AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಿರುತೆರೆ ನಟಿ ಬಾಳಲ್ಲಿ ಬಿರುಗಾಳಿ; ಮುರಿದು ಬಿತ್ತು 22 ವರ್ಷಗಳ ದಾಂಪತ್ಯ

ಹಿಂದಿ ಕಿರುತೆರೆ ನಟಿ ಪಲ್ಲವಿ ರಾವ್ ಅವರು 22 ವರ್ಷಗಳ ದಾಂಪತ್ಯ ಜೀವನಕ್ಕೆ ತೆರೆ ಎಳೆದಿದ್ದಾರೆ. ನಿರ್ದೇಶಕ ಸೂರಜ್ ರಾವ್ ಅವರಿಂದ ಬೇರ್ಪಡುವುದಾಗಿ ಘೋಷಿಸಿದ್ದಾರೆ. ಹೊಂದಾಣಿಕೆಯ ಕೊರತೆಯೇ ವಿಚ್ಛೇದನಕ್ಕೆ ಕಾರಣ ಎಂದು ಪಲ್ಲವಿ ಹೇಳಿದ್ದಾರೆ. ಇವರಿಬ್ಬರಿಗೂ ಇಬ್ಬರು ಮಕ್ಕಳಿದ್ದು, ಮಕ್ಕಳ ಸಾಕುವ ಜವಾಬ್ದಾರಿಯನ್ನು ಪಲ್ಲವಿ ವಹಿಸಿಕೊಳ್ಳಲಿದ್ದಾರೆ.

ಕಿರುತೆರೆ ನಟಿ ಬಾಳಲ್ಲಿ ಬಿರುಗಾಳಿ; ಮುರಿದು ಬಿತ್ತು 22 ವರ್ಷಗಳ ದಾಂಪತ್ಯ
ಪಲ್ಲವಿ ರಾವ್
ರಾಜೇಶ್ ದುಗ್ಗುಮನೆ
|

Updated on: Jul 15, 2025 | 8:56 AM

Share

ಇತ್ತೀಚೆಗೆ ವಿಚ್ಛೇದನ ಅನ್ನೋದು ಸಾಮಾನ್ಯ ಎಂಬಂತಾಗಿ ಬಿಟ್ಟಿದೆ. ಸಿನಿಮಾ ಸೆಲೆಬ್ರಿಟಿಗಳಂತೂ ಈ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳುವುದೇ ಇಲ್ಲ. ಈಗ ಇದಕ್ಕೆ ಹೊಸ ಉದಾಹರಣೆಯೊಂದು ಸಿಕ್ಕಿದೆ. ಹಿಂದಿ ಕಿರುತೆರೆ ನಟಿ ಪಲ್ಲವಿ ರಾವ್ ಅವರು ವಿಚ್ಛೇದನ (Divorce) ಪಡೆದಿಕೊಳ್ಳುತ್ತಿದ್ದಾರೆ. ಅವರ ಪತಿ, ನಿರ್ದೇಶಕ ಸೂರಜ್ ರಾವ್​ ಅವರಿಂದ ಬೇರೆ ಆಗುವ ಘೋಷಣೆ ಮಾಡಿದ್ದಾರೆ. ಇವರ ದಾಂಪತ್ಯಕ್ಕೆ 22 ವರ್ಷ ತುಂಬಿತ್ತು. ಇವರ ಮಧ್ಯೆ ಹೊಂದಾಣಿಕೆ ಮೂಡಿ ಬಂದಿಲ್ಲ.

ಪಲ್ಲವಿ ಅವರು ಸಂದರ್ಶನ ಒಂದರಲ್ಲಿ ಈ ವಿಚಾರದ ಬಗ್ಗೆ ಹೇಳಿಕೊಂಡಿದ್ದಾರೆ. ತಮ್ಮ ವಿಚ್ಛೇದನಕ್ಕೆ ಹೊಂದಾಣಿಕೆ ಸಮಸ್ಯೆ ಕಾರಣ ಎಂದಿದ್ದಾರೆ. ಕಳೆದ ಕೆಲ ವರ್ಷಗಳಿಂದ ಇವರ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಇದ್ದವು. ಇಷ್ಟು ವರ್ಷಗಳ ಕಾಲ ಇದನ್ನು ಸಹಿಸಿಕೊಂಡಿದ್ದರು. ಆದರೆ, ಈಗ ಅವರು ಬೇರೆ ಆಗಲೇಬೇಕು ಎಂದುಕೊಂಡಿದ್ದಾರೆ.

