Baby Movie: ತಮ್ಮನ ‘ಬೇಬಿ’ ಸಿನಿಮಾ ನೋಡಿಕೊಂಡು ಬಂದು ಅಚ್ಚರಿಯ ಹೇಳಿಕೆ ನೀಡಿದ ವಿಜಯ್​ ದೇವರಕೊಂಡ

Vijay Deverakonda: ‘ಬೇಬಿ’ ಸಿನಿಮಾದಲ್ಲಿ ಒಂದು ರೊಮ್ಯಾಂಟಿಕ್​ ಲವ್​​ಸ್ಟೋರಿ ಇದೆ. ಆದರೆ ಈ ಸಿನಿಮಾದ ಟ್ರೇಲರ್​ ಬಿಡುಗಡೆ ಆದಾಗ ಒಂದಷ್ಟು ವಿವಾದ ಶುರುವಾಗಿತ್ತು.

Baby Movie: ತಮ್ಮನ ‘ಬೇಬಿ’ ಸಿನಿಮಾ ನೋಡಿಕೊಂಡು ಬಂದು ಅಚ್ಚರಿಯ ಹೇಳಿಕೆ ನೀಡಿದ ವಿಜಯ್​ ದೇವರಕೊಂಡ
ವಿಜಯ್​ ದೇವರಕೊಂಡ, ಆನಂದ್​ ದೇವರಕೊಂಡ, ವೈಷ್ಣವಿ ಚೈತನ್ಯ

Updated on: Jul 14, 2023 | 12:31 PM

ನಟ ವಿಜಯ್​ ದೇವರಕೊಂಡ (Vijay Deverakonda) ಅವರು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಫೇಮಸ್​ ಆಗಿದ್ದಾರೆ. ಅವರು ನಟಿಸಿದ ‘ಲೈಗರ್​’ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್​ ಮಾಡಲಿಲ್ಲ. ಹಾಗಿದ್ದರೂ ಅವರಿಗೆ ಇರುವ ಬೇಡಿಕೆ ಕಡಿಮೆ ಆಗಿಲ್ಲ. ವಿಜಯ್​ ದೇವರಕೊಂಡ ಮಾತ್ರವಲ್ಲದೇ ಅವರ ಸಹೋದರ ಆನಂದ್​ ದೇವರಕೊಂಡ (Anand Deverakonda) ಕೂಡ ಸಿನಿಮಾ ರಂಗದಲ್ಲಿ ಆ್ಯಕ್ಟೀವ್​ ಆಗಿದ್ದಾರೆ. ಅವರು ಹೀರೋ ಆಗಿ ನಟಿಸಿರುವ ‘ಬೇಬಿ’ ಸಿನಿಮಾ (Baby Movie) ಬಿಡುಗಡೆ ಆಗಿದೆ. ಈ ಸಿನಿಮಾದ ಪ್ರೀಮಿಯರ್​ಗೆ ವಿಜಯ್​ ದೇವರಕೊಂಡ ಆಗಮಿಸಿದ್ದರು. ಈ ವೇಳೆ ಅವರು ಹೆಚ್ಚು ಮಾತನಾಡಲು ಇಷ್ಟಪಟ್ಟಿಲ್ಲ. ಅಲ್ಲಿ ಅವರು ಹೇಳಿದ್ದು ಏನು? ಇಲ್ಲಿದೆ ವಿವರ..

‘ಬೇಬಿ’ ಸಿನಿಮಾದಲ್ಲಿ ಒಂದು ರೊಮ್ಯಾಂಟಿಕ್​ ಲವ್​​ಸ್ಟೋರಿ ಇದೆ. ಈ ಸಿನಿಮಾದ ಟ್ರೇಲರ್​ ಬಿಡುಗಡೆ ಆದಾಗ ಒಂದಷ್ಟು ವಿವಾದ ಶುರುವಾಗಿತ್ತು. ಹುಡುಗಿಯರ ಮೈಬಣ್ಣದ ಬಗ್ಗೆ ಈ ಸಿನಿಮಾದಲ್ಲಿ ಲೇವಡಿ ಮಾಡಲಾಗಿದೆ ಎಂದು ಕೆಲವರು ತಕರಾರು ತೆಗೆದಿದ್ದರು. ಅಲ್ಲದೇ ಸಿನಿಮಾದ ಅವಧಿ ಹೆಚ್ಚು ದೀರ್ಘವಾಗಿದೆ ಎಂದು ಕೊಂಕು ನುಡಿಯಲಾಗಿತ್ತು. ಆದರೆ ಈಗ ಸಿನಿಮಾ ರಿಲೀಸ್​ ಆಗಿದ್ದು, ಪಾಸಿಟಿವ್​ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ವಿಜಯ್​ ದೇವರಕೊಂಡ ಅವರಿಗೂ ಈ ಸಿನಿಮಾ ಇಷ್ಟ ಆಗಿದೆ.

