ಎಬ್ಬಿಸಿದ್ದರು. ಕೂಗಾಡಿಕೊಂಡಿದ್ದ ಅವರು, ಎಲ್ಲರ ಬಾಯಿ ಮುಚ್ಚಿಸಿದ್ದರು. ವಿನ್ ಆಗೋ ಅವಕಾಶ ಅವರಿಗೆ ಸಿಕ್ಕಿರಲಿಲ್ಲ. ಕನ್ನಡ ಬಿಗ್ ಬಾಸ್ಗೆ ಬಂದ ಮೊದಲ ವಾರ ಮಾತ್ರ ಅವರು ಕೂಗಾಟ ನಡೆಸಿದ್ದರು. ಮಂಜು ವಿರುದ್ಧ ಅವರು ಸಿಟ್ಟಾಗಿದ್ದರು. ಆದರೆ, ದಿನ ಕಳೆದಂತೆ ಅವರು ಡಲ್ ಆದರು. ಹೆಚ್ಚು ಕಾಣಿಸಿಕೊಳ್ಳಲೇ ಇಲ್ಲ. ಆದರೆ, ಈಗ ಅವರು ದೊಡ್ಮನೆಯಿಂದ ಹೊರ ಹೋಗುವ ನಿರ್ಧಾರ ಮಾಡಿದ್ದಾರೆ. ಇದಕ್ಕೆ ಕಾರಣ ಕೂಡ ತಿಳಿಸಿದ್ದಾರೆ.
‘ನನಗೆ ಅನಾರೋಗ್ಯ ಸಮಸ್ಯೆ ಆಗಿದೆ. ನನ್ನ ಕಾಲು ಸಹಕರಿಸುತ್ತಿಲ್ಲ’ ಎಂದು ಹೇಳುತ್ತಾ ಶೋಭಾ ಶೆಟ್ಟಿ ಅವರು ಕಣ್ಣೀರು ಹಾಕಿದರು. ಸುದೀಪ್ ಅವರು ಸಮಾಧಾನ ಮಾಡಿ ಅವರಿಗೆ ಧೈರ್ಯ ತುಂಬಿದರು. ಇದರಿಂದ ಮನಸ್ಸು ಬದಲಿಸಿದ ಶೋಭಾ ಶೆಟ್ಟಿ ನಂತರ ಮತ್ತೆ ಪ್ಲೇಟ್ ಬದಲಿಸಿದರು. ‘ನಾನು ಹೋಗುತ್ತೇನೆ’ ಎಂದು ಹಠ ಹಿಡಿದು ಕುಳಿತರು.
ಇದನ್ನೂ ಓದಿ: ನನ್ನನ್ನು ಬಿಟ್ಟುಬಿಡಿ ಎಂದು ಕೈ ಮುಗಿದು ಕೇಳಿಕೊಂಡ ಶೋಭಾ ಶೆಟ್ಟಿ
ಶೋಭಾ ಶೆಟ್ಟಿ ಅವರು ಮನೆ ಬಿಟ್ಟು ಹೋಗುವ ನಿರ್ಧಾರ ತೆಗೆದುಕೊಂಡಿರೋದು ಅನಾರೋಗ್ಯ ಕಾರಣದಿಂದಲೇ ಎಂದು ಹೇಳಲಾಗುತ್ತಿದೆ. ಟಾಸ್ಕ್ ಆಡುವಾಗ ಬಿದ್ದು ಅವರ ಕಾಲಿಗೆ ಪೆಟ್ಟಾಗಿತ್ತು. ಈ ಕಾರಣಕ್ಕೆ ಅವರು ಹೊರಹೋಗುವ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಅಂದಹಾಗೆ, ಈವರೆಗೆ ಅವರು ದೊಡ್ಮನೆಯಿಂದ ಹೊರಕ್ಕೆ ಹೋಗೋದನ್ನು ತೋರಿಸಿಲ್ಲ. ಅವರು ದೊಡ್ಮನೆಯಲ್ಲಿ ಉಳಿದುಕೊಂಡರೋ ಅಥವಾ ಹೋದರೋ ಎನ್ನವು ವಿಚಾರ ಇಂದಿನ (ಡಿಸೆಂಬರ್ 2) ಎಪಿಸೋಡ್ನಲ್ಲಿ ತಿಳಿಯಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.