ಲೇಡಿ ಸ್ಟಾರ್ಗಳ ಫಿಟ್ನೆಸ್ ಟ್ರೇನರ್ ವೇತನ ಕೇಳಿದ್ರೆ ಬೆರಗಾಗೋದು ಗ್ಯಾರಂಟಿ
ಸೆಲೆಬ್ರಿಟಿಗಳು ಜಿಮ್ನಲ್ಲಿ ನಿತ್ಯವೂ ವರ್ಕೌಟ್ ಮಾಡುತ್ತಾರೆ. ಈ ಮೂಲಕ ಫಿಟ್ ಆಗಿರುತ್ತಾರೆ. ಪ್ರತಿ ಸೆಲೆಬ್ರಿಟಿಗಳಿಗೂ ಪ್ರತ್ಯೇಕ ಜಿಮ್ ಟ್ರೇನರ್ ಇರುತ್ತಾರೆ. ಅವರಿಗೆ ಪ್ರತಿ ತಿಂಗಳು ದೊಡ್ಡ ಮೊತ್ತದ ಸಂಭಾವನೆ ಸಿಗುತ್ತದೆ. ಹಾಗಾದರೆ ಯಾವ ಸೆಲೆಬ್ರಿಟಿಗಳ ಟ್ರೇನರ್ ಎಷ್ಟು ಸಂಭಾವನೆ ತೆಗೆದುಕೊಳ್ಳುತ್ತಾರೆ ಎಂಬ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಸೆಲೆಬ್ರಿಟಿಗಳು ಫಿಟ್ನೆಸ್ಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಈ ಕಾರಣದಿಂದಲೇ ಅವರು ಲಕ್ಷಾಂತರ ರೂಪಾಯಿ ಖರ್ಚು ಮಾಡುತ್ತಾರೆ. ಆಹಾರ ಕ್ರಮದಲ್ಲಿ ಸಾಕಷ್ಟು ಎಚ್ಚರಿಕೆ ತೆಗೆದುಕೊಳ್ಳುತ್ತಾರೆ. ಕುರುಕಲು ತಿಂಡಿಯನ್ನು ತಿನ್ನೋದು ತೀರಾ ಕಡಿಮೆ. ಸಿಹಿ ಪದಾರ್ಥಗಳಿಂದ ದೂರವೇ ಇರುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಜಿಮ್ನಲ್ಲಿ ನಿತ್ಯವೂ ವರ್ಕೌಟ್ ಮಾಡುತ್ತಾರೆ. ಈ ಮೂಲಕ ಫಿಟ್ ಆಗಿರುತ್ತಾರೆ. ಪ್ರತಿ ಸೆಲೆಬ್ರಿಟಿಗಳಿಗೂ ಪ್ರತ್ಯೇಕ ಜಿಮ್ ಟ್ರೇನರ್ ಇರುತ್ತಾರೆ. ಅವರಿಗೆ ಪ್ರತಿ ತಿಂಗಳು ದೊಡ್ಡ ಮೊತ್ತದ ಸಂಭಾವನೆ ಸಿಗುತ್ತದೆ. ಹಾಗಾದರೆ ಯಾವ ಸೆಲೆಬ್ರಿಟಿಗಳ ಟ್ರೇನರ್ (Celebrities Fitness Trainer) ಎಷ್ಟು ಸಂಭಾವನೆ ತೆಗೆದುಕೊಳ್ಳುತ್ತಾರೆ ಎಂಬ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
ಆಲಿಯಾ ಭಟ್
‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾದಿಂದ ಆಲಿಯಾ ಭಟ್ ಗೆಲುವಿನ ನಗೆ ಬೀರಿದ್ದಾರೆ. ಅವರ ಬಾಳಲ್ಲಿ ಒಳ್ಳೆಯ ಘಟನೆಗಳು ನಡೆಯುತ್ತಿವೆ. ತಾವು ಪ್ರೀತಿಸಿದ ರಣಬೀರ್ ಕಪೂರ್ ಜೊತೆ ಅವರು ಮದುವೆ ಆದರು. ಅವರಿಗೆ ಮಗು ಕೂಡ ಜನಿಸಿದೆ. ಮಗಳು ಜನಿಸಿದ ಬಳಿಕವೂ ಆಲಿಯಾ ಫಿಟ್ನೆಸ್ ಕಾಪಾಡಿಕೊಂಡು ಹೋಗುತ್ತಿದ್ದಾರೆ. ಆಲಿಯಾಗೆ ಯಾಸ್ಮಿನ್ ಕರಾಚಿವಾಲ ಟ್ರೇನ್ ಮಾಡುತ್ತಾರೆ. ಇದಕ್ಕೆ ಪ್ರತಿಯಾಗಿ ತಿಂಗಳಿಗೆ 45 ಸಾವಿರ ರೂಪಾಯಿ ಸಿಗುತ್ತಿದೆ.
