ಹೆಣ್ಮಕ್ಕಳಿಗೆ ಗಿಲ್ಲಿ ಟಾರ್ಚರ್? ಪೊಲೀಸ್ ಆಯುಕ್ತರಿಗೆ ಪತ್ರ ಬರೆದ ಮಹಿಳಾ ಆಯೋಗ

‘ಬಿಗ್ ಬಾಸ್ ಕನ್ನಡ ಸೀಸನ್ 12’ ಸ್ಪರ್ಧಿ ಗಿಲ್ಲಿ ನಟ ವಿರುದ್ಧ ಹೆಚ್.ಸಿ. ಕುಶಲಾ ಅವರು ದೂರು ನೀಡಿದ್ದಾರೆ. ಕುಶಲಾ ನೀಡಿದ ದೂರನ್ನು ಆಧರಿಸಿ ಮಹಿಳಾ ಆಯೋಗವು ಬೆಂಗಳೂರು ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದೆ. ಪರಿಶೀಲನೆ ನಡೆಸಿ, ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಪೊಲೀಸರಿಗೆ ಮಹಿಳಾ ಆಯೋಗವು ಪತ್ರ ಬರೆದಿದೆ.

ಹೆಣ್ಮಕ್ಕಳಿಗೆ ಗಿಲ್ಲಿ ಟಾರ್ಚರ್? ಪೊಲೀಸ್ ಆಯುಕ್ತರಿಗೆ ಪತ್ರ ಬರೆದ ಮಹಿಳಾ ಆಯೋಗ
Kushala, Gilli Nata

Updated on: Nov 18, 2025 | 5:59 PM

ಗಿಲ್ಲಿ ನಟ ಬಿಗ್ ಬಾಸ್ (Bigg Boss Kannada 12) ಮನೆಯಲ್ಲಿ ಹೆಣ್ಮಕ್ಕಳಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ಕಲಾವಿದೆ ಕುಶಲಾ ಅವರು ಆರೋಪಿಸಿದ್ದಾರೆ. ಹಾಗಾಗಿ ಅವರು ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಈ ದೂರನ್ನು ಆಧರಿಸಿ ಪೊಲೀಸ್ ಆಯುಕ್ತರಿಗೆ ಮಹಿಳಾ ಆಯೋಗ (Women’s Commission) ಪತ್ರ ಬರೆದಿದೆ. ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯಿಸಿ ಮಹಿಳಾ ಆಯೋಗದಿಂದ ಪತ್ರ ಬರೆಯಲಾಗಿದೆ. ತಾವು ನೀಡಿದ ದೂರಿನ ಬಗ್ಗೆ ಕಲಾವಿದೆ ಕುಶಲಾ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಗಿಲ್ಲಿ ನಟ (Gilli Nata) ಬಿಗ್ ಬಾಸ್ ಕಾರ್ಯಕ್ರಮಕ್ಕೆ ಬಂದಿರುವುದೇ ಹೆಣ್ಮಕ್ಕಳಿಗೆ ಟಾರ್ಚರ್ ನೀಡಲು ಎಂದು ಕುಶಲಾ ಹೇಳಿದ್ದಾರೆ.

‘ಗಿಲ್ಲಿ ನಟ ಒಬ್ಬ ಹಾಸ್ಯ ಕಲಾವಿದ. ಅಂದರೆ ಕಾಮಿಡಿಯನ್. ಇವರಿಗೆ ಕಾಮಿಡಿ ಎಂದರೆ ಏನು ಅರ್ಥ? ಕಾಮಿಡಿ ಮಾಡಿದ್ದನ್ನು ನೋಡಿ ನಕ್ಕರೆ ಸ್ವಲ್ಪ ರಿಲ್ಯಾಕ್ಸ್ ಆಗಬೇಕು. ಆದರೆ ಬಿಗ್ ಬಾಸ್ ಶೋನಲ್ಲಿ ಆ ರೀತಿ ಇಲ್ಲ. ಅಲ್ಲಿ ಗಿಲ್ಲಿಯನ್ನು ಬಿಟ್ಟಿರುವುದೇ ಹೆಣ್ಮಕ್ಕಳಿಗೆ ಟಾರ್ಚರ್ ನೀಡಲು. ಹೆಣ್ಮಕ್ಕಳಿಗೆ ಟಾರ್ಚರ್ ಮಾಡಿ 50 ಲಕ್ಷ ತೆಗೆದುಕೊಂಡು ಹೋಗು ಎಂಬ ಒಪ್ಪಂದದಲ್ಲಿ ಅವರು ಬಂದಿದ್ದಾರೆ ಅಂತ ನಮಗೆ ಅನಿಸುತ್ತಿದೆ’ ಎಂದಿದ್ದಾರೆ ಕುಶಲಾ.

