AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್ ಮನೆಯ ವಸ್ತು ಬಳಸಿ ರೆಸಾರ್ಟ್ ಮಾಡಿದ ಅಕುಲ್ ಬಾಲಾಜಿ; ಸುದೀಪ್ ತಬ್ಬಿಬ್ಬು

ಕಿಚ್ಚ ಸುದೀಪ್ ಅವರು ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ, ಬಿಗ್ ಬಾಸ್ ಮನೆಯ ಹಳೆಯ ವಸ್ತುಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಅಕುಲ್ ಬಾಲಾಜಿ ಅವರು ಆ ವಸ್ತುಗಳನ್ನು ಕಡಿಮೆ ಬೆಲೆಗೆ ಖರೀದಿಸಿ, ಅವುಗಳನ್ನು ಬಳಸಿಕೊಂಡು ಒಂದು ರೆಸಾರ್ಟ್ ನಿರ್ಮಿಸಿದ್ದಾರೆ ಎಂದು ಸುದೀಪ್ ಅವರು ಹೇಳಿದ್ದಾರೆ. ಸುದೀಪ್ ಅವರು ಅಕುಲ್ ಅವರ ಬುದ್ಧಿವಂತಿಕೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬಿಗ್ ಬಾಸ್ ಮನೆಯ ವಸ್ತು ಬಳಸಿ ರೆಸಾರ್ಟ್ ಮಾಡಿದ ಅಕುಲ್ ಬಾಲಾಜಿ; ಸುದೀಪ್ ತಬ್ಬಿಬ್ಬು
ಅಕುಲ್-ಸುದೀಪ್
ರಾಜೇಶ್ ಹೆಗಡೆ ದುಗ್ಗುಮನೆ
|

Updated on: Dec 25, 2024 | 12:49 PM

Share

ಬಿಗ್ ಬಾಸ್​ಗಾಗಿ ಕೆಲ ವರ್ಷಗಳ ಹಿಂದೆ ಹೊಸ ಮನೆ ನಿರ್ಮಾಣ ಆಗಿದೆ. ಕಳೆದ ಸೀಸನ್​ನಿಂದ ಹೊಸ ಮನೆಯಲ್ಲೇ ಬಿಗ್ ಬಾಸ್ ರಿಯಾಲಿಟಿ ಶೋ ನಡೆಯುತ್ತಿದೆ. ಹಳೆಯ ಮನೆ ಈಗಲೂ ಹಾಗೆಯೇ ಇದ್ದು, ಅದನ್ನು ಯಾರೂ ಬಳಸುತ್ತಿಲ್ಲ. ಈ ಕಾರಣಕ್ಕೆ ಭೂತ ಬಂಗಲೆ ರೀತಿ ಆಗಿದೆ. ಹಾಗಾದರೆ ಈ ಮನೆಯ ವಸ್ತುಗಳು ಏನಾದವು? ಈ ಬಗ್ಗೆ ಕಿಚ್ಚ ಸುದೀಪ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಅಕುಲ್ ಬಾಲಾಜಿ ಇದನ್ನು ತೆಗೆದುಕೊಂಡು ಹೊಗಿ ರೆಸಾರ್ಟ್ ಮಾಡಿದ್ದಾಗಿ ಸುದೀಪ್ ಹೇಳಿದ್ದಾರೆ.

ಅಕುಲ್ ಬಾಲಾಜಿ ಅವರು ಆ್ಯಂಕರ್ ಆಗಿ ಗುರುತಿಸಿಕೊಂಡಿದ್ದಾರೆ. ಅವರು ಬಿಗ್ ಬಾಸ್​ನಲ್ಲಿ ಸ್ಪರ್ಧಿಸಿದ್ದರು. ಈ ಕಾರಣಕ್ಕೆ ಕಿಚ್ಚ ಸುದೀಪ್ ಜೊತೆ ಅವರಿಗೆ ಒಳ್ಳೆಯ ಬಾಂಧವ್ಯ ಬೆಳೆದಿದೆ. ಅಕುಲ್ ಬಾಲಾಜಿ ಬುದ್ಧಿವಂತಿಕೆಗೆ ಸುದೀಪ್ ಅವರು ಮೆಚ್ಚುಗೆ ಸೂಚಿಸಿದ್ದಾರೆ.