ಜಾಕ್ವೆಲಿನ್ ಫರ್ನಾಂಡಿಸ್
ಜಾಕ್ವೆಲಿನ್ ಫರ್ನಾಂಡಿಸ್ ಅವರು ಬಳಕುವ ಬಳ್ಳಿಯಂತಿದ್ದಾರೆ. ಅವರು ಜಿಮ್ನಲ್ಲಿ ಸಾಕಷ್ಟು ಸಮಯ ಕಳೆಯುತ್ತಾರೆ. ಜೀವನದಲ್ಲಿ ಎಷ್ಟೇ ತೊಂದರೆ ಎದುರಾದರೂ ಅವರು ಜಿಮ್ನಲ್ಲಿ ವರ್ಕೌಟ್ ಮಾಡೋದು ತಪ್ಪಿಸೋದಿಲ್ಲ. ಇವರಿಗೆ ಸಿಂಡಿ ಜಾರ್ಡಿಯನ್ ಟ್ರೇನ್ ಮಾಡುತ್ತಾರೆ. ಇವರ ಸಂಭಾವನೆ ತಿಂಗಳಿಗೆ 30 ಸಾವಿರ ರೂಪಾಯಿ. ಇತ್ತೀಚೆಗೆ ಜಾಕ್ವೆಲಿನ್ ಅವರು ಸುದ್ದಿಯಲ್ಲಿದ್ದಾರೆ. 200 ಕೋಟಿ ರೂಪಾಯಿ ಪ್ರಕರಣದ ಪ್ರಮುಖ ಆರೋಪಿ ಸುಕೇಶ್ ಚಂದ್ರಶೇಖರ್ ಜೊತೆ ಜಾಕ್ವೆಲಿನ್ ನಂಟು ಹೊಂದಿದ್ದರು. ಹೀಗಾಗಿ ಅವರು ಕೂಡ ವಿಚಾರಣೆ ಎದುರಿಸುತ್ತಿದ್ದಾರೆ.
ಕಂಗನಾ ರಣಾವತ್
ಕಂಗನಾ ರಣಾವತ್ ಅವರು ಸದಾ ವಿವಾದ ಮೂಲಕವೇ ಸುದ್ದಿ ಆಗುತ್ತಾರೆ. ಹಾಗಂತ ಅವರು ಫಿಟ್ನೆಸ್ ಬಗ್ಗೆ ನಿರ್ಲಕ್ಷ್ಯ ತೋರುವುದಿಲ್ಲ. ಕಂಗನಾ ಅವರನ್ನು ಯೋಗೇಶ್ ಭತೀಜಾ ಟ್ರೇನ್ ಮಾಡುತ್ತಾರೆ. ಅವರಿಗೆ ಕಂಗನಾ ಪ್ರತಿ ತಿಂಗಳು 45 ಸಾವಿರ ರೂಪಾಯಿ ಪಾವತಿ ಮಾಡುತ್ತಾರೆ ಎಂದು ವರದಿ ಆಗಿದೆ.
ಕತ್ರಿನಾ ಕೈಫ್
ನಟಿ ಕತ್ರಿನಾ ಕೈಫ್ ಅವರು ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುತ್ತಾರೆ. ಅವರು ಮೊದಲಿನಿಂದಲೂ ಫಿಟ್ನೆಸ್ ಕಾಯ್ದುಕೊಂಡು ಬರುತ್ತಿದ್ದಾರೆ. ಅವರು ಸಾಕಷ್ಟು ಸಮಯ ಜಿಮ್ನಲ್ಲಿ ಕಳೆಯುತ್ತಾರೆ. ಅವರನ್ನು ಯಾಸ್ಮಿನ್ ಕರಾಚಿವಾಲಾ ಅವರೇ ಟ್ರೇನ್ ಮಾಡುತ್ತಾರೆ. ಅವರು ಇದಕ್ಕೆ ಪಡೆಯೋದು 45 ಸಾವಿರ ರೂಪಾಯಿ.
