
ಜೀ ಕನ್ನಡದಲ್ಲಿ ಹಲವು ರಿಯಾಲಿಟಿ ಶೋಗಳು ಬಂದು ಹೋಗಿವೆ. ಇದರಲ್ಲಿ ಬಹುತೇಕವು ಮೆಚ್ಚುಗೆ ಪಡೆದಿದೆ. ಈಗ ಹೊಸ ರಿಯಾಲಿಟಿ ಶೋ ಜೊತೆ ಬರಲು ಜೀ ಕನ್ನಡ ವಾಹಿನಿ ರೆಡಿ ಆಗಿದೆ. ಅದು ‘ಪ್ಯಾಟೆ ಹುಡುಗೀರ್ ಹಳ್ಳಿ ಲೈಫು’ ಎಂದು ಹೇಳಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಜೀ ಕನ್ನಡ ವಾಹಿನಿ ಪ್ರೋಮೋ ಒಂದನ್ನು ಹಂಚಿಕೊಂಡಿದೆ. ಈ ಪ್ರೋಮೋದಲ್ಲಿ ಹಳ್ಳಿ ಜೀವನ ನಡೆಸಲು ರೆಡಿ ಇರೋ ಮಾಡರ್ನ್ ಹುಡುಗಿಯರಿಗೆ ಆಹ್ವಾನ ನೀಡಲಾಗಿದೆ. ಅಕುಲ್ ಬಾಲಾಜಿ (Akul Balaji) ಶೋನ ನೇತೃತ್ವ ವಹಿಸಲಿದ್ದಾರೆ.
‘ಹಳ್ಳಿ ಬದುಕಿನ ಬವಣೆಗಳನ್ನು ತೆರೆ ಮೇಲೆ ತರೋ ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಶೀಘ್ರದಲ್ಲಿ’ ಎಂದು ಪ್ರೋಮೋಗೆ ಕ್ಯಾಪ್ಶನ್ ನೀಡಲಾಗಿದೆ. ಈ ಮೂಲಕ ವೀಕೆಂಡ್ನಲ್ಲಿ ಮಸ್ತ್ ಮನರಂಜನೆ ನೀಡಲು ಒಂದು ಶೋ ರೆಡಿ ಆಗುತ್ತಿದೆ. ಈ ಶೋಗೆ ಆಡಿಷನ್ ಕೂಡ ನಡೆಯುತ್ತಿದೆ. ಅದರ ವಿವರವನ್ನು ಜೀ ಕನ್ನಡ ವಾಹಿನಿ ಹಂಚಿಕೊಂಡಿದೆ.
ಜುಲೈ 19ರಂದು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಆಡಿಷನ್ ನಡೆಯಲಿದೆ. ಆಡಿಷನ್ನಲ್ಲಿ ಭಾಗವಹಿಸುವವರಿಗೆ ಕೆಲವು ಷರತ್ತುಗಳು ಇವೆ. ನಿಮ್ಮ ವಯಸ್ಸು 18ರಿಂದ 28 ವರ್ಷ ಆಗಿರಬೇಕು. ನೀವು ನಗರದಲ್ಲೇ ಹುಟ್ಟಿ ಬೆಳೆದು, ಸಖತ್ ಮಾಡರ್ನ್ ಆಗಿರಬೇಕು. ಬರುವಾಗ ಆಧಾರ್ ಕಾರ್ಡ್ ಹಾಗೂ ಪಾಸ್ಪೋರ್ಟ್ ಸೈಜ್ ಫೋಟೋ ತರೋಕೆ ಮರೆಯಬೇಡಿ.
‘ನಿಮ್ಮ ಫೇವರಿಟ್ ರಿಯಾಲಿಟಿ ಶೋನಲ್ಲಿ ಅಕುಲ್ ಬರ್ತಿದಾನೆ ಎಂದರೆ ಸುನಾಮಿ-ಸುಂಟರಗಾಳಿ ಎಲ್ಲ ಆಗಲೇಬೇಕು’ ಎಂದು ಅಕುಲ್ ಬಾಲಾಜಿ ಹೇಳಿದ್ದಾರೆ. ಈ ಮೊದಲು ‘ಪ್ಯಾಟೆ ಹುಡುಗೀರ್ ಹಳ್ಳಿ ಲೈಫು’ ಶೋನ ಅಕುಲ್ ಅವರೇ ಹ್ಯಾಂಡಲ್ ಮಾಡಿದ್ದರು. ಈ ಬಾರಿಯೂ ಅವರೇ ನಿರೂಪಕರಾಗಿ ಇರಲಿದ್ದಾರೆ. ಖಡಕ್ ಆಗಿ ಅವರು ಶೋನ ನಡೆಸಿಕೊಡಲಿದ್ದಾರೆ. ಈ ಶೋಗೆ ಇನ್ನೂ ಶೀರ್ಷಿಕೆ ಅಧಿಕೃತವಾಗಿ ಫಿಕ್ಸ್ ಆಗಿಲ್ಲ.
ಇದನ್ನೂ ಓದಿ: ಬಿಗ್ ಬಾಸ್ ಮನೆಯ ವಸ್ತು ಬಳಸಿ ರೆಸಾರ್ಟ್ ಮಾಡಿದ ಅಕುಲ್ ಬಾಲಾಜಿ; ಸುದೀಪ್ ತಬ್ಬಿಬ್ಬು
ಮಾಡರ್ನ್ ಹುಡುಗಿಯರಿಗೆ ಹಳ್ಳಿ ಲೈಫ್ ಬಗ್ಗೆ ಗೊತ್ತಿರುವುದಿಲ್ಲ. ಅಂಥವರನ್ನು ಕರೆತಂದು ಹಳ್ಳಿ ಜೀವನ ತೋರಿಸೋದು ಶೋನ ಉದ್ದೇಶ. ಇದರ ಜೊತೆ ಒಂದಷ್ಟು ಕಾಮಿಡಿ ಹಾಗೂ ಮನರಂಜನೆ ಇರುತ್ತದೆ. ಈ ಶೋ ಯಾವಾಗ ಬರುತ್ತದೆ ಎಂದು ಫ್ಯಾನ್ಸ್ ಎಗ್ಸೈಟ್ ಆಗಿದ್ದಾರೆ. ಈ ಬಗ್ಗೆ ಪೋಸ್ಟ್ನಲ್ಲಿ ಕಮೆಂಟ್ಗಳನ್ನು ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 6:55 am, Wed, 16 July 25