ಇತ್ತೀಚೆಗೆ ಸುದೀಪ್ ಅವರು ‘ಆ್ಯಂಕರ್ ಅನುಶ್ರೀ’ ಯೂಟ್ಯೂಬ್​ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ. ‘ಅವನ ದುಡ್ಡು ಅಂತ ಬಂದಾಗ ಅಕುಲ್ ಬಜೆಟ್​ನಲ್ಲಿ ಜೀವನ ನಡೆಸುತ್ತಾನೆ. ಕಿಚ್ಚ ಬ್ರೋ ಇದನ್ನು ನೋಡಿದ್ರಾ, ಅದನ್ನು ನೋಡಿದ್ರಾ ಎಂದು ಕೇಳ್ತಾನೆ. ಅವನು ಹೇಳೋದು ಹೇಗಿರುತ್ತದೆ ಎಂದರೆ ಅವರೇ ವಸ್ತುವನ್ನು ಕಳುಹಿಸಿಕೊಟ್ಟು ಬಿಡ್ತಾನೇನೋ ಎಂಬ ರೀತಿ ಇರುತ್ತದೆ’ ಎಂದಿದ್ದಾರೆ ಸುದೀಪ್.

‘ಒಂದು ರೆಸಾರ್ಟ್ ಮಾಡಿದೀನಿ ಎಂದು ಅಕುಲ್ ಫೋಟೋ ತೋರಿಸಿದ. ಅದನ್ನು ನೋಡಿದಾಗ ಬಿಗ್ ಬಾಸ್ ಪ್ರಾಪರ್ಟಿಗಳು ಕಂಡವು. ನಾನು ಆ ಬಗ್ಗೆ ಕೇಳಿದೆ’ ಎಂದಿದ್ದಾರೆ ಸುದೀಪ್. ‘ಬಿಗ್ ಬಾಸ್ ಮನೆಗೆ ಹೋದೆ. ಹಳೆಯ ಪ್ರಾಪರ್ಟಿಗಳನ್ನು ಬಳಸುವುದಿಲ್ಲ ಎಂದು ಗೊತ್ತಾದಾಗ ಅಲ್ಲಿ ಹೋಗಿ ಕಡಿಮೆ ಮೊತ್ತಕ್ಕೆ ತೆಗೆದುಕೊಂಡು ಬಂದೆ’ ಎಂದು ಅಕುಲ್ ಉತ್ತರಿಸಿದರಂತೆ.

‘ಇಡೀ ಪ್ರಾಪರ್ಟಿನ ತೆಗೆದುಕೊಂಡು ಹೋಗಿ ರೆಸಾರ್ಟ್​ಗೆ ಹಾಕಿದ್ದಾನೆ. ನಮ್ಮ ಬುಡದಿಂದ ತೆಗೆದುಕೊಂಡು ಹೋಗಿ ರೆಸಾರ್ಟ್​ನೇ ಮಾಡಿದ್ದೀಯಲ್ಲೋ, ನಮಗೆ ಈ ರೀತಿಯ ಐಡಿಯಾಗಳು ಬರಲ್ವಲ್ಲ ಎಂದು ಕೇಳಿದೆ. ಅವನು ಸೂಪರ್ ಸ್ಮಾರ್ಟ್​. ನಂದೇ ಐಟಂ ನಂಗೆ ಮಾರಿ ಹೊಗಿಲ್ಲ ಎಂಬುದು ಖುಷಿಯ ವಿಚಾರ’ ಎಂದು ಸುದೀಪ್ ಹೇಳಿದ್ದಾರೆ.

ಇದನ್ನೂ ಓದಿ: ಬೆಳ್ಳಂಬೆಳಗ್ಗೆ ‘ಮ್ಯಾಕ್ಸ್’ ದರ್ಶನ; ಹೇಗಿದೆ ಸುದೀಪ್ ಸಿನಿಮಾದ ಫಸ್ಟ್ ಹಾಫ್?

