‘ದಿ ರಾಜಾಸಾಬ್’ ಬಗ್ಗೆ ಹರಿದಾಡಿದ ವದಂತಿಗೆ ಸಿಕ್ತು ಸ್ಪಷ್ಟನೆ
The Raaja Saab: ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ ಸಿನಿಮಾ ಈಗಾಗಲೇ ಹಲವು ಬಾರಿ ಬಿಡುಗಡೆ ಮುಂದೂಡಿದೆ. ಇವೇ ವರ್ಷ ಬಿಡುಗಡೆ ಆಗಬೇಕಿದ್ದ ಸಿನಿಮಾ ಈಗ ಮುಂದಿನ ವರ್ಷ ಬಿಡುಗಡೆ ಎನ್ನಲಾಗುತ್ತಿದೆ. ಇದರ ನಡುವೆ ಸಿನಿಮಾ ಬಿಡುಗಡೆ ಬಗ್ಗೆ ಮತ್ತೊಂದು ಗಾಳಿ ಸುದ್ದಿ ಹರಿದಾಡಿತ್ತು, ಆದರೆ, ಇದೀಗ ಅದರ ಬಗ್ಗೆ ಸ್ಪಷ್ಟನೆ ದೊರೆತಿದೆ. ಏನದು? ಮಾಹಿತಿ ಇಲ್ಲಿದೆ ನೋಡಿ...

ರೆಬೆಲ್ ಸ್ಟಾರ್ ಪ್ರಭಾಸ್ (Prabhas) ಅವರ ಸಿನಿಮಾಗಳು ಬರುತ್ತವೆ ಎಂದರೆ ಫ್ಯಾನ್ಸ್ ಕಾದಿರುತ್ತಾರೆ. ಈಗ ಅವರ ಅಭಿನಯದ ‘ದಿ ರಾಜಾ ಸಾಬ್’ ಸಿನಿಮಾ ರಿಲೀಸ್ಗೆ ರೆಡಿ ಇದೆ. ಈ ಚಿತ್ರ ಟ್ರೇಲರ್ ಮೂಲಕ ಕೇವಲ ಭಾರತ ಮಾತ್ರವಲ್ಲದೆ, ಜಗತ್ತಿನ ಸಿನಿಮಾ ಪ್ರೇಕ್ಷಕರ ಗಮನ ಸೆಳೆದಿದೆ. ಫಿಕ್ಷನ್ ಕಥೆ ಸಿನಿಮಾದ ಜೀವಾಳ. ಹಾರರ್ ಕಾಮಿಡಿ ಶೈಲಿಯಲ್ಲಿ ಸಿನಿಮಾ ಮೂಡಿ ಬರುತ್ತಿದೆ. ಈ ಚಿತ್ರದ ಬಗ್ಗೆ ಸಾಕಷ್ಟು ವದಂತಿ ಹುಟ್ಟಿಕೊಂಡಿತ್ತು. ಇದಕ್ಕೆ ಚಿತ್ರತಂಡದ ಕಡೆಯಿಂದ ಸ್ಪಷ್ಟನೆ ಸಿಕ್ಕಿದೆ.
ಸಂಕ್ರಾಂತಿ ಹಬ್ಬದಂದು ದೊಡ್ಡ ಬಜೆಟ್ ಸಿನಿಮಾಗಳನ್ನು ತೆರೆಗೆ ತರಲು ಎಲ್ಲರೂ ಆಸಕ್ತಿ ತೋರಿಸೋದನ್ನು ಕಾಣಬಹುದು. ಅದರಲ್ಲೂ ತೆಲುಗು ಹಾಗೂ ತಮಿಳು ಮಂದಿಗೆ ಈ ಹಬ್ಬ ವಿಶೇಷ. ಹೀಗಾಗಿ, ‘ರಾಜಾಸಾಬ್’ ಸಿನಿಮಾನ ಸಂಕ್ರಾಂತಿ ಹಬ್ಬದ ಪ್ರಯುಕ್ತ ಬಿಡುಗಡೆ ಮಾಡಲು ತಂಡ ಪ್ಲ್ಯಾನ್ ರೂಪಿಸಿದೆ. ಹೀಗಿರುವಾಗ ಇದೇ ಸಿನಿಮಾ ಬಿಡುಗಡೆಯನ್ನು ಮುಂದೂಡಿದೆ ಎಂಬ ವದಂತಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದೆ. ಈ ವದಂತಿಗೆ ಚಿತ್ರತಂಡ ಸ್ಪಷ್ಟನೆ ನೀಡಿದ್ದು, ವದಂತಿಯನ್ನು ತಳ್ಳಿ ಹಾಕಿದೆ.
ಮುಂದಿನ ವರ್ಷ ಜನವರಿ 9ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ‘ದಿ ರಾಜಾಸಾಬ್’ ಸಿನಿಮಾ ತೆರೆಗೆ ಬರುವುದು ಖಚಿತ ಎಂದು ಚಿತ್ರತಂಡ ಹೇಳಿದೆ. ಯಾವುದೇ ವಿಳಂಬವಿಲ್ಲದೆ, ಅತ್ಯುನ್ನತ ತಾಂತ್ರಿಕ ಗುಣಮಟ್ಟವನ್ನು ಕಾಪಾಡಿಕೊಂಡು, ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ಭರದಿಂದ ಸಾಗುತ್ತಿವೆ ಎಂದು ತಂಡ ಮಾಹಿತಿ ನೀಡಿದೆ.
ಇದನ್ನೂ ಓದಿ:‘ಬಾಹುಬಲಿ: ದಿ ಎಪಿಕ್’ ರಿಲೀಸ್ಗೂ ಮೊದಲು ರಾಜಮೌಳಿ-ಪ್ರಭಾಸ್ಗೆ ಸುದೀಪ್ ಅಭಿಮಾನಿಗಳ ಎಚ್ಚರಿಕೆ
ಜನರ ಊಹೆಗೂ ಮೀರಿ ಅಂದರೆ ಲಾರ್ಜರ್ ದ್ಯಾನ್ ಲೈಫ್’ ರೀತಿಯಲ್ಲಿ ‘ರಾಜಾಸಾಬ್’ ಸಿನಿಮಾವನ್ನು ನಿರ್ಮಿಸಲಾಗುತ್ತಿದೆ. ಪ್ರಪಂಚದಾದ್ಯಂತದ ಪ್ರೇಕ್ಷಕರಿಗೆ ಒಂದು ಅತ್ಯುತ್ತಮ ಥಿಯೇಟರ್ ಅನುಭವ ನೀಡಲೆಂದೇ ಈ ಸಿನಿಮಾ ನಿರ್ಮಾಣಮಾಡಲಾಗಿದೆ ಎಂದು ತಂಡ ಹೇಳಿಕೊಂಡಿದೆ. ‘ಪೀಪಲ್ ಮೀಡಿಯಾ ಫ್ಯಾಕ್ಟರಿ’ ಬ್ಯಾನರ್ ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ಮಾರುತಿ ನಿರ್ದೇಶನ ಮಾಡಿದ್ದಾರೆ. ಪ್ರಭಾಸ್ ಅವರು ಹಲವು ರೀತಿಯ ಪಾತ್ರಗಳನ್ನು ಮಾಡಿದ್ದಾರೆ. ಈಗ ಅವರು ಈ ಚಿತ್ರದಲ್ಲಿ ಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಅವರಿಗೆ ಈ ಸಿನಮಾದಲ್ಲಿ ವಿವಿಧ ರೀತಿಯ ಗೆಟಪ್ಗಳು ಇವೆ ಎಂದು ಹೇಳಲಾಗುತ್ತಾ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



