Multiplex: ಜನರು ಹೊರಗಿನ ಆಹಾರ ತರದಂತೆ ನಿರ್ಬಂಧಿಸುವ ಹಕ್ಕು ಚಿತ್ರಮಂದಿರದ ಮಾಲೀಕರಿಗೆ ಇದೆ: ಸುಪ್ರೀಂ ಕೋರ್ಟ್​

| Updated By: ಮದನ್​ ಕುಮಾರ್​

Updated on: Jan 03, 2023 | 6:50 PM

Cinema Hall | Supreme Court: ಚಿತ್ರಮಂದಿರಗಳಲ್ಲಿ ಹೊರಗಿನ ಆಹಾರ ಪದಾರ್ಥಗಳ ನಿರ್ಬಂಧದ ಕುರಿತಂತೆ ಸುಪ್ರೀಂ ಕೋರ್ಟ್​ ಮಹತ್ವದ ಆದೇಶ ನೀಡಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

Multiplex: ಜನರು ಹೊರಗಿನ ಆಹಾರ ತರದಂತೆ ನಿರ್ಬಂಧಿಸುವ ಹಕ್ಕು ಚಿತ್ರಮಂದಿರದ ಮಾಲೀಕರಿಗೆ ಇದೆ: ಸುಪ್ರೀಂ ಕೋರ್ಟ್​
ಮಲ್ಟಿಪ್ಲೆಕ್ಸ್ (ಸಾಂದರ್ಭಿಕ ಚಿತ್ರ)
Follow us on

ಚಿತ್ರಮಂದಿರ ಮತ್ತು ಮಲ್ಟಿಪ್ಲೆಕ್ಸ್​ಗೆ (Multiplex) ಪ್ರೇಕ್ಷಕರು ಹೊರಗಿನಿಂದ ಆಹಾರ ಪದಾರ್ಥ ಮತ್ತು ಪಾನೀಯಗಳನ್ನು ತರದಂತೆ ನಿರ್ಬಂಧ ಹೇರಿರುವುದನ್ನು ಮೊದಲಿನಿಂದಲೂ ಅನೇಕರು ಖಂಡಿಸುತ್ತಾ ಬಂದಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್​ (Cinema Hall) ಮಹತ್ವದ ತೀರ್ಪು ನೀಡಿದೆ. ‘ಪ್ರೇಕ್ಷಕರು ಹೊರಗಿನ ತಿಂಡಿ ತಿನಿಸು ಮತ್ತು ಪಾನೀಯಗಳನ್ನು ತರದಂತೆ ನಿರ್ಬಂಧ ವಿಧಿಸುವ ಹಕ್ಕು ಚಿತ್ರಮಂದಿರದ ಮಾಲೀಕರಿಗೆ ಇದೆ’ ಎಂದು ಸುಪ್ರೀಂ ಕೋರ್ಟ್​ ಹೇಳಿದೆ. ಚಿತ್ರಮಂದಿರ (Theatre) ಅಥವಾ ಮಲ್ಟಿಪ್ಲೆಕ್ಸ್​ಗಳಿಗೆ ಹೋಗುವ ಪ್ರೇಕ್ಷಕರು ಅಲ್ಲಿನ ನಿಯಮಗಳನ್ನು ಪಾಲಿಸತಕ್ಕದ್ದು ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.

