Thalapathy Vijay: ಪೊಲೀಸರಿಂದ ದಳಪತಿ ವಿಜಯ್​ಗೆ ದಂಡ; ಇಲ್ಲಿದೆ ಕಾರಣ  

ಇತ್ತೀಚೆಗೆ ವಿಜಯ್ ಅವರು ಅಭಿಮಾನಿಗಳನ್ನು ಭೇಟಿ ಮಾಡಿದ್ದರು. ಅಲ್ಲಿಂದ ಹೊರಟು ಬರುವಾಗ ಅವರು ತಪ್ಪೊಂದನ್ನು ಎಸಗಿದ್ದರು.

Thalapathy Vijay: ಪೊಲೀಸರಿಂದ ದಳಪತಿ ವಿಜಯ್​ಗೆ ದಂಡ; ಇಲ್ಲಿದೆ ಕಾರಣ  
ದಳಪತಿ ವಿಜಯ್​

Updated on: Jul 13, 2023 | 10:37 AM

ದಳಪತಿ ವಿಜಯ್ (Thalapathy Vijay) ತಮಿಳಿನ ಸ್ಟಾರ್ ಹೀರೋ. ಅವರ ಫ್ಯಾನ್ ಫಾಲೋಯಿಂಗ್ ಬಗ್ಗೆ ಹೇಳಬೇಕಾಗಿಲ್ಲ. ದಳಪತಿ ವಿಜಯ್​ ಸಿನಿಮಾಗಳು ಮಿನಿಮಮ್ ಬಿಸ್ನೆಸ್ ಮಾಡುತ್ತವೆ. ಹೀಗಾಗಿ ನಿರ್ಮಾಪಕರು ಅವರ ಚಿತ್ರಕ್ಕೆ ಬಂಡವಾಳ ಹೂಡಲು ಮುಂದೆ ಬರುತ್ತಾರೆ. ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ವಿಜಯ್ ಈಗ ರಾಜಕೀಯದತ್ತ ಗಮನಹರಿಸಲಿದ್ದಾರೆ ಎನ್ನಲಾಗುತ್ತಿದೆ. ಅವರು ಪಾದಯಾತ್ರೆ ತೆರಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬೆಳವಣಿಗೆ ಮಧ್ಯೆ ಪೊಲೀಸರು ದಳಪತಿ ವಿಜಯ್‌ಗೆ ದಂಡ ವಿಧಿಸಿದ್ದಾರೆ. ಇದು ಸಖತ್ ಸುದ್ದಿ ಆಗುತ್ತಿದೆ.

ಇತ್ತೀಚೆಗೆ ವಿಜಯ್ ಅವರು ಅಭಿಮಾನಿಗಳನ್ನು ಭೇಟಿ ಮಾಡಿದ್ದರು. ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಹಾಗೂ ಪಾದಯಾತ್ರೆ ಬಗ್ಗೆ ಅಭಿಮಾನಿಗಳ ಜೊತೆ ಮಾತನಾಡಿದ್ದರು ಎನ್ನಲಾಗಿದೆ. ಅವರು ಅಲ್ಲಿಂದ ಹೊರಟು ಬರುವಾಗ ಅಭಿಮಾನಿಗಳು ಅವರ ಕಾರನ್ನು ಹಿಂಬಾಲಿಸಿದರು. ಇದರಿಂದ ತಪ್ಪಿಸಿಕೊಳ್ಳಲು ಅವರು ಸಿಗ್ನಲ್ ಜಂಪ್ ಮಾಡಿದ್ದರು!

ಸಿಗ್ನಲ್​​ನಲ್ಲಿ ಕೆಂಪು ಲೈಟ್ ಇದ್ದಾಗ ವಾಹನ ನಿಲ್ಲಿಸಬೇಕು. ಆದರೆ, ಅಭಿಮಾನಿಗಳಿಂದ ತಪ್ಪಿಸಿಕೊಳ್ಳಲು ಕೆಂಪು ದೀಪ ಇದ್ದರೂ ಕಾರನ್ನು ನಿಲ್ಲಿಸದೆ ವಿಜಯ್ ತೆರಳಿದ್ದಾರೆ. ಪೊಲೀಸರು ವಿಜಯ್ ಕಾರಿಗೆ 500 ರೂಪಾಯಿ ದಂಡ ಹಾಕಿದ್ದಾರೆ. ಈ ಸುದ್ದಿ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ದಳಪತಿ ವಿಜಯ್​ ರಾಜಕೀಯದ ಎಂಟ್ರಿಗೆ ರಜನಿಕಾಂತ್​, ಅಜಿತ್​ ಫ್ಯಾನ್ಸ್​ ಬೆಂಬಲ? ಪಾದಯಾತ್ರೆಗೆ ನಡೆದಿದೆ ಪ್ಲ್ಯಾನ್​

ವಿಜಯ್ ಅವರು ‘ಲಿಯೋ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಲೋಕೇಶ್ ಕನಗರಾಜ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ತ್ರಿಷಾ ಅವರು ಈ ಚಿತ್ರದ ನಾಯಕಿ. ಲೋಕೇಶ್ ಯೂನಿವರ್ಸ್​​ಗೂ ಈ ಚಿತ್ರಕ್ಕೂ ಕನೆಕ್ಷನ್ ಇದೆ ಎಂದು ಹೇಳಲಾಗುತ್ತಿದೆ. ಇದಾದ ಬಳಿಕ ವಿಜಯ್ ಅವರು ಒಂದು ಸಿನಿಮಾ ಮಾಡಲಿದ್ದಾರೆ. ನಂತರ ಅವರು ಸಂಪೂರ್ಣವಾಗಿ ರಾಜಕೀಯದಲ್ಲೇ ತೊಡಗಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ದಳಪತಿ ವಿಜಯ್ ಶೀಘ್ರದಲ್ಲೇ ಪಾದಯಾತ್ರೆ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಅಜಿತ್​ ಕುಮಾರ್ ಹಾಗೂ ರಜನಿಕಾಂತ್​ ​ಫ್ಯಾನ್ಸ್​ ಕೂಡ ವಿಜಯ್ ಬೆಂಬಲಕ್ಕೆ ನಿಲ್ಲಲಿದ್ದಾರಂತೆ. ಒಂದೊಮ್ಮೆ ವಿಜಯ್​ಗೆ ಈ ಪರಿ ಬೆಂಬಲ ಸಿಕ್ಕರೆ ಅವರ ರಾಜಕೀಯದ ಎಂಟ್ರಿ ಸಿಕ್ಕಾಪಟ್ಟೆ ಸದ್ದು ಮಾಡಲಿದೆ. ಅವರ ಗೆಲುವು ಮತ್ತಷ್ಟು ಸುಲಭ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:36 am, Thu, 13 July 23