Couple’s Kitchen: ಜುಲೈ 22ರಿಂದ ಜೀ ಕನ್ನಡ ವಾಹಿನಿಯಲ್ಲಿ ‘ಕಪಲ್ಸ್ ಕಿಚನ್’; ಈ ಹೊಸ ಕಾರ್ಯಕ್ರಮದ ವಿಶೇಷ ಏನು?

|

Updated on: Jul 21, 2023 | 6:24 PM

Zee Kannada: ಪ್ರತಿ ಶನಿವಾರ ಮತ್ತು ಭಾನುವಾರ ಮಧ್ಯಾಹ್ನ 12ಕ್ಕೆ ಈ ಶೋ ಪ್ರಸಾರ ಆಗಲಿದೆ. ಮೊದಲ ವೀಕೆಂಡ್​ನ ಗೆಸ್ಟ್​ ಆಗಿ ಮಿಲನಾ ನಾಗರಾಜ್​-ಡಾರ್ಲಿಂಗ್​ ಕೃಷ್ಣ, ಅಭಿಜಿತ್-ರೋಹಿಣಿ ದಂಪತಿಗಳು ಆಗಮಿಸಲಿದ್ದಾರೆ.

Couples Kitchen: ಜುಲೈ 22ರಿಂದ ಜೀ ಕನ್ನಡ ವಾಹಿನಿಯಲ್ಲಿ ‘ಕಪಲ್ಸ್ ಕಿಚನ್’; ಈ ಹೊಸ ಕಾರ್ಯಕ್ರಮದ ವಿಶೇಷ ಏನು?
ಡಾರ್ಲಿಂಗ್​ ಕೃಷ್ಣ, ಮಿಲನಾ ನಾಗರಾಜ್​, ಅಭಿಜಿತ್​, ರೋಹಿಣಿ
Follow us on

ಕನ್ನಡದ ಜನಪ್ರಿಯ ಮನರಂಜನಾ ವಾಹಿನಿ ‘ಜೀ ಕನ್ನಡ’ (Zee Kannada) ಈಗಾಗಲೇ ಅನೇಕ ಬಗೆಯ ರಿಯಾಲಿಟಿ ಶೋಗಳನ್ನು ಪರಿಚಯಿಸಿದೆ. ಧಾರಾವಾಹಿಗಳ ಜೊತೆಯಲ್ಲಿ ರಿಯಾಲಿಟಿ ಶೋಗಳು ಜನಮನ ಗೆದ್ದಿವೆ. ‘ವೀಕೆಂಡ್​ ವಿತ್​ ರಮೇಶ್​’ ಮುಂತಾದ ಕಾರ್ಯಕ್ರಮಗಳು ತಮ್ಮದೇ ಛಾಪು ಮೂಡಿಸಿವೆ. ವೀಕೆಂಡ್​ನ ಮನರಂಜನೆಗಾಗಿ ಈಗ ಹೊಸ ಶೋ ಬರಲಿದೆ. ‘ಕಪಲ್ಸ್​ ಕಿಚನ್​’ (Couple’s Kitchen) ಎಂಬುದು ಈ ಕಾರ್ಯಕ್ರಮದ ಹೆಸರು. ಶೀರ್ಷಿಕೆಯೇ ಸೂಚಿಸುವಂತೆ ಇದು ಅಡುಗೆಗೆ ಸಂಬಂಧಿಸಿದ ಶೋ. ಇದರಲ್ಲಿ ಸೆಲೆಬ್ರಿಟಿ ಕಪಲ್​ ಭಾಗಿ ಆಗಲಿದ್ದಾರೆ. ಅಡುಗೆಯ ಜೊತೆಜೊತೆಗೆ ಮನರಂಜನೆ ಮತ್ತು ಮಾಹಿತಿ ನೀಡುವುದು ಇದರ ಉದ್ದೇಶ. ಖ್ಯಾತ ನಟ, ನಿರೂಪಕ ಮಾಸ್ಟರ್​ ಆನಂದ್​ (Master Anand) ಅವರು ‘ಕಪಲ್ಸ್​ ಕಿಚನ್​’ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.

ಜುಲೈ 22ರಿಂದ ಜೀ ಕನ್ನಡ ವಾಹಿನಿಯಲ್ಲಿ ‘ಕಪಲ್ಸ್ ಕಿಚನ್’ ಶೋ ಆರಂಭ ಆಗಲಿದೆ. ಪ್ರತಿ ಶನಿವಾರ ಮತ್ತು ಭಾನುವಾರ ಮಧ್ಯಾಹ್ನ 12ಕ್ಕೆ ಈ ಕಾರ್ಯಕ್ರಮ ಪ್ರಸಾರ ಆಗಲಿದೆ. ಮೊದಲ ವೀಕೆಂಡ್​ನ ಗೆಸ್ಟ್​ ಆಗಿ ಮಿಲನಾ ನಾಗರಾಜ್​-ಡಾರ್ಲಿಂಗ್​ ಕೃಷ್ಣ, ಅಭಿಜಿತ್-ರೋಹಿಣಿ ದಂಪತಿಗಳು ಆಗಮಿಸಲಿದ್ದಾರೆ. ಅಡುಗೆ ಮಾಡುವುದರ ಜೊತೆಗೆ ತಮ್ಮ ಜೀವನದ ಬಗೆಗಿನ ಕೆಲವು ಸ್ಪೆಷಲ್​ ವಿಷಯಗಳನ್ನು ಈ ಸೆಲೆಬ್ರಿಟಿಗಳು ಹಂಚಿಕೊಳ್ಳಲಿದ್ದಾರೆ.

