‘ಈ ಗೆಲುವು ನಿನ್ನದೂ ಕೂಡ’; ಅನುಷ್ಕಾ ಶರ್ಮಾಗೆ ವಿರಾಟ್​ ಕೊಹ್ಲಿ ಪ್ರೀತಿಯ ಪತ್ರ

ವಿರಾಟ್ ಕೊಹ್ಲಿ ತಮ್ಮ ಕಳಪೆ ಪರ್ಫಾರ್ಮೆನ್ಸ್ ಅನೇಕ ಬಾರಿ ಟ್ರೋಲ್ ಆಗಿದ್ದು ಇದೆ. ಈ ಕಾರಣಕ್ಕೆ ಅವರನ್ನು ಅನೇಕರು ಟೀಕಿಸಿದ್ದಾರೆ. ಇದೆಲ್ಲವನ್ನೂ ಕೊಹ್ಲಿ ಮೆಟ್ಟಿ ನಿಂತಿದ್ದಾರೆ. ಇದಕ್ಕೆ ಅನುಷ್ಕಾ ಶರ್ಮಾ ಅವರು ನೀಡಿದ ಬೆಂಬಲವೂ ಕಾರಣ. ಹೀಗಾಗಿ ಅವರ ಪಾತ್ರವನ್ನು ವಿರಾಟ್ ಶ್ಲಾಘಿಸಿದ್ದಾರೆ.

‘ಈ ಗೆಲುವು ನಿನ್ನದೂ ಕೂಡ’; ಅನುಷ್ಕಾ ಶರ್ಮಾಗೆ ವಿರಾಟ್​ ಕೊಹ್ಲಿ ಪ್ರೀತಿಯ ಪತ್ರ
ಕೊಹ್ಲಿ-ಅನುಷ್ಕಾ

Updated on: Jul 01, 2024 | 12:03 PM

ಜೂನ್ 29ರಂದು ನಡೆದ ಟಿ20 ವಿಶ್ವಕಪ್ ಫೈನಲ್​ನಲ್ಲಿ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾನ ಸೋಲಿಸಿದೆ. ಈ ಪಂದ್ಯ ಗೆದ್ದ ಬಳಿಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರು ಟಿ20 ಫಾರ್ಮ್ಯಾಟ್ ಕ್ರಿಕೆಟ್​ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಈ ಪಂದ್ಯ ಗೆಲ್ಲಲು ಪ್ರತಿಯೊಬ್ಬ ಆಟಗಾರ ಹಾಕಿದ ಶ್ರಮ ತುಂಬಾನೇ ದೊಡ್ಡದು. ವಿಶೇಷ ಎಂದರೆ ಫೈನಲ್​​ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ ವಿರಾಟ್ ಕೊಹ್ಲಿ ಅವರು ಪತ್ನಿ ಅನುಷ್ಕಾ ಶರ್ಮಾ ನೀಡಿದ ಬೆಂಬಲವನ್ನು ಸ್ಮರಿಸಿದ್ದಾರೆ. ಅವರ ಪಾತ್ರವನ್ನು ಶ್ಲಾಘಿಸಿದ್ದಾರೆ.

ವಿರಾಟ್ ಕೊಹ್ಲಿ ಅವರು ಕ್ರಿಕೆಟ್​ನಲ್ಲಿ ಬ್ಯುಸಿ ಇದ್ದಾರೆ. ಹೀಗಾಗಿ ಮಕ್ಕಳನ್ನು ನೋಡಿಕೊಳ್ಳುವ ಸಂಪೂರ್ಣ ಜವಾಬ್ದಾರಿಯನ್ನು ಅನುಷ್ಕಾ ಶರ್ಮಾ ಅವರೇ ತೆಗೆದುಕೊಂಡಿದ್ದಾರೆ. ಈ ಕಾರಣದಿಂದಲೇ ಅವರು ಚಿತ್ರರಂಗದಿಂದ ದೂರ ಇದ್ದಾರೆ. ಈ ತ್ಯಾಗವನ್ನು ವಿರಾಟ್ ಅವರು ಪರೋಕ್ಷವಾಗಿ ಸ್ಮರಿಸಿಕೊಂಡಿದ್ದಾರೆ. ಈ ಕಾರಣಕ್ಕೆ ಪ್ರೀತಿಯಿಂದ ಪೋಸ್ಟ್ ಹಾಕಿದ್ದಾರೆ.

