Pooja Hegde: ನಟಿ ಪೂಜಾ ಹೆಗ್ಡೆಗೆ ದುಬಾರಿ ಬೆಲೆಯ ಕಾರು ಉಡುಗೊರೆ ನೀಡಿದ ನಿರ್ದೇಶಕ! ಏನೇನೋ ಗುಸು-ಗುಸು

|

Updated on: Feb 26, 2023 | 10:30 AM

ತೆಲುಗು ಚಿತ್ರರಂಗದ ಜನಪ್ರಿಯ ನಿರ್ದೇಶಕರೊಬ್ಬರು ನಟಿ ಪೂಜಾ ಹೆಗ್ಡೆಗೆ ಎರಡು ಕೋಟಿ ಬೆಲೆಯ ಕಾರೊಂದನ್ನು ಉಡುಗೊರೆ ನೀಡಿದ್ದಾರೆ.

Pooja Hegde: ನಟಿ ಪೂಜಾ ಹೆಗ್ಡೆಗೆ ದುಬಾರಿ ಬೆಲೆಯ ಕಾರು ಉಡುಗೊರೆ ನೀಡಿದ ನಿರ್ದೇಶಕ! ಏನೇನೋ ಗುಸು-ಗುಸು
ಪೂಜಾ ಹೆಗ್ಡೆ
Follow us on

ನಟಿ ಪೂಜಾ ಹೆಗ್ಡೆ (Pooja Hegde) ಭಾರತ ಚಿತ್ರರಂಗದ ಬಹುಬೇಡಿಕೆಯ ನಟಿಯರಲ್ಲೊಬ್ಬರು. ತೆಲುಗಿನಲ್ಲಿ ಒಂದರ ಮೇಲೊಂದು ಹಿಟ್ ನೀಡಿರುವ ಈ ಚೆಲುವೆ, ತಮಿಳು, ಹಿಂದಿ ಸಿನಿಮಾಗಳಲ್ಲಿಯೂ ಬಹಳ ಬ್ಯುಸಿ. ಸಿನಿಮಾ ಒಂದಕ್ಕಾಗಿ ಹಲವು ಕೋಟಿ ಸಂಭಾವನೆ (Remuneration) ಪಡೆಯುವ ಈ ನಟಿಗೆ ಇತ್ತೀಚೆಗೆ ತೆಲುಗು ಚಿತ್ರರಂಗದ ಸ್ಟಾರ್ ನಿರ್ದೇಶಕರೊಬ್ಬರು ದುಬಾರಿ ಉಡುಗೊರೆ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ. ಯಾರು ಆ ನಿರ್ದೇಶಕ?

ತಮ್ಮ ಸಿನಿಮಾಗಳ ಸತತವಾಗಿ ಪೂಜಾ ಹೆಗ್ಡೆಯನ್ನೇ ನಾಯಕಿಯನ್ನಾಗಿ ಕಾಸ್ಟ್ ಮಾಡುತ್ತಿರುವ ತೆಲುಗಿನ ಸ್ಟಾರ್ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ (Trivikram Srinivas), ತಮ್ಮ ಮೆಚ್ಚಿನ ನಟಿ ಪೂಜಾ ಹೆಗ್ಡೆಗೆ ದುಬಾರಿ ಬೆಲೆಯ ಕಾರನ್ನು ಉಡುಗೊರೆ ನೀಡಿದ್ದಾರೆ ಎಂಬ ಸುದ್ದಿ ಟಾಲಿವುಡ್​ನಲ್ಲಿ ಹರಿದಾಡುತ್ತಿದೆ.

ಈಗಾಗಲೇ ಕೆಲವು ಐಶಾರಾಮಿ ಕಾರುಗಳ ಒಡತಿಯಾಗಿರುವ ಪೂಜಾ ಹೆಗ್ಡೆಗೆ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಎರಡು ಕೋಟಿ ಬೆಲೆಯ ಐಶಾರಾಮಿ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದಾರಂತೆ.

ತ್ರಿವಿಕ್ರಮ್ ಶ್ರೀನಿವಾಸ್​ರ ಈ ಹಿಂದಿನ ಎರಡು ಸಿನಿಮಾಗಳಲ್ಲಿ ಪೂಜಾ ಹೆಗ್ಡೆಯೇ ನಾಯಕಿ. ಈಗ ಚಿತ್ರೀಕರಣಗೊಳ್ಳುತ್ತಿರುವ ಹೊಸ ಸಿನಿಮಾದಲ್ಲಿಯೂ ಪೂಜಾ ಹೆಗ್ಡೆಯೇ ನಾಯಕಿ, ಮಾತ್ರವಲ್ಲ ಈ ಸಿನಿಮಾದ ಬಳಿಕ ತ್ರಿವಿಕ್ರಮ್ ನಿರ್ದೇಶಿಸಲಿರುವ ಅಲ್ಲು ಅರ್ಜುನ್​ರ ಹೊಸ ಸಿನಿಮಾಕ್ಕೂ ಸಹ ಪೂಜಾ ಹೆಗ್ಡೆಯೇ ನಾಯಕಿ. ತ್ರಿವಿಕ್ರಮ್ ಶ್ರೀನಿವಾಸ್​ಗೆ ಪೂಜಾ ಹೆಗ್ಡೆ ಮೇಲೆ ವಿಶೇಷ ಒಲವಿರುವುದು ಪಕ್ಕಾ, ಆದರೆ ಅದು ಐಶಾರಾಮಿ ಕಾರೊಂದನ್ನು ಉಡುಗೊರೆ ನೀಡುವಷ್ಟರ ಮಟ್ಟಿಗಿದೆಯೇ? ಎಂಬುದು ಕುತೂಹಲ ಹುಟ್ಟಿಸಿರುವ ವಿಷಯ.

