‘ಬಾಹುಬಲಿ: ದಿ ಎಪಿಕ್’ ರಿಲೀಸ್ಗೂ ಮೊದಲು ರಾಜಮೌಳಿ-ಪ್ರಭಾಸ್ಗೆ ಸುದೀಪ್ ಅಭಿಮಾನಿಗಳ ಎಚ್ಚರಿಕೆ
ಬಾಹುಬಲಿ: ದಿ ಎಪಿಕ್ ಅಕ್ಟೋಬರ್ 31ರಂದು ತೆರೆಗೆ ಬರುತ್ತಿದೆ. 10 ವರ್ಷ ಪೂರೈಸಿದ ಬಾಹುಬಲಿ ಸಂಭ್ರಮಕ್ಕಾಗಿ ಸಿದ್ಧವಾಗಿರುವ ಈ ಚಿತ್ರದಲ್ಲಿ ಸುದೀಪ್ ಅವರ ಅಸ್ಲಾಮ್ ಖಾನ್ ಪಾತ್ರದ ದೃಶ್ಯದ ಬಗ್ಗೆ ಅಭಿಮಾನಿಗಳಿಗೆ ಆತಂಕವಿದೆ. ಒಂದು ವೇಳೆ ಸುದೀಪ್ ದೃಶ್ಯ ತೆಗೆದುಹಾಕಿದರೆ, ರಾಜಮೌಳಿ ಮತ್ತು ಪ್ರಭಾಸ್ ಅವರ ಸಿನಿಮಾಗಳನ್ನು ಕರ್ನಾಟಕದಲ್ಲಿ ಬಹಿಷ್ಕರಿಸುವುದಾಗಿ ಸುದೀಪ್ ಫ್ಯಾನ್ಸ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

‘ಬಾಹುಬಲಿ: ದಿ ಎಪಿಕ್’ (Bahubali: The Epic) ಸಿನಿಮಾ ಅಕ್ಟೋಬರ್ 31ರಂದು ರಿಲೀಸ್ ಆಗುತ್ತಿದೆ. ಈ ಸಿನಿಮಾ ಬಗ್ಗೆ ಫ್ಯಾನ್ಸ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ‘ಬಾಹುಬಲಿ: ದಿ ಬಿಗಿನಿಂಗ್’ ಹಾಗೂ ‘ಬಾಹುಬಲಿ 2: ದಿ ಕನ್ಕ್ಲ್ಯೂಶನ್’ ಸಿನಿಮಾಗಳನ್ನು ಒಂದುಗೂಡಿಸಿ ‘ಬಾಹುಬಲಿ: ದಿ ಎಪಿಕ್’ ಸಿನಿಮಾ ಸಿದ್ಧಗೊಂಡಿದೆ. ‘ಬಾಹುಬಲಿ’ ಸಿನಿಮಾ ರಿಲೀಸ್ ಆಗಿ 10 ವರ್ಷಗಳು ಕಳೆದ ಹಿನ್ನೆಲೆಯಲ್ಲಿ ಈ ಚಿತ್ರ ತೆರೆಗೆ ಬರುತ್ತಿದೆ. ಈ ಸಿನಿಮಾ ರಿಲೀಸ್ ಸಂದರ್ಭದಲ್ಲಿ ಸುದೀಪ್ ಅಭಿಮಾನಿಗಳು ಒಂದು ದೊಡ್ಡ ಎಚ್ಚರಿಕೆ ನೀಡಿದ್ದಾರೆ.
ಸುದೀಪ್ ಅವರು ‘ಬಾಹುಬಲಿ’ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರದ ಹೆಸರು ಅಸ್ಲಾಮ್ ಖಾನ್. ಈ ಪಾತ್ರ ಸಾಕಷ್ಟು ಗಮನ ಸೆಳೆದಿತ್ತು. ಅವರು ತೆರೆಮೇಲೆ ಕಾಣಿಸಿಕೊಳ್ಳೋದು ಕೆಲವೇ ನಿಮಿಷ ಆದರೂ ಈ ಪಾತ್ರ ಗಮನ ಸೆಳೆಯುವ ರೀತಿಯಲ್ಲಿ ಇತ್ತು. ಈಗ ‘ಬಾಹುಬಲಿ: ದಿ ಎಪಿಕ್’ ಚಿತ್ರದಲ್ಲಿ ಈ ದೃಶ್ಯ ಇರುತ್ತದೆಯೋ ಅಥವಾ ಇಲ್ಲವೋ ಎಂಬ ಪ್ರಶ್ನೆ ಮೂಡಿದೆ.