‘ನೀನಿಲ್ಲದೆ ಇದೆಲ್ಲವೂ ಸಾಧ್ಯವಿರಲಿಲ್ಲ. ನೀನು ನನ್ನನ್ನು ವಿನಮ್ರವಾಗಿ ಇರುವಂತೆ ಮಾಡಿದೆ. ನೀನು ಎಲ್ಲವನ್ನೂ ಪ್ರಾಮಾಣಿಕವಾಗಿ ಹೇಳುತ್ತೀಯಾ. ನಾನು ನಿನಗೆ ಸದಾ ಕೃತಜ್ಞ. ಈ ಗೆಲುವು ನನ್ನದಷ್ಟೇ ನಿನ್ನದೂ ಕೂಡ ಹೌದು. ನೀನು ನೀನಾಗಿರುವುದಕ್ಕೆ ಐ ಲವ್​ ಯೂ, ಧನ್ಯವಾದಗಳು’ ಎಂದು ಅನುಷ್ಕಾ ಅವರನ್ನು ವಿರಾಟ್ ಟ್ಯಾಗ್ ಮಾಡಿದ್ದಾರೆ.


ವಿರಾಟ್ ಕೊಹ್ಲಿ ಅವರು ಅನೇಕ ಬಾರಿ ಟ್ರೋಲ್ ಆಗಿದ್ದು ಇದೆ. ತಮ್ಮ ಕಳಪೆ ಪರ್ಫಾರ್ಮೆನ್ಸ್ ಕಾರಣಕ್ಕೆ ಅವರನ್ನು ಅನೇಕರು ಟೀಕಿಸಿದ್ದಾರೆ. ಆದರೆ, ಇದೆಲ್ಲವನ್ನೂ ಕೊಹ್ಲಿ ಮೆಟ್ಟಿ ನಿಂತಿದ್ದಾರೆ. ಇದಕ್ಕೆ ಅನುಷ್ಕಾ ಶರ್ಮಾ ಅವರು ನೀಡಿದ ಬೆಂಬಲವೂ ಕಾರಣ. ಅನುಷ್ಕಾ ಅವರು ವಿರಾಟ್ ಪರ ಯಾವಾಗಲೂ ನಿಂತಿದ್ದಾರೆ. ವಿರಾಟ್ ಅವರನ್ನು ಸಂಪೂರ್ಣವಾಗಿ ಬದಲಿಸಿದ್ದಾರೆ.

ಇದನ್ನೂ ಓದಿ:  ದಾಖಲೆ ಸೃಷ್ಟಿಸಿದ ವಿರಾಟ್ ಕೊಹ್ಲಿಯ ಒಂದೇ ಒಂದು ಪೋಸ್ಟ್​

ವಿರಾಟ್ ಅವರು ಟಿ20 ಫಾರ್ಮ್ಯಾಟ್​​ಗೆ ನಿವೃತ್ತಿ ಘೋಷಿಸಿರುವುದು ಅನೇಕರಿಗೆ ಬೇಸರ ಮೂಡಿಸಿದೆ. ಅವರು ಟೆಸ್ಟ್ ಹಾಗೂ ಏಕದಿನ ಪಂದ್ಯಗಳನ್ನು ಆಡಲಿದ್ದಾರೆ. ವಿರಾಟ್ ಅವರು ಆರ್​ಸಿಬಿ ಪರ ಆಟ ಮುಂದುವರಿಸಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us