AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೆಲುಗಿನ ಸ್ಟಾರ್​ಗಳಲ್ಲಿ ಇರುವ ಒಗ್ಗಟ್ಟು ಎಂಥದ್ದು? ಕನ್ನಡದವರಿಗೂ ಇದು ಮಾದರಿಯಾಗಬೇಕು

ತೆಲುಗು ಸ್ಟಾರ್ಸ್​ಗಳು ಒಬ್ಬರ ಚಿತ್ರಕ್ಕೆ ಒಬ್ಬರು ಬೆಂಬಲವಾಗಿ ನಿಲ್ಲುತ್ತಾರೆ. ಇದು ಮೊದಲಿನಿಂದಲೂ ನಡೆದುಕೊಂಡು ಬಂದ ಪದ್ಧತಿ. ಟಾಲಿವುಡ್ ನಟಿ ಲಕ್ಷ್ಮಿ ಮಂಚು ಅವರು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಸೆಲೆಬ್ರಿಟಿಗಳು ಕ್ರಿಯೇಟ್ ಮಾಡಿಕೊಂಡಿರೋ ವಾಟ್ಸಾಪ್ ಗ್ರೂಪ್ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ.

ತೆಲುಗಿನ ಸ್ಟಾರ್​ಗಳಲ್ಲಿ ಇರುವ ಒಗ್ಗಟ್ಟು ಎಂಥದ್ದು? ಕನ್ನಡದವರಿಗೂ ಇದು ಮಾದರಿಯಾಗಬೇಕು
ತೆಲುಗಿನ ಸ್ಟಾರ್​ಗಳಲ್ಲಿ ಇರುವ ಒಗ್ಗಟ್ಟು ಎಂಥದ್ದು? ಕನ್ನಡದವರಿಗೂ ಇದು ಮಾದರಿಯಾಗಬೇಕು
ರಾಜೇಶ್ ದುಗ್ಗುಮನೆ
|

Updated on: Jul 01, 2024 | 2:29 PM

Share

ಕನ್ನಡ ಚಿತ್ರರಂಗದಲ್ಲಿ ಒಗ್ಗಟ್ಟು ಇಲ್ಲ ಎನ್ನುವ ಆರೋಪ ಆಗಾಗ ಕೇಳಿ ಬರುತ್ತಲೇ ಇರುತ್ತದೆ. ಬೇರೆ ಚಿತ್ರರಂಗದಲ್ಲಿ ಸಾಕಷ್ಟು ಒಗ್ಗಟ್ಟಿದೆ. ಇದಕ್ಕೆ ಹೊಚ್ಚ ಹೊಸ ಉದಾಹರಣೆ ಸಿಕ್ಕಿದೆ. ಟಾಲಿವುಡ್ ನಟಿ ಲಕ್ಷ್ಮಿ ಮಂಚು ಅವರು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಅವರು ಹೇಳಿಕೊಂಡಿರೋ ವಿಚಾರ ಅನೇಕರಿಗೆ ಅಚ್ಚರಿ ತರಿಸಿದೆ. ಅಷ್ಟಕ್ಕೂ ಅವರು ರಿವೀಲ್ ಮಾಡಿದ ವಿಚಾರ ಏನು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

ಲಕ್ಷ್ಮಿ ಮಂಚು ಅವರು ಇತ್ತೀಚೆಗೆ ಸಂದರ್ಶನ ಒಂದರಲ್ಲಿ ಮಾತನಾಡಿದ್ದಾರೆ. ಈ ವೇಳೆ ಅವರು ಟಾಲಿವುಡ್ ಕಲಾವಿದರ ವಾಟ್ಸಾಪ್​ ಗ್ರೂಪ್ ಬಗ್ಗೆ ಮಾಹಿತಿ ರಿವೀಲ್ ಮಾಡಿದ್ದಾರೆ. ಅಲ್ಲು ಅರ್ಜುನ್, ರಾಮ್ ಚರಣ್, ರಾಣಾ ದಗ್ಗುಬಾಟಿ ಸೇರಿ 142 ಕಲಾವಿದರ ವಾಟ್ಸಾಪ್ ಗ್ರೂಪ್ ಇದೆ. ಹೊಸ ಪ್ರಾಜೆಕ್ಟ್​ಗಳ ಬಗ್ಗೆ ಈ ಗ್ರೂಪ್​ನಲ್ಲಿ ಮಾಹಿತಿ ನೀಡಲಾಗುತ್ತದೆಯಂತೆ.

