Taraka Ratna Health: ಹೆಲ್ತ್​ ಬುಲೆಟಿನ್ ರಿಲೀಸ್, ನಂದಮೂರಿ ತಾರಕ ರತ್ನ ಆರೋಗ್ಯ ಸ್ಥಿತಿ ಗಂಭೀರ

| Updated By: ರಮೇಶ್ ಬಿ. ಜವಳಗೇರಾ

Updated on: Jan 28, 2023 | 4:35 PM

ಆಂಧ್ರ ಪ್ರದೇಶದ ಕುಪ್ಪಂನಲ್ಲಿ ನಡೆದ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ವೇಳೆ ದಿಢೀರ್ ಕುಸಿದುಬಿದ್ದಿದ್ದ ತೆಲುಗು ನಟ ಹಾಗೂ ರಾಜಕಾರಣಿ ನಂದಮೂರಿ ತಾರಕರತ್ನ ಅವರ ಆರೋಗ್ಯದ ಬಗ್ಗೆ ಬೆಂಗಳೂರಿನ ನಾರಾಯಣ ಹೃದಯಾಲಯ ಹೆಲ್ತ್​ ಬುಲೆಟಿನ್​ ಬಿಡುಗಡೆ ಮಾಡಿದೆ.

Taraka Ratna Health: ಹೆಲ್ತ್​ ಬುಲೆಟಿನ್ ರಿಲೀಸ್, ನಂದಮೂರಿ ತಾರಕ ರತ್ನ ಆರೋಗ್ಯ ಸ್ಥಿತಿ ಗಂಭೀರ
ಜನವರಿ 27ರಂದು ಆಂಧ್ರಪ್ರದೇಶ ಕುಪ್ಪಂನಲ್ಲಿ ಟಿಡಿಪಿ ನಾಯಕ ನರಾ ಲೋಕೇಶ್ ನೇತೃತ್ವದಲ್ಲಿ ನಡೆಯುತ್ತಿದ್ದ ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ತೆಲುಗು ಚಿತ್ರ ನಟ ತಾರಕರತ್ನ ಇದ್ದಕ್ಕಿದ್ದಂತೆ ಕುಸಿದು ಬಿದ್ದಿ ಆಸ್ಪತ್ರೆಗೆ ಸೇರಿದ್ದರು. ಕಳೆದ 23 ದಿನಗಳಿಂದ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ತಾರಕರತ್ನ ಬದುಕಿ ಬರಲಿಲ್ಲ
Follow us on

ತೆಲುಗು ನಟ ಹಾಗೂ ರಾಜಕಾರಣಿ ನಂದಮೂರಿ ತಾರಕರತ್ನ (Nandamuri Taraka Ratna) ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶುಕ್ರವಾರ ಮಧ್ಯೆರಾತ್ರಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಕರೆತರಲಾಗಿದೆ. ಇದೀಗ ಅವರ ಆರೋಗ್ಯದ ಬಗ್ಗೆ ಇಂದು(ಜನವರಿ 28) ನಾರಾಯಣ ಹೃದಯಾಲಯ ಹೆಲ್ತ್​ ಬುಲೆಟಿನ್ ಬಿಡುಗಡೆ ಮಾಡಿದ್ದು, ನಂದಮೂರಿ ತಾರಕ ರತ್ನ ಆರೋಗ್ಯ ಸ್ಥಿತಿ ಗಂಭೀರವಾಗಿ ಎಂದು ಹೆಲ್​ ಬುಲೆಟ್​ನಲ್ಲಿ ತಿಳಿಸಿದೆ. ಸದ್ಯ ತಾರಕರತ್ನ ಹೆಲ್ತ್ ಕ್ರಿಟಿಕಲ್ ಆಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿದೆ. ಹೃದಯಕ್ಕೆ ಸಂಬಂಧಿಸಿದ ವೈದ್ಯರಿಂದ ಹಲವು ಟೆಸ್ಟ್ ಮತ್ತು ಚಿಕಿತ್ಸೆ ನೀಡಲಾಗುತ್ತಿದೆ ಎಂದು ನಾರಾಯಣ ಹೃದಯಾಲಯ ಆಸ್ಪತ್ರೆಯ ಬಿಡುಗಡೆ ಮಾಡಿರುವ ಹೆಲ್ತ್​ ಬುಲೆಟಿನಲ್ಲಿ ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: Nandamuri Taraka Ratna: ನಟ ನಂದಮೂರಿ ತಾರಕ ರತ್ನ ತೀವ್ರ ಅಸ್ವಸ್ಥ; ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು

ಹೆಲ್ತ್​ ಬುಲೆಟಿನ್​ನಲ್ಲಿ ಏನಿದೆ?