Mahesh Babu-Rajamouli: ರಾಜಮೌಳಿಗಾಗಿ ಎರಡು ತಿಂಗಳು ಮೀಸಲಿಟ್ಟ ಮಹೇಶ್ ಬಾಬು

ಆದರೆ ತ್ರಿವಿಕ್ರಮ್ ಶ್ರೀನಿವಾಸ್, ಪೂಜಾಗೆ ಕಾರು ಕೊಟ್ಟಿರುವ ಚಿತ್ರತಂಡ ಅಲ್ಲಗಳೆದಿದ್ದು. ತ್ರಿವಿಕ್ರಮ್ ಶ್ರೀನಿವಾಸ್, ಪ್ರಸ್ತುತ ಮಹೇಶ್ ಬಾಬು ಸಿನಿಮಾ ನಿರ್ದೇಶನ ಮಾಡುತ್ತಿದ್ದು, ಸಿನಿಮಾದ ನಾಯಕಿಯಾಗಿರುವ ಪೂಜಾ, ಹೋಟೆಲ್​ನಿಂದ ಸೆಟ್​ಗೆ ಬರಲು ಪ್ರೊಡಕ್ಷನ್ ಟೀಂನಿಂದ ಇನ್ನೊವಾ ಕಾರೊಂದನ್ನು ನೀಡಲಾಗಿತ್ತಂತೆ. ಹಾಗೆಯೇ ಹಲವು ನಟ-ನಟಿಯರು ಕಾರು ಬಳಸುತ್ತಿದ್ದರಿಂದ ಪ್ರೊಡಕ್ಷನ್ ಖರ್ಚು ಹೆಚ್ಚಾಗಿತ್ತಂತೆ. ಹಾಗಾಗಿ ಸಿನಿಮಾ ತಂಡವೇ ಹೊಸದೊಂದು ಕಾರು ಖರೀದಿ ಮಾಡಿದೆ. ಆ ಹೊಸ ಕಾರಲ್ಲಿ ಮೊದಲಿಗೆ ಪ್ರಯಾಣಿಸಿದ್ದು ಪೂಜಾ ಹೆಗ್ಡೆ, ಆ ಕಾರು ಪೂಜಾ ಹೆಗ್ಡೆಗೆ ಮಾತ್ರ ಎಂದೇನೂ ಇಲ್ಲ ಯಾರು ಬೇಕಾದರೂ ಬಳಸಬಹುದು ಎಂಬ ಸ್ಪಷ್ಟನೆ ಕೇಳಿ ಬಂದಿದೆ.

ಅದೇನೇ ಇರಲಿ, ಪೂಜಾ ಹೆಗ್ಡೆಯಂತೂ ನಿರ್ದೇಶಕ ತ್ರಿವಿಕ್ರಮ್ ಪಾಲಿಗೆ ಲಕ್ಕಿ ಚಾರ್ಮ್. ತ್ರಿವಿಕ್ರಮ್, ತಮ್ಮ ನಿರ್ದೇಶನದ ‘ಅರವಿಂದ ಸಮೇತ’ ಹಾಗೂ ‘ಅಲಾ ವೈಕುಂಟಪುರಂಲೋ’ ಸಿನಿಮಾದಲ್ಲಿ ಪೂಜಾ ಹೆಗ್ಡೆಯವರನ್ನು ನಾಯಕಿಯನ್ನಾಗಿ ಹಾಕಿಕೊಂಡಿದ್ದರು ಎರಡೂ ಸಿನಿಮಾ ಸೂಪರ್ ಡೂಪರ್ ಹಿಟ್ ಆಯಿತು. ಈಗ ಮಹೇಶ್ ಬಾಬು ಸಿನಿಮಾಕ್ಕೂ ಅವರನ್ನೇ ನಾಯಕಿ ಮಾಡಿದ್ದಾರೆ. ತಮ್ಮ ಲಕ್ಕಿ ಚಾರ್ಮ್​ಗೆ ಎರಡು ಕೋಟಿಯ ಉಡುಗೊರೆ ಕೊಟ್ಟರೇ ತಪ್ಪೇನು ಇಲ್ಲ ಎಂಬುದು ಪೂಜಾ ಅಭಿಮಾನಿಗಳ ಅನಿಸಿಕೆ.

ಇನ್ನು ನಟಿ ಪೂಜಾ ಹೆಗ್ಡೆ, ತೆಲುಗು, ತಮಿಳು ಹಿಂದಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಲ್ಮಾನ್ ಖಾನ್ ನಟನೆಯ ‘ಕಿಸೀಕಿ ಭಾಯ್, ಕಿಸೀಕಿ ಜಾನ್’ ಸಿನಿಮಾದಲ್ಲಿ ಪೂಜಾ ನಟಿಸಿದ್ದು ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