ದಳಪತಿ ವಿಜಯ್ ಭೇಟಿಗೆ ಬಂದ ಅಭಿಮಾನಿಯ ಮುಖಕ್ಕೆ ಗನ್​ ಹಿಡಿದ ಬಾಡಿಗಾರ್ಡ್​

ಮಧುರೈ ವಿಮಾನ ನಿಲ್ದಾಣದಲ್ಲಿ ದಳಪತಿ ವಿಜಯ್ ಅವರನ್ನು ಭೇಟಿಯಾಗಲು ಬಂದ ವೃದ್ಧ ಅಭಿಮಾನಿಯೊಬ್ಬರಿಗೆ ಅವರ ಬಾಡಿಗಾರ್ಡ್ ಗನ್ ತೋರಿಸಿ ಹೆದರಿಸಿದ ಘಟನೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ವಿಜಯ್ ಅವರ ಬಾಡಿಗಾರ್ಡ್‌ನ ನಡವಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.

ದಳಪತಿ ವಿಜಯ್ ಭೇಟಿಗೆ ಬಂದ ಅಭಿಮಾನಿಯ ಮುಖಕ್ಕೆ ಗನ್​ ಹಿಡಿದ ಬಾಡಿಗಾರ್ಡ್​
ವಿಜಯ್
Edited By:

Updated on: May 06, 2025 | 11:15 AM

ಸೆಲೆಬ್ರಿಟಿಗಳು ಎಲ್ಲೇ ಹೋದರು ಫ್ಯಾನ್ಸ್ ಮುತ್ತಿಕೊಳ್ಳೋದು ಸಾಮಾನ್ಯ ಎಂಬಂತಾಗಿ ಬಿಟ್ಟಿದೆ. ಅದು ಸೆಲೆಬ್ರಿಟಿಗಳಿಗೂ ಹೊಸದಲ್ಲ. ಅವರು ಕೂಡ ಇದಕ್ಕೆ ಹೊಂದಿಕೊಂಡಿದ್ದಾರೆ ಎಂದೇ ಹೇಳಬಹುದು. ಫ್ಯಾನ್ಸ್ ಕಂಡಾಗ ಅವರ ಕಡೆ ಕೈ ಬೀಸೋ ಪ್ರಯತ್ನವನ್ನು ಅನೇಕರು ಮಾಡಿದ ಉದಾಹರಣೆ ಇದೆ. ಆದರೆ, ಕೆಲವೊಮ್ಮೆ ಅವರನ್ನು ಭೇಟಿ ಮಾಡಲು ಬಂದ ಅಭಿಮಾನಿಗಳಿಗೆ ಶಾಕ್ ಆದ ಉದಾಹರಣೆ ಇದೆ. ಅದು ಅವರಿಂದ ಅಲ್ಲ, ಅವರ ಬಾಡಿಗಾರ್ಡ್​ಗಳಿಂದ. ಈಗ ಖ್ಯಾತ ನಟ ಹಾಗೂ ಟಿವಿಕೆ ನಾಯಕ ದಳಪತಿ ವಿಜಯ್ (Thalapathy Vijay) ಅಭಿಮಾನಿಗೂ ಅದೇ ರೀತಿ ಆಗಿದೆ. ಮಧುರೈ ವಿವಾನ ನಿಲ್ದಾಣದಲ್ಲಿ ಈ ಘಟನೆ ಆಗಿದೆ.

ದಳಪತಿ ವಿಜಯ್ ಅವರು ಮಧುರೈ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಈ ವೇಳೆ ಅವರು ಬರುವ ವಿಚಾರ ಮೊದಲೇ ತಿಳಿದಿತ್ತು. ಈ ಕಾರಣಕ್ಕೆ ಅನೇಕರು ಅಲ್ಲಿ ನೆರೆದಿದ್ದರು. ಈ ವೇಳೆ ವಯಸ್ಸಾದ ಅಭಿಮಾನಿಯೋರ್ವ ವಿಜಯ್​ನ ಭೇಟಿ ಮಾಡಲು ಮುಂದೆ ಬಂದಿದ್ದಾನೆ. ಬಾಡಿಗಾರ್ಡ್​ಗಳ ಕಣ್ಣು ತಪ್ಪಿಸಿ ಭೇಟಿ ಮಾಡುವ ಪ್ರಯತ್ನ ಮಾಡಿದ್ದಾನೆ. ಆಗ ಅವರಿಗೆ ಬಾಡಿಗಾರ್ಡ್​ ಗನ್ ತೋರಿಸಿ ಹೆದರಿಸಿದ್ದಾನೆ.