ಇದನ್ನೂ ಓದಿ: Vijay Devarakonda: ಏಕಕಾಲಕ್ಕೆ ಮೂರು ಸಿನಿಮಾಗಳಲ್ಲಿ ಬ್ಯುಸಿ ಆದ ಟಾಲಿವುಡ್​ ನಟ ವಿಜಯ್​ ದೇವರಕೊಂಡ

ಸಾಯಿ ರಾಜೇಶ್​ ನಿರ್ದೇಶನ ಮಾಡಿರುವ ‘ಬೇಬಿ’ ಸಿನಿಮಾದಲ್ಲಿ ಆನಂದ್​ ದೇವರಕೊಂಡ ಅವರಿಗೆ ಜೋಡಿಯಾಗಿ ವೈಷ್ಣವಿ ಚೈತನ್ಯ ನಟಿಸಿದ್ದಾರೆ. ಅವರ ನಟನೆಗೆ ವಿಜಯ್​ ದೇವರಕೊಂಡ ಮೆಚ್ಚುಗೆ ಸೂಚಿಸಿದ್ದಾರೆ. ‘ಪ್ರಸಾದ್​ ಮಲ್ಟಿಪ್ಲೆಕ್ಸ್​’ನಲ್ಲಿ ಸಿನಿಮಾ ನೋಡಿ ಅವರು ಖುಷಿಪಟ್ಟಿದ್ದಾರೆ. ‘ನಾನು ಬೇಬಿ ಸಿನಿಮಾ ಬಗ್ಗೆ ಹೆಚ್ಚು ಮಾತನಾಡಲ್ಲ. ಪ್ರೀಮಿಯರ್​ ನೋಡಲು ಬಂದ ಜನರಿಗೆ ಧನ್ಯವಾದ ಅರ್ಪಿಸುತ್ತೇನೆ. ಆನಂದ್​, ವೈಷ್ಣವಿ ಅವರು ನನ್ನನ್ನು ಎಮೋಷನಲ್​ ಆಗಿಸಿದರು. ಈ ಸಿನಿಮಾ ಬಗ್ಗೆ ನಾನು 3-4 ದಿನಗಳ ಬಳಿಕ ಒಂದು ಇವೆಂಟ್​ನಲ್ಲಿ ಮಾತನಾಡುತ್ತೇನೆ’ ಎಂದು ವಿಜಯ್​ ದೇವರಕೊಂಡ ಹೇಳಿದ್ದಾರೆ.

ಇದನ್ನೂ ಓದಿ: ‘ನನ್ನ ಮೆಚ್ಚಿನ ಹುಡುಗಿ ಸಮಂತಾ’: ಕಡೆಗೂ ಬಹಿರಂಗವಾಗಿ ಒಪ್ಪಿಕೊಂಡ ವಿಜಯ್​ ದೇವರಕೊಂಡ

ವಿಜಯ್​ ದೇವರಕೊಂಡ ಅವರು ಈಗ ‘ಖುಷಿ’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರದಲ್ಲಿ ಅವರಿಗೆ ಜೋಡಿಯಾಗಿ ಸಮಂತಾ ರುತ್​ ಪ್ರಭು ನಟಿಸಿದ್ದಾರೆ. ಸಮಂತಾ ಅವರ ಅನಾರೋಗ್ಯದ ಕಾರಣದಿಂದ ಈ ಸಿನಿಮಾದ ಚಿತ್ರೀಕರಣ ವಿಳಂಬ ಆಗಿತ್ತು. ನಂತರ ಅವರು ಚೇತರಿಸಿಕೊಂಡು ಬಂದು ಶೂಟಿಂಗ್​ ಮುಗಿಸಿಕೊಟ್ಟರು. ಈಗ ಅವರು ಮತ್ತೆ ಹೆಚ್ಚಿನ ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿದ್ದಾರೆ. ಹಾಗಾಗಿ ‘ಖುಷಿ’ ಪ್ರಚಾರದ ಸಂಪೂರ್ಣ ಹೊಣೆ ವಿಜಯ್​ ದೇವರಕೊಂಡ ಮೇಲೆ ಬಿದ್ದಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us