‘ನಮಗೆ 21 ವರ್ಷದ ಮಗಳು ಹಾಗೂ 18 ವರ್ಷದ ಮಗ ಇದ್ದಾನೆ. ನನ್ನ ಹಾಗೂ ಪತಿ ಮಧ್ಯೆ ಹೊಂದಾಣಿಕೆ ತರಲು ಸಾಧ್ಯ ಆಗಲೇ ಇಲ್ಲ. ಕೆಲವೊಮ್ಮೆ ಶಾಂತಿಯುತ ಜೀವನವನ್ನು ಆಯ್ಕೆ ಮಾಡುವುದು ಉತ್ತಮ. ನಾನು ಸೂರಜ್ ಅವರನ್ನು ಗೌರವಿಸುತ್ತೇನೆ ಮತ್ತು ಯಾವಾಗಲೂ ಅವನಿಗೆ ಒಳ್ಳೆಯದನ್ನು ಬಯಸುತ್ತೇನೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ
Image
ಮುಂದಿನ ಮೂರು ವರ್ಷ ರಜನಿಕಾಂತ್ ಬ್ಯುಸಿ; ಮತ್ತೆ ಮೂರು ಸಿನಿಮಾ ಫೈನಲ್
Image
ಪಾತ್ರ ಕೊಡದ್ದಕ್ಕೆ ಸಿಟ್ಟು; ಯಶಸ್ಸು ಕೊಟ್ಟ ಬನ್ಸಾಲಿ ಮರೆತ ರಣವೀರ್ ಸಿಂಗ್
Image
ರಶ್ಮಿಕಾ ಸಿನಿಮಾ ಪ್ರಚಾರಕ್ಕೆ ಸಹಾಯ ಮಾಡಲಿದ್ದಾರೆ ಜೂ.ಎನ್​ಟಿಆರ್​-ಹೃತಿಕ್
Image
‘ರಾಮಾಯಣ’ ಬಜೆಟ್ ನಾಲ್ಕು ಸಾವಿರ ಕೋಟಿ; ಯಶ್ ಪಾಲೆಷ್ಟು?

ಸೂರಜ್ ರಾವ್ ಅವರು ಹಾಗೂ ಪಲ್ಲವಿ ಸೆಟ್ ಒಂದರಲ್ಲಿ ಭೇಟಿ ಆದರು. ಇಬ್ಬರ ಮಧ್ಯೆ ಪರಿಚಯ ಬೆಳೆದು, ಪ್ರೀತಿ ಮೂಡಿತು. 2003ರಲ್ಲಿ ಇವರು ವಿವಾಹ ಆದರು. ಆಪ್ತರು ಮಾತ್ರ ಮದುವೆಗೆ ಹಾಜರಿ ಹಾಕಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳು. ಈಗ ಮಕ್ಕಳನ್ನು ಸಾಕುವ ಜವಾಬ್ದಾರಿಯನ್ನು ಪಲ್ಲವಿ ಅವರೇ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:  ನಯನತಾರಾ-ವಿಘ್ನೇಶ್ ವಿಚ್ಛೇದನ ನಟಿಯ ಪ್ರತಿಕ್ರಿಯೆ ಏನಿತ್ತು?

ಪಲ್ಲವಿ ಅವರು ಎರಡು ದಶಕಗಳಿಂದ ಸಿನಿಮಾ ರಂಗದಲ್ಲಿ ತೊಡಗಿಕೊಂಡಿದ್ದಾರೆ. ‘ಪಾಂಡ್ಯ ಸ್ಟೋರ್, ‘ಯೇ ಝುಕಿ ಝುಕಿ ಸಿ ನಜರ್’, ‘ಖಯಾಮತ್ ಸೇ ಖಯಾಮತ್’, ‘ದಿಯಾ ಔರ್ ಬಾತಿ ಹಮ್’, ಧಾರಾವಾಹಿಗಳಲ್ಲಿ ನಟಿಸಿದ್ದಾರೆ.  ಸೂರಜ್ ಅವರು ಕಿರುತೆರೆ ಧಾರಾವಾಹಿಗಳನ್ನು ನಿರ್ದೇಶನ ಮಾಡುತ್ತಿದ್ದಾರೆ. ‘ಕ್ಯು ಕಿ ಸಾಸ್ ಬಿ ಖಬಿ ಬಹು ಥಿ’, ‘ಶಕ ಲಕ ಬೂಮ್ ಬೂಮ್’ ಮೊದಾಲಾದ ಶೋಗಳನ್ನು ನಿರ್ದೇಶನ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