
ಕರ್ನಾಟಕದಲ್ಲಿ ‘ಥಗ್ ಲೈಫ್’ ಚಿತ್ರ (Thug Life Movie) ಬಿಡುಗಡೆಯಾದರೆ ಥಿಯೇಟರ್ಗಳನ್ನು ಸುಟ್ಟು ಹಾಕೋದಾಗಿ ಕನ್ನಡ ಪರ ಸಂಘಟನೆಗಳು ಎಚ್ಚರಿಕೆ ನೀಡಿದ್ದರು. ಈ ವಿಚಾರವಾಗಿ ಸಿನಿಮಾ ನಿರ್ಮಾಪಕ ಕಮಲ್ ಹಾಸನ್ ಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್ನಲ್ಲಿ ಅರ್ಜಿ ವಿಚಾರಣೆ ನಡೆಯುವಾಗಲೇ ನಿರ್ಮಾಪಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಅವರ ಪರವಾಗಿ ತೀರ್ಪು ಬಂದಿದೆ. ಚಿತ್ರ ಬಿಡುಗಡೆಗೆ ಪೂರ್ಣ ಪ್ರಮಾಣದಲ್ಲಿ ಸುಪ್ರೀಂಕೋರ್ಟ್ ಅನುಮತಿ ನೀಡಿದೆ. ಅಲ್ಲದೆ ರಾಜ್ಯ ಸರ್ಕಾರಕ್ಕೆ ಮಹತ್ವದ ಸೂಚನೆಯನ್ನ ನೀಡಿದೆ.
ಚಿತ್ರ ಬಿಡುಗಡೆ ವೇಳೆ ಗಲಾಟೆ, ಪ್ರತಿಭಟನೆ ಆಗಬಹುದು ಎಂಬುದು ‘ಥಗ್ ಲೈಫ್’ ಚಿತ್ರದ ಆತಂಕ. ಇದೇ ಆತಂಕದಲ್ಲಿ ತಂಡ ಕೋರ್ಟ್ ಮೆಟ್ಟಿಲೇರಿತ್ತು. ಸಿನಿಮಾ ಪ್ರದರ್ಶನ ವೇಳೆ ಪ್ರತಿಭಟನೆ ಹಾಗೂ ಗಲಾಟೆ ಆದರೆ, ಕಾನೂನು ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ ನೀಡಿದೆ. ಈಗ ಈ ಚಿತ್ರದ ಹಂಚಿಕೆಗೆ ಯಾರು ಮುಂದೆ ಬರುತ್ತಾರೆ ಎಂಬ ಪ್ರಶ್ನೆ ಮೂಡಿದೆ.
ಇದನ್ನೂ ಓದಿ:
ರಾಜ್ಯ ಸರ್ಕಾರದ ಪರ ವಕೀಲರು ಕೋರ್ಟ್ಗೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ನಾವು ಥಗ್ಲೈಫ್ ಸಿನಿಮಾ ಬಿಡುಗಡೆ ಮಾಡಲು ನಿಷೇಧ ಹೇರಿಲ್ಲ. ಚಿತ್ರ ಬಿಡುಗಡೆ ವೇಳೆ ಭದ್ರತೆಯನ್ನು ನೀಡಲು ಸಿದ್ಧವಿದ್ದೇವೆ’ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ನ್ಯಾಯಮೂರ್ತಿ ಉಜ್ಜಲ್ ಭುಯಾನ್, ‘ಚಿತ್ರ ಬಿಡುಗಡೆಯಾದರೆ ಸಿನಿಮಾ ಮಂದಿರಕ್ಕೆ ಬೆಂಕಿ ಹಚ್ಚುವ ಬೆದರಿಕೆ ಹಾಕಲಾಗಿದೆ. ಈ ಭಯದಲ್ಲಿ ನಿರ್ಮಾಪಕರು ಸಿನಿಮಾನ ಹೇಗೆ ಬಿಡುಗಡೆ ಮಾಡುತ್ತಾರೆ? ಚಿತ್ರ ಬಿಡುಗಡೆ ವೇಳೆ ಭದ್ರತೆ ನೀಡುವುದು ರಾಜ್ಯದ ಕರ್ತವ್ಯ’ ಎಂದು ಕೋರ್ಟ್ ಹೇಳಿದೆ.
ಸದ್ಯ ‘ಥಗ್ ಲೈಫ್’ ಸಿನಿಮಾ ರಿಲೀಸ್ ಮಾಡಲು ನಿರ್ಮಾಪಕ ಕಮಲ್ ಹಾಸನ್ ಅವರು ರೆಡಿ ಇದ್ದಾರೆ. ಆದರೆ, ಈಗಾಗಲೇ ಸಿನಿಮಾದ ಹಂಚಿಕೆ ಜವಾಬ್ದಾರಿ ತೆಗೆದುಕೊಂಡಿದ್ದ ವೆಂಕಟೇಶ್ ಅವರು ಸಿನಿಮಾ ಹಂಚಿಕೆಯಿಂದ ಹಿಂದೆ ಸರಿದಾಗಿದೆ. ಈಗ ಆ ಜಾಗಕ್ಕೆ ಯಾರು ಬರುತ್ತಾರೆ ಎಂಬುದು ಸದ್ಯದ ಪ್ರಶ್ನೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 2:54 pm, Thu, 19 June 25