ಚೆನ್ನೈಗೆ ಮರಳಿದ ವಿಜಯ್​​ನ ಮುತ್ತಿದ ಅಭಿಮಾನಿಗಳು; ಜಾರಿ ಬಿದ್ದ ನಟ

ದಳಪತಿ ವಿಜಯ್ ಮಲೇಷಿಯಾದಿಂದ ಚೆನ್ನೈಗೆ ಮರಳುವಾಗ ಅಭಿಮಾನಿಗಳ ಭಾರೀ ನೂಕುನುಗ್ಗಲಿನಲ್ಲಿ ವಿಮಾನ ನಿಲ್ದಾಣದಲ್ಲಿ ಕುಸಿದು ಬಿದ್ದರು. ಈ ಘಟನೆ ಸೆಲೆಬ್ರಿಟಿಗಳ ಸುರಕ್ಷತೆಯ ಬಗ್ಗೆ ತೀವ್ರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ವಿಜಯ್ ಸಂಪೂರ್ಣವಾಗಿ ರಾಜಕೀಯಕ್ಕೆ ಪ್ರವೇಶಿಸಲು ಚಿತ್ರರಂಗದಿಂದ ಹೊರಬರಲು ನಿರ್ಧರಿಸಿದ್ದು, ಅಭಿಮಾನಿಗಳಿಗೆ ಸೇವೆ ಸಲ್ಲಿಸಲು ಸಿದ್ಧರಿದ್ದಾರೆ.

ಚೆನ್ನೈಗೆ ಮರಳಿದ ವಿಜಯ್​​ನ ಮುತ್ತಿದ ಅಭಿಮಾನಿಗಳು; ಜಾರಿ ಬಿದ್ದ ನಟ
ವಿಜಯ್
Edited By:

Updated on: Dec 29, 2025 | 10:13 AM

ತಮಿಳು ನಟ ಹಾಗೂ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ದಳಪತಿ ವಿಜಯ್ (Thalapathy Vijay) ಅವರು ಚಿತ್ರರಂಗ ಬಿಡುವ ಹಂತದಲ್ಲಿ ಇದ್ದಾರೆ. ಅವರು ಇತ್ತೀಚೆಗೆ ಮಲೇಷ್ಯಾದಲ್ಲಿ ‘ಜನ ನಾಯಗನ್’ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿ ಆದರು. ಅವರು ಭಾನುವಾರ ರಾತ್ರಿ ಮಲೇಷ್ಯಾದಿಂದ ಚೆನ್ನೈಗೆ ಬಂದರು. ವಿಜಯ್ ಅವರನ್ನು ಸ್ವಾಗತಿಸಲು ಅಪಾರ ಸಂಖ್ಯೆಯ ಅಭಿಮಾನಿಗಳು ಚೆನ್ನೈ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಪೊಲೀಸರು ಅವರನ್ನು ನಿಯಂತ್ರಿಸಲು ಪ್ರಯತ್ನಿಸಿದರೂ, ಅವರೆಲ್ಲರೂ ಒಮ್ಮೆಲೇ ಒಟ್ಟುಗೂಡಿದರು. ಈ ವೇಳೆ ವಿಜಯ್ ಬಿದ್ದರು. ಇದರ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಈ ವಿಡಿಯೋ ಮತ್ತೊಮ್ಮೆ ಸೆಲೆಬ್ರಿಟಿಗಳ ಸುರಕ್ಷತೆ ಬಗ್ಗೆ ಪ್ರಶ್ನೆ ಎತ್ತಿದೆ.