​ಚಿತ್ರಮಂದಿರದ ಒಳಗೆ ಪ್ರೇಕ್ಷಕರು ಹೊರಗಿನ ಆಹಾರ ಪದಾರ್ಥಗಳನ್ನು ತೆಗೆದುಕೊಂಡು ಹೋಗಬಹುದು ಎಂದು ಜಮ್ಮು ಕಾಶ್ಮೀರ ಹೈ ಕೋರ್ಟ್ 2018ರಲ್ಲಿ ತೀರ್ಪು ನೀಡಿತ್ತು. ಅದನ್ನು ಪ್ರಶ್ನಿಸಿ ಚಿತ್ರಮಂದಿರದ ಮಾಲೀಕರು ಮತ್ತು ಭಾರತೀಯ ಮಲ್ಟಿಪ್ಲೆಕ್ಸ್​ ಅಸೋಸಿಯೇಷನ್​ನವರು ಸುಪ್ರೀಂ ಕೋರ್ಟ್​ ಮೊರೆ ಹೋಗಿದ್ದರು. ಅದರ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್​ ಹೊಸ ತೀರ್ಪು ನೀಡಿದೆ. ಈ ಹಿಂದೆ ಹೈ ಕೋರ್ಟ್​ ನೀಡಿದ್ದ ಆದೇಶವನ್ನು ವಜಾ ಮಾಡಿದೆ.

ಇದನ್ನೂ ಓದಿ: Har Ghar Tiranga: ಚಿತ್ರಮಂದಿರದ ಮೇಲೆ ತ್ರಿವರ್ಣ ಧ್ವಜ ಹಾರಿಸಿದ ‘ಗೋಲ್ಡನ್​ ಸ್ಟಾರ್​’ ಗಣೇಶ್​

ಚಿತ್ರಮಂದಿರಗಳು ಮತ್ತು ಮಲ್ಟಿಪ್ಲೆಕ್ಸ್​ ಪರವಾಗಿ ಹಿರಿಯ ವಕೀಲರಾದ ಕೆ.ವಿ. ವಿಶ್ವನಾಥನ್​ ವಾದ ಮಂಡಿಸಿದರು. ‘ಚಿತ್ರಮಂದಿರ ಎಂಬುದು ಸಾರ್ವಜನಿಕ ಆಸ್ತಿ ಅಲ್ಲ. ಅಲ್ಲಿಗೆ ಪ್ರವೇಶ ನೀಡುವ ಹಕ್ಕು ಚಿತ್ರಮಂದಿರದ ಮಾಲೀಕರಿಗೆ ಸೇರಿದ್ದು. ಅಲ್ಲಿನ ಆಹಾರವನ್ನು ಕಡ್ಡಾಯವಾಗಿ ಖರೀದಿಸಬೇಕು ಎಂಬ ಒತ್ತಾಯ ಇಲ್ಲ. ಶುದ್ಧ ಕುಡಿಯುವ ನೀರನ್ನು ಚಿತ್ರಮಂದಿಗಳು ಒದಗಿಸುತ್ತಿವೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ದಶಕಗಳ ನಂತರ ಜಮ್ಮು-ಕಾಶ್ಮೀರದಲ್ಲಿ ಚಲನಚಿತ್ರ ಪ್ರದರ್ಶನ ಆರಂಭ; ಸೆ. 20 ರಂದು ಮಲ್ಟಿಪ್ಲೆಕ್ಸ್ ಓಪನ್​

ಮಲ್ಟಿಪ್ಲೆಕ್ಸ್​ ಮತ್ತು ಚಿತ್ರಮಂದಿರಗಳಿಗೆ ಚಿಕ್ಕ ಮಕ್ಕಳನ್ನು ಕರೆದುಕೊಂಡು ಬರುವ ಪ್ರೇಕ್ಷಕರು ಮಕ್ಕಳಿಗಾಗಿ ಹೊರಗಿನ ಆಹಾರವನ್ನು ತೆಗೆದುಕೊಂಡ ಬರಲು ಅನುಮತಿ ನೀಡಬೇಕು ಹಾಗೂ ಉಚಿತವಾಗಿ ಕುಡಿಯುವ ನೀರನ್ನು ಒದಗಿಸಬೇಕು ಎಂದು ಸುಪ್ರೀಂ ಕೋರ್ಟ್​ ಆದೇಶಿಸಿದೆ. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಅವರನ್ನು ಒಳಗೊಂಡ ಪೀಠವು ಈ ಆದೇಶ ನೀಡಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 5:58 pm, Tue, 3 January 23