ತೀವ್ರ ಹೃದಯಘಾತವಾಗಿರುವ ಹಿನ್ನೆಲೆಯಲ್ಲಿ ಹೃದಯದ ರಸ್ತನಾಳಗಳು ಬ್ಲಾಕ್​ ಆಗಿವೆ. ಇದ್ದರಿಂದ ತಾರಕರತ್ನ ಅವರ ಆರೋಗ್ಯ ಸ್ಥಿತಿ ಕೊಂಚ ಗಂಭೀರವಾಗಿದೆ. ಬ್ಲಾಕ್ ಆಗಿರುವ ರಕ್ತನಾಳಗಳನ್ನು ಸರಿಪಡಿಸಲು ವೈದ್ಯರ ತಂಡ ಚಿಕಿತ್ಸೆ ಮುಂದುವರಿಸಿದ್ದಾರೆ. ಇಂಟ್ರಾ ಅಯೋರ್ಟಿಕ್ ಪಂಪ್ (ಎಬಿಪಿ) ಹಾಗೂ ವ್ಯಾಸೋಆ್ಯಕ್ಟಿವ್ ನೆರವಿನಿಂದ  ಚಿಕಿತ್ಸೆ ನೀಡಲಾಗಿದೆ. ಆ್ಯಂಜಿಯೋಪ್ಲಾಸ್ಟಿ ಮೂಲಕ ಹಾನಿಯಾದ ರಕ್ತನಾಳಗಳಿಗೆ ಸ್ಟಂಟ್ ಹಾಕಲಾಗಿದೆ. ಆದ್ರೆ, ಸ್ಟಂಟ್ ಅಳವಡಿಕೆ ನಡುವೆಯೂ ರಸ್ತಸ್ರಾವ ನಿಲ್ಲುತ್ತಿಲ್ಲ. ಈ ಹಿನ್ನೆಲೆಯಲ್ಲಿ ನುರಿತ ವೈದ್ಯರ ತಂಡದಿಂದ ಚಿಕಿತ್ಸೆ ಮುಂದುವರಿದಿದೆ ಎಂದು ನಾರಾಯಣ ಹೃದಯಾಲಯ ಆಸ್ಪತ್ರೆ ಹೆಲ್ತ್​ ಬುಲೆಟ್​ನಲ್ಲಿ ಹೇಳಿದೆ.


ಆಂಧ್ರ ಪ್ರದೇಶದ ಕುಪ್ಪಂನಲ್ಲಿ (Kuppam) ನಡೆದ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ವೇಳೆ ಅವರಿಗೆ ಎದೆ ಭಾಗದಲ್ಲಿ ನೋವು ಕಾಣಿಸಿಕೊಂಡಿತ್ತು. ತಕ್ಷಣಕ್ಕೆ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈಗ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ನಂದಮೂರಿ ತಾರಕ ರತ್ನ ಅವರನ್ನು ಕರೆತರಲಾಗಿದ್ದು, ನಾರಾಯಣ ಹೃದಯಾಲ ಆಸ್ಪತ್ರೆಯ ನುರಿತ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ. ಆದ್ರೆ, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಪುತ್ರ ನರಾ ಲೋಕೇಶ್​ ಅವರು ಕುಪ್ಪಂನಲ್ಲಿ ಪಾದಯಾತ್ರೆ ಆರಂಭಿಸಿದ್ದಾರೆ. ಈ ಪಾದಯಾತ್ರೆಯಲ್ಲಿ ಭಾಗಿಯಾದಾಗ ತಾರಕ ರತ್ನ ಅವರು ಅಸ್ವಸ್ಥರಾದರು. ಅವರಿಗೆ ಹೃದಯಾಘಾತವಾಗಿದೆ ಎಂಬುದು ಬಳಿಕ ತಿಳಿದಿತ್ತು. ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವ ವಿಡಿಯೋ ನೋಡಿ ಅಭಿಮಾನಿಗಳು ಆತಂಕಗೊಂಡಿದ್ದರು. ಆರಂಭದಲ್ಲಿ ಕುಪ್ಪಂನ ಆಸ್ಪತ್ರೆಯಲ್ಲೇ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿಗೆ ಕರೆತರಲಾಗಿದೆ. ಅವರು ಬೇಗ ಚೇತರಿಕೆ ಕಾಣಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

Published On - 4:27 pm, Sat, 28 January 23