ಕಿರುತೆರೆಯಲ್ಲಿ ಅಡುಗೆಗೆ ಸಂಬಂಧಿಸಿದಂತೆ ಅನೇಕ ಶೋಗಳು ಈಗಾಗಲೇ ಬಂದು ಹೋಗಿವೆ. ಅದಕ್ಕಿಂತಲೂ ಸ್ವಲ್ಪ ಭಿನ್ನವಾಗಿ ‘ಕಪಲ್ಸ್​ ಕಿಚನ್​’ ಮೂಡಿಬರಲಿದೆ. ಈ ಕಾರ್ಯಕ್ರಮಕ್ಕೆ ಬರುವ ಪ್ರತಿ ಸಲಬ್ರಿಟಿ ಜೋಡಿಯ ಕೈಯಲ್ಲಿ ಹೊಸ ರುಚಿಯನ್ನು ಮಾಡಿಸಲಾಗುತ್ತದೆ. ಅದನ್ನ ಸವಿಯುತ್ತಾ ಅವರ ಲವ್​ ಸ್ಟೋರಿಯನ್ನು, ಮದುವೆಯ ಕಥೆಯನ್ನು ವೀಕ್ಷಕರ ಎದುರು ಎಳೆಎಳೆಯಾಗಿ ಬಿಚ್ಚಿಡಲಾಗುತ್ತದೆ. ಕ್ಯಾಮೆರಾ ಮುಂದೆ ನಿಂತು ನಟಿಸುವ ಸೆಲೆಬ್ರಿಟಿಗಳು ನಿಜ ಜೀವನದಲ್ಲಿ ಸೌಟು ಹಿಡಿದು ನಿಲ್ಲೋದನ್ನು ‘ಕಪಲ್ಸ್​ ಕಿಚನ್​’ ಶೋನಲ್ಲಿ ನೋಡಬಹುದು.

ಇದನ್ನೂ ಓದಿ: ವಿದೇಶಿ ರಿಯಾಲಿಟಿ ಶೋ ‘ಬಿಗ್ ಬ್ರದರ್​’ಗೆ ಅಬ್ದು ರೋಜಿಕ್; ‘ನಮ್ಮನ್ನು ಮರಿಯಬೇಡಿ’ ಎಂದ ಸಲ್ಲು

ಅಡುಗೆ ಮಾಡೋಕೆ ಒಲೆ ಹಚ್ಚಲಾಗುತ್ತದೆ. ಅದೇ ವೇಳೆ ಸೆಲೆಬ್ರಿಟಿಗಳ ಪ್ರೇಮ್​ ಕಹಾನಿ ತೆರೆದುಕೊಳ್ಳುತ್ತದೆ. ಅಡುಗೆಗೆ ಮಸಾಲೆ ಬೀಳುತ್ತಿರುವಾಗಲೇ ತಮ್ಮ ರಿಯಲ್​ ಲೈಫ್​ನ ಸುಂದರವಾದ ಕ್ಷಣವನ್ನ ಅವರು ರಸವತ್ತಾಗಿ ವಿವರಿಸಲಿದ್ದಾರೆ. ಗೃಹಿಣಿಯರಿಗೆ ಮಾತ್ರವಲ್ಲದೇ ಕುಟುಂಬದ ಎಲ್ಲರಿಗೂ ಈ ಕಾರ್ಯಕ್ರಮ ಇಷ್ಟ ಆಗಲಿದೆ. ಹೊಸ ಅಡುಗೆಯ ಬಗ್ಗೆ ತಿಳಿದುಕೊಳ್ಳುವ ಚಾನ್ಸ್​ ಕೂಡ ಈ ಶೋನಲ್ಲಿ ಸಿಗಲಿದೆ. ಈ ಕಾರ್ಯಕ್ರಮಕ್ಕಾಗಿ ವಿಶೇಷ ಸೆಟ್​ ಹಾಕಲಾಗಿದೆ. ಸ್ಪೆಷಲ್​ ಶೆಫ್​ಗಳು ಸಹ ಇದರಲ್ಲಿ ಭಾಗಿ ಆಗಲಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಸೆಲೆಬ್ರಿಟಿಗಳು ಹೊಸ ಅಡುಗೆ ಕಲಿಯಲಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.