ಭಾರೀ ಭದ್ರತೆಯ ನಡುವೆ ನಾಯಕ ವಿಜಯ್ ವಿಮಾನ ನಿಲ್ದಾಣದಿಂದ ಹೊರಬರುತ್ತಿದ್ದಾಗ, ಅಭಿಮಾನಿಗಳು ಇದ್ದಕ್ಕಿದ್ದಂತೆ ಅವರ ಕಡೆಗೆ ಧಾವಿಸಿದರು. ವಿಜಯ್ ತಮ್ಮ ಕಾರಿನ ಕಡೆಗೆ ಹೋಗುತ್ತಿದ್ದಾಗ, ಅಭಿಮಾನಿಗಳು ಅವರನ್ನು ಮುಂದಕ್ಕೆ ತಳ್ಳಿದಾಗ ಅವರು ಜಾರಿ ಬಿದ್ದರು. ಭದ್ರತಾ ಸಿಬ್ಬಂದಿ ತಕ್ಷಣ ಅವರಿಗೆ ಸಹಾಯ ಮಾಡಲು ಧಾವಿಸಿದರು. ವಿಜಯ್ ಅವರನ್ನು ಮೇಲಕ್ಕೆತ್ತಿ ಸುರಕ್ಷಿತವಾಗಿ ಕಾರಿಗೆ ಹತ್ತಿಸಿದಾಗ ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಟ್ಟರು.

ಡಿಸೆಂಬರ್ 27 ರಂದು ಕೌಲಾಲಂಪುರದಲ್ಲಿ ನಡೆದ ಜನನಾಯಗನ್ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ದಳಪತಿ ವಿಜಯ್ ಮಲೇಷ್ಯಾದಿಂದ ಹಿಂತಿರುಗಿದರು. ಈ ಕಾರ್ಯಕ್ರಮವು ಲಕ್ಷಾಂತರ ಅಭಿಮಾನಿಗಳನ್ನು ಆಕರ್ಷಿಸಿತು. ಈ ಕಾರ್ಯಕ್ರಮದಲ್ಲಿ ವಿಜಯ್ ಸಿನಿಮಾದಿಂದ ಸಂಪೂರ್ಣವಾಗಿ ಹಿಂದೆ ಸರಿಯುವುದಾಗಿ ಘೋಷಿಸಿದರು. ಅವರು ಸಾರ್ವಜನಿಕ ಜೀವನ ಮತ್ತು ರಾಜಕೀಯಕ್ಕೆ ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಳ್ಳುವುದಾಗಿ ಹೇಳಿದಾಗ ಅಭಿಮಾನಿಗಳು ಭಾವುಕರಾದರು.

‘ಸಿನಿಮಾ ರಂಗ ಪ್ರವೇಶಿಸಿದಾಗ ಒಂದು ಸಣ್ಣ ಮನೆಯನ್ನು ನಿರ್ಮಿಸಬೇಕೆಂದು ಬಯಸಿದ್ದೆ. ಆದರೆ ಅಭಿಮಾನಿಗಳು ನನಗೆ ಅರಮನೆಯನ್ನು ನಿರ್ಮಿಸಿದರು. ನನ್ನ ಅಭಿಮಾನಿಗಳು ಕೋಟೆಯನ್ನು ನಿರ್ಮಿಸಲು ಸಹಾಯ ಮಾಡಿದರು. ಅದಕ್ಕಾಗಿಯೇ ಅವರ ಪರವಾಗಿ ನಿಲ್ಲಲು ನಿರ್ಧರಿಸಿದೆ’ ಎಂದು ಹೇಳಿದರು.

ಇದನ್ನೂ ಓದಿ: ಕೊನೆಯ ಸಿನಿಮಾ: ಅಭಿಮಾನಿಗಳಿಗೆ ಭಾವುಕ ವಿದಾಯ ಹೇಳಿದ ವಿಜಯ್

ವಿಜಯ್​ಗೆ ಆದ ಘಟನೆ ಚರ್ಚೆ ಹುಟ್ಟುಹಾಕಿದೆ. ಸೆಲೆಬ್ರಿಟಿಗಳ ಸುರಕ್ಷತೆಯ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ. ನಟಿಯರಾದ ನಿಧಿ ಅಗರ್ವಾಲ್ ಮತ್ತು ಸಮಂತಾ ಇತ್ತೀಚೆಗೆ ಇದೇ ರೀತಿಯ ಅನುಭವಗಳನ್ನು ಎದುರಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.