‘ಕಪ್ಪಗಿದ್ದೀಯ, ಆಂಟಿ ಥರ ಕಾಣ್ತೀಯ, ಡುಮ್ಮಿ ಆಗಿದೀಯ ಅಂದ್ರು’; ಬೇಸರದ ಸಂಗತಿ ಹೊರಹಾಕಿದ ಪ್ರಿಯಾಮಣಿ

The Family Man 2: ‘ದಿ ಫ್ಯಾಮಿಲಿ ಮ್ಯಾನ್​ 2’ ನಟಿ ಪ್ರಿಯಾಮಣಿ ಮೈಬಣ್ಣ ಕಪ್ಪು ಎಂಬ ಕಾರಣಕ್ಕೆ ಅನೇಕರು ಬಾಡಿ ಶೇಮಿಂಗ್​ ಮಾಡಿದ್ದಾರೆ. ಅಂಥವರಿಗೆ ಪ್ರಿಯಾಮಣಿ ತಿರುಗೇಟು ನೀಡಿದ್ದಾರೆ.

‘ಕಪ್ಪಗಿದ್ದೀಯ, ಆಂಟಿ ಥರ ಕಾಣ್ತೀಯ, ಡುಮ್ಮಿ ಆಗಿದೀಯ ಅಂದ್ರು’; ಬೇಸರದ ಸಂಗತಿ ಹೊರಹಾಕಿದ ಪ್ರಿಯಾಮಣಿ
ಪ್ರಿಯಾಮಣಿ
Edited By:

Updated on: Jun 13, 2021 | 9:27 AM

ಇತ್ತೀಚೆಗೆ ಬಿಡುಗಡೆಯಾಗಿ ಧೂಳೆಬ್ಬಿಸುತ್ತಿರುವ ‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸರಣಿ ಮೂಲಕ ನಟಿ ಪ್ರಿಯಾಮಣಿ ಅವರಿಗೆ ಭಾರಿ ಯಶಸ್ಸು ಸಿಕ್ಕಿದೆ. ಮೊದಲ ಸೀಸನ್​ನಲ್ಲೂ ಅವರ ಪಾತ್ರ ಹೈಲೈಟ್​ ಆಗಿತ್ತು. ಎರಡನೇ ಸೀಸನ್​ನಲ್ಲಿ ಕೂಡ ಅದು ಮುಂದುವರಿದಿದೆ. ಹಲವು ಹಿಟ್​ ಸಿನಿಮಾಗಳನ್ನು ನೀಡಿ, ಸ್ಟಾರ್​ ನಟರ ಜೊತೆ ತೆರೆ ಹಂಚಿಕೊಂಡು, ಬಹುಭಾಷೆಯಲ್ಲಿ ನಟಿಸಿ, ರಾಷ್ಟ್ರ ಪ್ರಶಸ್ತಿ ಪಡೆದ ಮೇಲೂ ಪ್ರಿಯಾಮಣಿಗೆ ಟ್ರೋಲಿಗರ ಕಾಟ ತಪ್ಪಿಲ್ಲ. ಅವರಿಗೂ ಬಾಡಿ ಶೇಮಿಂಗ್​ ಅನುಭವ ಆಗಿದೆ. ಈಗ ಅವರು ಅದರ ಬಗ್ಗೆ ಮಾತನಾಡಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ವಿಚಾರಗಳ ಬಗ್ಗೆ ಹೇಳಿಕೊಂಡಿದ್ದಾರೆ.

‘ಪ್ರಾಮಾಣಿಕವಾಗಿ ಹೇಳಬೇಕೆಂದರೆ ನನ್ನ ದೇಹದ ತೂಕ 65 ಕೆಜಿವರೆಗೂ ಏರಿಕೆ ಆಗಿತ್ತು. ಈಗಿರುವುದಕ್ಕಿಂತಲೂ ದಪ್ಪ ಕಾಣುತ್ತಿದೆ. ಅನೇಕರು ಬಂದು ನೀನು ದಪ್ಪ ಆಗಿದ್ದೀಯ ಎಂದು ಹೇಳುತ್ತಿದ್ದರು. ಆದರೆ ಈಗ ಅದೇ ಜನರು ಬಂದು ನೀನು ತೆಳ್ಳಗೆ ಆಗಿದ್ದೀಯಾ, ಮೊದಲಿದ್ದ ರೀತಿಯೇ ನಿನ್ನನ್ನು ನಾವು ಇಷ್ಟಪಡುತ್ತಿದ್ವಿ ಅಂತ ಹೇಳಿದ್ದಾರೆ. ದಪ್ಪ ಅಥವಾ ತೆಳ್ಳಗೆ, ನೀವು ಯಾವ ರೀತಿ ನನ್ನನ್ನು ಇಷ್ಟಪಡುತ್ತೀರಿ ಎಂಬುದನ್ನು ಮೊದಲು ಸ್ಪಷ್ಟ ಮಾಡಿಕೊಳ್ಳಿ ಅಂತ ನಾನು ಹೇಳಿದ್ದೇನೆ’ ಎಂದಿದ್ದಾರೆ ಪ್ರಿಯಾಮಣಿ.

ಪ್ರಿಯಾಮಣಿ ಮೈ ಬಣ್ಣ ಕಪ್ಪು ಎಂಬ ಕಾರಣಕ್ಕೆ ಅನೇಕರು ಬಾಡಿಶೇಮಿಂಗ್​ ಮಾಡಿದ್ದಾರೆ. ಅಂಥವರಿಗೆ ತಿರುಗೇಟು ನೀಡಿರುವ ಅವರು, ‘ನನ್ನ ಚರ್ಮದ ಬಣ್ಣ ಕಪ್ಪು ಆಗಿದ್ದರೆ ಅದರಲ್ಲಿ ತಪ್ಪೇನಿದೆ. ಯಾರನ್ನೂ ಕಪ್ಪು ಎಂದು ಜರಿಯಬೇಡಿ. ಅದರಲ್ಲಿಯೂ ಬ್ಯೂಟಿ ಇದೆ’ ಎಂದು ಪ್ರಿಯಾಮಣಿ ಹೇಳಿದ್ದಾರೆ.

‘ನಾನು ಮೇಕಪ್​ ರಹಿತ ಫೋಟೋ ಹಾಕಿದರೆ ಅರ್ಧಕ್ಕರ್ಧ ಜನರು ಓಹ್​ ಮೇಕಪ್​ ಇದ್ದರೆ ನೀನು ಚೆನ್ನಾಗಿ ಕಾಣ್ತೀಯ, ಮೇಕಪ್​ ಇಲ್ಲದಿದ್ದರೆ ಆಂಟಿ ಥರ ಕಾಣ್ತೀಯ ಅಂತಾರೆ. ಅದರಲ್ಲಿ ಏನಿದೆ? ಇಂದಲ್ಲ ನಾಳೆ ನೀವು ಕೂಟ ಆಂಟಿ ಆಗಲೇಬೇಕಲ್ಲವೇ?’ ಎಂದು ಪ್ರಿಯಾಮಣಿ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ:

ಮನೋಜ್ ಬಾಜಪೇಯಿ ‘ದಿ ಫ್ಯಾಮಿಲಿ ಮ್ಯಾನ್ 3’ಗೆ ಪಡೆಯುವ ಸಂಭಾವನೆ ಎಷ್ಟು?

‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್​ ಸಿರೀಸ್​ನ ಮುಖ್ಯವಾದ ಸೀಕ್ರೆಟ್​ ಬಗ್ಗೆ ಮನೋಜ್​ ಬಾಜಪೇಯ್​ ಹೇಳಿದ್ದೇನು?