ಇದನ್ನೂ ಓದಿ: ಬಿಡುಗಡೆ ಆಯ್ತು ‘ಬಾಹುಬಲಿ: ದಿ ಎಪಿಕ್’ ಟೀಸರ್, ವಿಶೇಷತೆಯೇನು?
‘ಬಾಹುಬಲಿ: ದಿ ಎಪಿಕ್’ ಸಿನಿಮಾದ ಅವಧಿ 3 ಗಂಟೆ 45 ನಿಮಿಷ ಇದೆ. ಇದರಲ್ಲಿ ಹಲವು ವಿಚಾರಗಳನ್ನು ರಾಜಮೌಳಿ ಅವರು ತೋರಿಸಬೇಕಿದೆ. ಆದರೆ, ಅದು ಸಣ್ಣ ವಿಚಾರ ಏನು ಅಲ್ಲ. ಈ ವೇಳೆ ಹಲವು ದೃಶ್ಯಗಳನ್ನು ರಾಜಮೌಳಿ ಕೈ ಬಿಡಬೇಕಾದ ಪರಿಸ್ಥಿತಿ ಎದುರಾಗಬಹುದು. ಈಗ ಸುದೀಪ್ ದೃಶ್ಯ ಇರುತ್ತದೆಯೋ ಅಥವಾ ಇಲ್ಲವೋ ಎಂಬ ಆತಂಕ ಸುದೀಪ್ ಅಭಿಮಾನಿಗಳಿಗೆ ಮೂಡಿದೆ.
ಸುದೀಪ್ ಪಾತ್ರದ ಬಗ್ಗೆ ಮಾಡಲಾದ ಟ್ವೀಟ್
If this scene is deleted from the movie #BaahubaliTheEpic, Prabhas and Rajamouli will have to face consequences from Sudeep’s fans in the future.
•We at KA are going to boycott the upcoming Prabhas and Mauli movies.
This is a strict warning. pic.twitter.com/21U9lyGFz0
— BLaCK ADAM (@N2Sharath) October 29, 2025
ಬ್ಲ್ಯಾಕ್ ಆ್ಯಡಮ್ ಹೆಸರಿನ ಟ್ವಿಟರ್ ಖಾತೆ ಮೂಲಕ ಪೋಸ್ಟ್ ಒಂದನ್ನು ಹಾಕಲಾಗಿದೆ. ಇವರು ತಮ್ಮನ್ನು ಸುದೀಪ್ ಅಭಿಮಾನಿ ಎಂದು ಕರೆದುಕೊಂಡಿದ್ದಾರೆ. ‘ಕೆಳಗೆ ತೋರಿಸಿದ (ಬಾಹುಬಲಿ ಸಿನಿಮಾದ ಸುದೀಪ್ ಇರೋ ದೃಶ್ಯ) ದೃಶ್ಯ ಬಾಹುಬಲಿ ದಿ ಎಪಿಕ್ ಚಿತ್ರದಿಂದ ತೆಗೆಯಲ್ಪಟ್ಟರೆ ಪ್ರಭಾಸ್ ಹಾಗೂ ರಾಜಮೌಳಿ ಅವರುಗಳು ಸುದೀಪ್ ಅಭಿಮಾನಿಗಳಿಂದ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ನಾವು ಕರ್ನಾಟಕದಲ್ಲಿ ನಿಮ್ಮ ಸಿನಿಮಾಗಳನ್ನು ಬಹಿಷ್ಕಾರ ಮಾಡುತ್ತೇವೆ. ಇದು ಕಠಿಣ ಎಚ್ಚರಿಕೆ’ ಎಂದು ಬರೆಯಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