ಸುದೀಪ್ ಅವರು ‘ಮ್ಯಾಕ್ಸ್’ ಸಿನಿಮಾ ರಿಲೀಸ್ ಖುಷಿಯಲ್ಲಿ ಇದ್ದಾರೆ.  ಈ ಚಿತ್ರಕ್ಕೆ ಫ್ಯಾನ್ಸ್ ಕಡೆಯಿಂದ ಹಾಗೂ ವಿಮರ್ಶಕರಿಂದ ಪಾಸಿಟಿವ್ ಪ್ರತಿಕ್ರಿಯೆ ಸಿಕ್ಕಿದೆ. ಈ ಚಿತ್ರದ ಪ್ರಚಾರಕ್ಕಾಗಿ ಸುದೀಪ್ ಅವರು ಹಲವು ಕಡೆಗಳಲ್ಲಿ ಸಂದರ್ಶನ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ರಾಜೇಶ್ ಹೆಗಡೆ ದುಗ್ಗುಮನೆ
ರಾಜೇಶ್ ಹೆಗಡೆ ದುಗ್ಗುಮನೆ

ರಾಜೇಶ್ ಹೆಗಡೆ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು
ನಾಳೆ ಮೀಸಲಾತಿ ಪಟ್ಟಿ ಪ್ರಕಟ:ಜಿಲ್ಲಾ-ತಾಲೂಕು ಪಂಚಾಯಿತಿ ಎಲೆಕ್ಷನ್ ಯಾವಾಗ?
ನಾಳೆ ಮೀಸಲಾತಿ ಪಟ್ಟಿ ಪ್ರಕಟ:ಜಿಲ್ಲಾ-ತಾಲೂಕು ಪಂಚಾಯಿತಿ ಎಲೆಕ್ಷನ್ ಯಾವಾಗ?
ಜಂತರ್ ಮಂತರ್ ಪ್ರತಿಭಟನೆ ವೇಳೆ ಮತ್ತೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಜಂತರ್ ಮಂತರ್ ಪ್ರತಿಭಟನೆ ವೇಳೆ ಮತ್ತೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಕೆಪಿಎಸ್​ಸಿ ಹಗರಣ:ಶಿವಶಂಕರಪ್ಪ ಸಾಹುಕಾರ್, ಗೀತಾ ಇಡಿ ಕಸ್ಟಡಿಗೆ
ಕೆಪಿಎಸ್​ಸಿ ಹಗರಣ:ಶಿವಶಂಕರಪ್ಪ ಸಾಹುಕಾರ್, ಗೀತಾ ಇಡಿ ಕಸ್ಟಡಿಗೆ
ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ
ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಎಸ್‌ಐಆರ್ ವಿವಾದ; ಎಫ್‌ಐಆರ್‌ಗಳು ನನಗೆ ಪದಕಗಳಿದ್ದಂತೆ ಎಂದ ರಾಹುಲ್ ಗಾಂಧಿ
ಎಸ್‌ಐಆರ್ ವಿವಾದ; ಎಫ್‌ಐಆರ್‌ಗಳು ನನಗೆ ಪದಕಗಳಿದ್ದಂತೆ ಎಂದ ರಾಹುಲ್ ಗಾಂಧಿ
ಮುಸ್ಲಿಂ ಮತದಾರರ ಹೆಸರು ಡಿಲೀಟ್ ಆರೋಪ
ಮುಸ್ಲಿಂ ಮತದಾರರ ಹೆಸರು ಡಿಲೀಟ್ ಆರೋಪ
ಡೀಸೆಲ್​ ಟ್ಯಾಂಕರ್​​ನಲ್ಲಿ ತಾಂತ್ರಿಕ ದೋಷ, ಬಸ್​ ಸಂಚಾರ ಸ್ಥಗಿತ
ಡೀಸೆಲ್​ ಟ್ಯಾಂಕರ್​​ನಲ್ಲಿ ತಾಂತ್ರಿಕ ದೋಷ, ಬಸ್​ ಸಂಚಾರ ಸ್ಥಗಿತ