
ಭಾನುವಾರದ ಕಲೆಕ್ಷನ್ ವಿಷಯದಲ್ಲಿ ‘ರಾಜಾಸಾಬ್’ ಸಿನಿಮಾ (Raja Saab) ಎಡವಿದೆ. ಮೊದಲ ದಿನ ಅದ್ದೂರಿ ಕಲೆಕ್ಷನ್ ಮಾಡಿದ್ದ ಈ ಚಿತ್ರ ನಂತರದ ದಿನಗಳಲ್ಲಿ ಕುಸಿತದ ಹಾಡಿ ಹಿಡಿಯಿತು. ಮೊದಲ ದಿನದ ದುಬಾರಿ ಟಿಕೆಟ್ ದರ ಚಿತ್ರಕ್ಕೆ ಸಹಕಾರಿ ಆಗಿದೆ. ಆದರೆ, ಸಿನಿಮಾ ನೋಡಿದ ಪ್ರೇಕ್ಷಕ ಖುಷಿಯಾಗಿಲ್ಲ. ಈ ಕಾರಣದಿಂದಲೇ ಸಿನಿಮಾದ ಗಳಿಕೆ ಕುಸಿತದ ಹಾದಿ ಹಿಡಿದಿದೆ. ಈ ಚಿತ್ರದ ಒಟ್ಟಾರೆ ಗಳಿಕೆ ಎಷ್ಟು ಎಂಬ ಬಗ್ಗೆ ಇಲ್ಲಿದೆ ವಿವರ.
‘ರಾಜಾಸಾಬ್’ ಸಿನಿಮಾ ಜನವರಿ 9ರಂದು ರಿಲೀಸ್ ಆಯಿತು. ಈ ಸಿನಿಮಾ ಹಾರರ್ ಕಾಮಿಡಿ ಶೈಲಿಯಲ್ಲಿ ಮೂಡಿ ಬಂದಿತ್ತು. ಇದೇ ಮೊದಲ ಬಾರಿಗೆ ಅವರು ಈ ಶೈಲಿಯನ್ನು ಪ್ರಯತ್ನಿಸಿದ್ದರು. ಈ ಸಿನಿಮಾ ಜನರಿಂದ ಮಿಶ್ರ ಪ್ರತಿಕ್ರಿಯೆ ಪಡೆದಿದೆ. ಈಗ ಸಿನಿಮಾ ಭಾನುವಾರ ಕೇವಲ 20 ಕೋಟಿ ರೂಪಾಯಿ ಗಳಿಕೆ ಮಾಡಿದೆ.
‘ರಾಜಾಸಾಬ್’ ಸಿನಿಮಾ ಮೊದಲ ದಿನ ಗಳಿಕೆ ಮಾಡಿದ್ದು 53 ಕೋಟಿ ರೂಪಾಯಿ. ಇದಕ್ಕೆ ಕಾರಣ ದುಬಾರಿ ಟಿಕೆಟ್ ದರ. ತೆಲುಗಿನಿಂದ 47 ಕೋಟಿ ರೂಪಾಯಿ ಆದರೆ, ಹಿಂದಿಯಿಂದ 6 ಕೋಟಿ ರೂಪಾಯಿ ಹರಿದು ಬಂದಿತ್ತು. ಇದಕ್ಕೆ ಕಾರಣವೂ ಇದೆ. ಹಿಂದಿಯಲ್ಲಿ ಪ್ರಭಾಸ್ಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರು ಸಿನಿಮಾನ ನೋಡಿದ್ದಾರೆ.
ಭಾನುವಾರ ಮಾತ್ರ ಥಿಯೇಟರ್ಗೆ ಹೋಗುವ ಪ್ರೇಕ್ಷಕರ ಸಂಖ್ಯೆ ಕಡಿಮೆ ಆಗಿದೆ. ಮೊದಲ ದಿನದ ಸಿನಿಮಾ ಟಿಕೆಟ್ ದರಕ್ಕೆ ಹೋಲಿಕೆ ಮಾಡಿದರೆ ಟಿಕೆಟ್ ದರ ಕೂಡ ಕಡಿಮೆ ಆಗಿದೆ.ಹೀಗಾಗಿ ಗಳಿಕೆಯಲ್ಲಿ ಇಳಿಕೆ ಕಂಡಿದೆ. ಭಾನುವಾರದ ಚಿತ್ರದ ಕಲೆಕ್ಷನ್ ಕೇವಲ 20 ಕೋಟಿ ರೂಪಾಯಿ ಮಾತ್ರ. ಚಿತ್ರದ ಒಟ್ಟಾರೆ ಗಳಿಕೆ 108 ಕೋಟಿ ರೂಪಾಯಿ ಆಗಿದೆ.
ಇದನ್ನೂ ಓದಿ: ಪ್ರಭಾಸ್ ನಟನೆಯ ‘ರಾಜಾಸಾಬ್’ ಚಿತ್ರದ ನಾಲ್ಕು ದಿನದ ಶೂಟ್ಗೆ ಖರ್ಚಾಯ್ತು ನಾಲ್ಕು ಕೋಟಿ ರೂಪಾಯಿ
‘ಕಲ್ಕಿ 2898 ಎಡಿ’ ಸೂಪರ್ ಹಿಟ್ ಆದ ಬಳಿಕ ಪ್ರಭಾಸ್ ಒಪ್ಪಿಕೊಂಡ ಸಿನಿಮಾ ‘ರಾಜಾಸಾಬ್. ಈ ಚಿತ್ರವನ್ನು ಮಾರುತಿ ನಿರ್ದೇಶನ ಮಾಡಿದ್ದಾರೆ. ಸಿನಿಮಾ ರಿಲೀಸ್ಗೂ ಮೊದಲು ಅವರು ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಸಿನಿಮಾ ಅಂದುಕೊಂಡ ಮಟ್ಟಿಗೆ ಯಶಸ್ಸು ಕಾಣಿಸಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:05 am, Mon, 12 January 26