ಇದನ್ನೂ ಓದಿ
ಜೀವನದಲ್ಲಿ ಇರೋ ಕೊನೆಯ ಆಸೆಯನ್ನು ಈಡೇರಿಸಿಕೊಂಡ ರಶ್ಮಿಕಾ ಮಂದಣ್ಣ
ಮೆಟ್ ಗಾಲಾ ರೆಡ್ ಕಾರ್ಪೆಟ್​ನಲ್ಲಿ ಶಾರುಖ್ ಖಾನ್ ಐಕಾನಿಕ್ ಪೋಸ್
ರಣಬೀರ್-ರಣವೀರ್​ನ ತಂದೆ ತಾಯಿಗೆ ಹೋಲಿಸಿದ್ದ ದೀಪಿಕಾ ಪಡುಕೋಣೆ
ಖ್ಯಾತ ನಿರ್ಮಾಪಕನ ಜೊತೆ ಪೋಸ್ ಕೊಟ್ಟ ಶ್ರೀಲೀಲಾ; ಕೇಳಿಬಂತು ಹೊಸ ಗಾಸಿಪ್

ದಳಪತಿ ವಿಜಯ್ ಅವರು ‘ಜನ ನಾಯಗನ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರ ಶೂಟ್ ಕೊಡೆಕೆನಲ್​ನಲ್ಲಿ ನಡೆದಿದೆ. ಅವರು ಮಧುರೈನಿಂದ ಚೆನ್ನೈಗೆ ಬರುವವರಿದ್ದರು. ಈ ವಿಡಿಯೋ ಮನೋಬಲ ವಿಜಯಬಾಲನ್ ಅವರು ಹಂಚಿಕೊಂಡಿದ್ದಾರೆ. ವಿಜಯ್ ಬಾಡಿಗಾರ್ಡ್ ನಡೆ ಎಲ್ಲ ಕಡೆ ಚರ್ಚೆ ಹುಟ್ಟುಹಾಕಿದೆ. ಅವರು ಆ ರೀತಿ ಮಾಡಬಾರದಿತ್ತು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ದಳಪತಿ ವಿಜಯ್ ನೋಡಲು ಮರದಿಂದ ಜಿಗಿದ ಹುಚ್ಚು ಅಭಿಮಾನಿ; ವಿಡಿಯೋ ವೈರಲ್

ದಳಪತಿ ವಿಜಯ್ ಅವರ ಗಮನಕ್ಕೆ ಈ ವಿಚಾರ ಬಂದಿಲ್ಲ. ಬಹುಶಃ ಅವರ ಗಮನಕ್ಕೆ ಬಂದಿದ್ದರೆ ಬಾಡಿಗಾರ್ಡ್​ಗೆ ಗದರುವ ಕೆಲವನ್ನು ಅವರು ಮಾಡುತ್ತಿದ್ದರೇನೋ. ಸಲ್ಮಾನ್ ಖಾನ್ ಅವರ ಅಭಿಮಾನಿಗಳಿಗೆ ಈ ರೀತಿಯ ಘಟನೆ ಸಾಮಾನ್ಯ ಆಗಿದೆ. ಸಲ್ಲುಗೆ ಕೊಲೆ ಬೆದರಿಕೆ ಇದೆ. ಈ ಕಾರಣಕ್ಕೆ ಅವರ ಬಳಿ ಬರೋ ಅಭಿಮಾನಿಗಳನ್ನು ಸಲ್ಮಾನ್ ಖಾನ್ ಬಾಡಿಗಾರ್ಡ್ ಷೇರಾ ತಳ್ಳುತ್ತಾರೆ. ಈ ಬಗ್ಗೆ ಸಲ್ಲು ತಲೆಕೆಡಿಸಿಕೊಳ್ಳೋದಿಲ್ಲ. ಆದರೆ, ವಿಜಯ್ ಅಭಿಮಾನಿಗಳಿಗೆ ಇದು ಹೊಸತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.