
ಬಿಗ್ ಬಾಸ್ (Bigg Boss) ಮನೆಯಲ್ಲಿ ಈ ವಾರ ಗಿಲ್ಲಿ ನಟ ಅವರು ದೊಡ್ಡ ತಪ್ಪು ಮಾಡಿದ್ದರು ಎಂದೇ ಹೇಳಬಹುದು. ಬಂದ ಅತಿಥಿಗಳನ್ನು ಸಾಕಷ್ಟು ಅವಮಾನಿಸಿದ್ದನ್ನು ನೀವು ನೋಡಿರಬಹುದು. ‘ಎಲ್ಲರಿಗೂ ಒಳ್ಳೆಯ ಆತಿಥ್ಯ ನೀಡಬೇಕು’ ಎಂದು ಬಿಗ್ ಬಾಸ್ ಆದೇಶವನ್ನು ನೀಡಿದ್ದರು. ಆದರೆ, ಗಿಲ್ಲಿ ನಟ ಅತಿರೇಕ ಮಾಡಿದ್ದರು. ಅತಿಥಿಯಾಗಿ ಬಂದವರಿಗೆ ಅವಮಾನ ಮಾಡಿದ್ದರು. ಈ ಬಗ್ಗೆ ವೀಕೆಂಡ್ನಲ್ಲಿ ಚರ್ಚೆ ಆಗಿದೆ. ಈ ವೇಳೆ ಸುದೀಪ್ ಒಂದಷ್ಟು ವಿಷಯಗಳನ್ನು ಸರಿಪಡಿಸಿದರು.
ಮಂಜು ಮದುವೆ ವಿಷಯ ಬಂದಾಗ ಎಷ್ಟನೇ ಮದುವೆ ಎಂದು ಕೇಳಿದರು ಗಿಲ್ಲಿ. ಆ ಬಳಿಕ ‘ಬಿಟ್ಟಿ ತಿನ್ನೋಕೆ ಬಂದಿದ್ದೀರಿ’ ಎಂದೆಲ್ಲ ಹೇಳಿದರು.ಇದು ಮನೆಗೆ ಬಂದ ಅತಿಥಿಗಳಿಗೆ ನಿಯಂತ್ರಿಸೋಕೆ ಸಾಧ್ಯವಾಗಲೇ ಇಲ್ಲ. ಇಬ್ಬರ ಮಧ್ಯೆ ಸಾಕಷ್ಟು ಕಿತ್ತಾಟ ನಡೆಯಿತು. ಇದರ ವಿಟಿಯನ್ನು ಸುದೀಪ್ ತೋರಿಸಿದರು. ಆ ಬಳಿಕ ಸುದೀಪ್ ಅವರು ಬುದ್ಧಿವಾದ ಹೇಳಿದರು. ಆಗ ಗಿಲ್ಲಿ ಅವರು ಸೈಲೆಂಟ್ ಆದರು.
ಏನೇ ತಪ್ಪು ಎತ್ತಿ ತೋರಿಸಿದರೂ ಗಿಲ್ಲಿ ಅದನ್ನು ಒಪ್ಪಿಕೊಂಡರು. ‘ನನ್ನದು 20 ಪರ್ಸೆಂಟ್ ಸರಿ ಇತ್ತು. 80 ಪರ್ಸೆಂಟ್ ತಪ್ಪು ಇತ್ತು’ ಎಂದು ಗಿಲ್ಲಿ ಹೇಳಿದರು. ‘ಹಳೆಯ ಸೀಸನ್ ಸ್ಪರ್ಧಿಗಳು ನಿಯಂತ್ರಿಸೋಕೆ ಬಂದಿದ್ದು’ ಎಂಬ ಮಾತಿದೆ. ಇದಕ್ಕೆ ಸುದೀಪ್ ಸ್ಪಷ್ಟನೆ ಕೊಟ್ಟರು.
‘ನಿಮ್ಮ ಹಾಗೂ ಕಲರ್ಸ್ ಮಧ್ಯೆ ಫೆಬ್ರವರಿಯಲ್ಲೇ ಒಪ್ಪಂದ ಆಗಿದೆ. ನೀವು ಒಳ್ಳೆಯ ಸ್ಪರ್ಧಿ ಎಂದು ಕಲರ್ಸ್ ಆಯ್ಕೆ ಮಾಡಿದೆ. ನಿಮ್ಮನ್ನು ನಿಯಂತ್ರಿಸಿ ಏನೂ ಮಾಡಲು ಸಾಧ್ಯವಿಲ್ಲ. ನೀವು ಒಳ್ಳೆಯ ಆಟ ಆಡುತ್ತಿದ್ದೀರಿ ಎಂದರೆ ವಾಹಿನಿಗೆ ನಷ್ಟ ಏನು’ ಎಂದು ಸುದೀಪ್ ಕೇಳಿದರು.
ಇದನ್ನೂ ಓದಿ: ಕನ್ನಡ ನಿಘಂಟಿಗೆ ಹೊಸ ಶಬ್ದ ಸೇರಿಸಿದ್ರಿ; ಬರ್ತಿದ್ದಂತೆ ಧ್ರುವಂತ್ಗೆ ಕ್ಲಾಸ್ ತೆಗೆದುಕೊಂಡ ಸುದೀಪ್
ಆ ಬಳಿಕ ಗಿಲ್ಲಿಗೆ ಸುದೀಪ್ ಅವರು ಕಿವಿಮಾತು ಹೇಳಿದರು. ‘ನೀವು ಬೆಳೆದಿದ್ದು ನಾಲಿಗೆಯಿಂದ. ನಾಲಿಗೆಯಿಂದ ಇಲ್ಲಿವರೆಗೆ ಬಂದಿದ್ದೀರಿ. ನಾಲಿಗೆಯಿಂದಲೇ ನೀವು ಹಾಳಾಗಬಹುದು. ಎಚ್ಚರಿಕೆ ಇರಲಿ’ ಎಂದರು ಸುದೀಪ್.
‘ಆರಂಭದಲ್ಲಿ ನೀವು ತಪ್ಪು ಮಾಡಿದಿರಿ. ಅದನ್ನು ತಿದ್ದುಕೊಳ್ಳಬೇಕಿದೆ’ ಎಂದು ಗಿಲ್ಲಿಗೆ ಕಿವಿಮಾತು ಹೇಳಿದರು ಸುದೀಪ್. ಇದನ್ನು ತಿದ್ದಿಕೊಳ್ಳುತ್ತೇನೆ ಎಂದು ಗಿಲ್ಲಿ ಅವರು ಹೇಳಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.