‘ಈ ಗ್ರೂಪ್​ನಲ್ಲಿ ಇರುವ ಎಲ್ಲರೂ ಕಲಾವಿದರು. ಯಾವುದೇ ಸಿನಿಮಾದ ಟೀಸರ್​, ಟ್ರೇಲರ್ ಅಥವಾ ಸಿನಿಮಾ ರಿಲೀಸ್ ಇದ್ದರೆ ಆ ಬಗ್ಗೆ ಈ ಗ್ರೂಪ್​ನಲ್ಲಿ ಮಾಹಿತಿ ನೀಡಬೇಕು. ಎಲ್ಲರೂ ಕಡ್ಡಾಯವಾಗಿ ಪೋಸ್ಟ್ ಮಾಡಲೇಬೇಕು. ಆ ಮೆಸೇಜ್​ಗೆ ಎಲ್ಲರೂ ಉತ್ತರಿಸಬೇಕು. ಈ ವೈರತ್ವ ಸಾಕು ಎಂಬ ಸಾಲುಗಳೊಂದಿಗೆ ಈ ಗ್ರೂಪ್​ನ ಕ್ರಿಯೇಟ್ ಮಾಡಿದ್ದೇವೆ’ ಎಂದಿದ್ದಾರೆ ಲಕ್ಷ್ಮಿ ಮಂಚು.

‘ನನಗೆ ಈ ಗ್ರೂಪ್ ಜೊತೆ ಒಳ್ಳೆಯ ನಂಟಿದೆ. ರಾಮ್ ಚರಣ್, ರಾಣಾ ದಗ್ಗುಬಾಟಿ ಹಾಗೂ ನಾವೆಲ್ಲ ಒಟ್ಟಿಗೆ ಬೆಳೆದವರು. ಆ ಗುಂಪು ಯಾವಾಗಲೂ ಒಟ್ಟಿಗೆ ಇರುತ್ತದೆ. ನಾವು ಈ ಗುಂಪನ್ನು ಮತ್ತಷ್ಟು ಹಿರಿದಾಗಿಸಿದ್ದೇವೆ’ ಎಂದು ಲಕ್ಷ್ಮಿ ಮಂಚು ಹೇಳಿದ್ದಾರೆ.

ಇದನ್ನೂ ಓದಿ:  ಮದುವೆ ಸಂಭ್ರಮದಲ್ಲಿ ರಕುಲ್ ಪ್ರೀತ್ ಸಿಂಗ್, ಗೆಳತಿಯರೊಟ್ಟಿಗೆ ಬ್ಯಾಚುಲರ್ ಪಾರ್ಟಿ

‘ರಕುಲ್ ಪ್ರೀತ್ ಸಿಂಗ್ ಜೊತೆ ಒಳ್ಳೆಯ ಗೆಳೆತನ ಇದೆ. ನಾನು ಅವರ ಮನೆಯಲ್ಲೇ ಉಳಿದುಕೊಂಡಿದ್ದೆ. ಅವರು ಯಾವಾಗಲೂ ಮುಂಬೈಗೆ ಬರುವಂತೆ ಹೇಳುತ್ತಿದ್ದರು. ರಾಣಾ ದಗ್ಗುಬಾಟಿ ಬಳಿ ಈ ಬಗ್ಗೆ ಮಾತನಾಡಿದೆ. ನಾನು ಹೈದರಾಬಾದ್​ನಲ್ಲಿ ಯಾವಾಗಲೂ ಇರೋಕೆ ಸಾಧ್ಯವಿಲ್ಲ ಎಂದು ಹೇಳಿದರು. ಹೀಗಾಗಿ ನಾನು ಮುಂಬೈಗೆ ಶಿಫ್ಟ್ ಆದೆ. ಮುಂಬೈನಲ್ಲಿರೋ ರಾಮ್ ಚರಣ್ ನಿವಾಸದಲ್ಲಿ ನಾನು ಉಳಿದುಕೊಂಡಿದ್ದೆ’ ಎಂದಿದ್ದಾರೆ ಲಕ್ಷ್ಮಿ ಮಂಚು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಚಳಿಯೆಂದು ಹುತಾತ್ಮನಾದ ಸೈನಿಕನ ಪ್ರತಿಮೆಗೆ ಕಂಬಳಿ ಹೊದಿಸಿದ ಅಮ್ಮ
ಚಳಿಯೆಂದು ಹುತಾತ್ಮನಾದ ಸೈನಿಕನ ಪ್ರತಿಮೆಗೆ ಕಂಬಳಿ ಹೊದಿಸಿದ ಅಮ್ಮ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ಭುಗಿಲೆದ್ದ ಆಕ್ರೋಶ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ಭುಗಿಲೆದ್ದ ಆಕ್ರೋಶ
ಆರ್​ಸಿಬಿ ಪರ ಚೊಚ್ಚಲ ವಿಕೆಟ್ ಉರುಳಿಸಿದ ಲಾರೆನ್ ಬೆಲ್
ಆರ್​ಸಿಬಿ ಪರ ಚೊಚ್ಚಲ ವಿಕೆಟ್ ಉರುಳಿಸಿದ ಲಾರೆನ್ ಬೆಲ್
ಹಿಮಾಚಲ ಪ್ರದೇಶದಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ
ಹಿಮಾಚಲ ಪ್ರದೇಶದಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