ಶ್ರದ್ಧಾ ಕಪೂರ್
ಶ್ರದ್ಧಾ ಕಪೂರ್ ಅವರು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಹಲವು ಸೂಪರ್ ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ. ಅವರಿಗೆ ಸಿಂಡಿ ಜೋರ್ಡನ್ ತರಬೇತಿ ನೀಡುತ್ತಾರೆ. ಇದಕ್ಕಾಗಿ ಅವರು 30 ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎಂದು ತಿಳಿದು ಬಂದಿದೆ.
ದೀಪಿಕಾ ಪಡುಕೋಣೆ
ನಟಿ ದೀಪಿಕಾ ಪಡುಕೋಣೆ ಅವರು ಫಿಟ್ನೆಸ್ ಬಗ್ಗೆ ಎಷ್ಟು ಗಮನ ನೀಡುತ್ತಾರೆ ಎಂಬ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಅವರು ಯೋಗ, ಜಿಮ್ ಮಾಡುತ್ತಾರೆ. ಯಾಸ್ಮಿನ್ ಕರಾಚಿವಾಲ ಅವರು ದೀಪಿಕಾರನ್ನು ಟ್ರೇನ್ ಮಾಡುತ್ತಾರೆ. ಇದಕ್ಕೆ 45 ಸಾವಿರ ರೂಪಾಯಿ ವೇತನ ಪಡೆಯುತ್ತಾರೆ.
ಇದನ್ನೂ ಓದಿ: ‘ಅತ್ಯುತ್ತಮ ನಟ’ ರಾಷ್ಟ್ರ ಪ್ರಶಸ್ತಿ ಪಡೆದ ಅಲ್ಲು ಅರ್ಜುನ್; ಆಲಿಯಾ ಭಟ್, ಕೃತಿ ಸನೋನ್ಗೆ ‘ಅತ್ಯುತ್ತಮ ನಟಿ’ ಅವಾರ್ಡ್
ಕರೀನಾ ಕಪೂರ್
ಕರೀನಾ ಕಪೂರ್ ಅವರು ಸದ್ಯ ಕುಟುಂಬದ ಕಡೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಇದರ ಜೊತೆಗೆ ನಿತ್ಯ ಜಿಮ್ ಮಾಡುತ್ತಾರೆ. ನಮ್ರತಾ ಪುರೋಹಿತ್ ಅವರು ಕರೀನಾಗೆ ಟ್ರೇನರ್ ಆಗಿದ್ದಾರೆ. ಇದಕ್ಕೆ ಪ್ರತಿಯಾಗಿ ಅವರು ಪ್ರತಿ ತಿಂಗಳು 65 ಸಾವಿರ ರೂಪಾಯಿ ಪಡೆಯುತ್ತಿದ್ದಾರೆ. ಯುವರಾಜ್ ಸಿಂಗ್, ಸೋನಾಕ್ಷಿ ಸಿನ್ಹಾ, ಸಾರಾ ಅಲಿ ಖಾನ್ ಇತರರನ್ನು ನಮ್ರತಾ ಟ್ರೇನ್ ಮಾಡುತ್ತಾರೆ.
ಮಲೈಕಾ ಅರೋರಾ
ಮಲೈಕಾ ಅರೋರಾ ಅವರ ವಯಸ್ಸು 49 ವರ್ಷ. ಈ ವಯಸ್ಸಲ್ಲೂ ಅವರು ಯುವತಿಯರನ್ನು ನಾಚಿಸುವಂತಿದ್ದಾರೆ. ಇವರನ್ನೂ ಟ್ರೇನ್ ಮಾಡೋದೂ ನಮ್ರತಾ ಪುರೋಹಿತ್ ಅನ್ನೋದು ವಿಶೇಷ. ಇವರಿಗೆ 73 ಸಾವಿರ ರೂಪಾಯಿ ಸಂಬಳ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:17 am, Wed, 30 August 23