‘ರಿಷಾ ಸ್ನಾನಕ್ಕೆ ಹೋಗಿ ಎರಡು ನಿಮಿಷ ಆದಾಗ ಬಕೆಟ್ ಕೊಡುವಂತೆ ಗಿಲ್ಲಿ ಅವಸರ ಮಾಡಿದರು. ಹೆಣ್ಮಕ್ಕಳು ಸ್ನಾನ ಮಾಡಿಕೊಂಡು ತಕ್ಷಣಕ್ಕೆ ಬರೋಕೆ ಆಗಲ್ಲ. ರಿಷಾ ಬರುವುದರೊಳಗೆ ಬೇಕಂತಲೇ ಆಕೆಯ ಬಟ್ಟೆ ತೆಗೆದು ಬಾತ್​ ರೂಮ್​​ನಲ್ಲಿ ಹಾಕಿದ್ದಾರೆ. ಇದು ಎಷ್ಟರಮಟ್ಟಿಗೆ ಸರಿ. ಬಟ್ಟೆ ಮುಟ್ಟಲು ಅಧಿಕಾರ ಕೊಟ್ಟವರು ಯಾರು? ಹಾಗಾಗಿ ನಾನು ಗಿಲ್ಲಿ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡುತ್ತಿದ್ದೇನೆ’ ಎಂದು ಕುಶಲಾ ಹೇಳಿದ್ದಾರೆ.

‘ಇದು ಬರೀ ಗಿಲ್ಲಿಯದ್ದು ಮಾತ್ರವಲ್ಲ. ಹೆಣ್ಮಕ್ಕಳನ್ನು ಟಾಂಟ್ ಮಾಡುವುದಕ್ಕಾಗಿಯೇ ಶುರು ಮಾಡಿರುವ ಬಿಗ್ ಬಾಸ್ ಇದು. ‘ಗಿಲ್ಲಿ ಬಿಗ್ ಬಾಸ್ ಕಾಮಿಡಿಯನ್ ಶೋ’ ಅಂತ ಹೆಸರು ಬದಲಾಯಿಸಿಕೊಳ್ಳಲಿ. ಅಶ್ವಿನಿ ಗೌಡ ಮಾತನಾಡುವುದು ನೋಡಿದರೆ ಹೆಣ್ಮಕ್ಕಳಿಗೆ ಸಂದೇಶ ಸಿಗುತ್ತದೆ. ಆದರೆ ಗಿಲ್ಲಿ ಏನು ಸಂದೇಶ ಕೊಡುತ್ತಿದ್ದಾನೆ. ಅವನನ್ನು ಯಾವ ಮಾನದಂಡದ ಮೇಲೆ ಇವರು ಇಟ್ಟುಕೊಂಡಿದ್ದಾರೆ’ ಎಂದು ಕುಶಲಾ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಕಾವ್ಯಾ ಶೈವ ಜೊತೆ ಮತ್ತೆ ಗಿಲ್ಲಿ ನಟ ಕಿರಿಕ್; ಈ ಬಾರಿ ಗಂಭೀರ

‘ಸುದೀಪ್ ಬಂದು ಪ್ರತಿ ಬಾರಿ ಕ್ಷಮೆ ಕೇಳಿಸಿ ಹೋಗುತ್ತಾರೆ. ಹೊರಗಡೆ ಅಷ್ಟು ಹೋರಾಟ ಮಾಡುವ ಅಶ್ವಿನಿ ಗೌಡ ಅವರು ಬಿಗ್ ಬಾಸ್ ಮನೆಯಲ್ಲಿ ಯಾಕೆ ಸುಮ್ಮನೆ ಇದ್ದಾರೆ ಗೊತ್ತಾ? ಬಿಗ್ ಬಾಸ್ ಶೋ ಮತ್ತು ಅದರ ನಿರೂಪಕ ಸುದೀಪ್ ಅವರಿಗೆ ಅಶ್ವಿನಿ ಮರ್ಯಾದೆ ಕೊಡುತ್ತಿದ್ದಾರೆ. ಇಲ್ಲಾ ಅಂದಿದ್ದರೆ ಬಿಗ್ ಬಾಸ್ ಶೋನಿಂದ ಆಚೆ ಬರುವ ಸಾಮರ್ಥ್ಯ ಅವರಿಗೆ ಇದೆ’ ಎಂದು ಕುಶಲಾ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.