ಮುಂಬೈ: ಸೋಷಿಯಲ್ ಮೀಡಿಯಾ ಪ್ರಭಾವಿಯಾಗಿರುವ ಫೈಸಲ್ ಶೇಖ್ ಬಂಧನವಾಗಿದ್ದು, ಗಂಭೀರ ಆರೋಪದಲ್ಲಿ ಸಿಲುಕಿಕೊಂಡಿದ್ದಾರೆ. ನವೆಂಬರ್ 3ರ ಮುಂಜಾನೆ ಅವರನ್ನು ಮುಂಬೈ ಪೊಲೀಸರು ಬಂಧಿಸಿರುವ ಮಾಹಿತಿ ಲಭ್ಯವಾಗಿದೆ. ಟಿಕ್ಟಾಕ್ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದ ಫೈಸಲ್ ಶೇಖ್ ಅಲಿಯಾಸ್ ಫೈಸು, ತಮ್ಮ ಐಷಾರಾಮಿ ಕಾರನ್ನು ಯದ್ವಾತದ್ವಾ ಓಡಿಸಿ ಸಿಕ್ಕಿಹಾಕಿಕೊಂಡಿದ್ದಾರೆ. ಮಿಲತ್ ನಗರದ ಓಷಿವರದ ಸಮೀಪ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋಗಳು ವೈರಲ್ ಆಗಿವೆ. ತಮ್ಮ ಐಷಾರಾಮಿ ಬಿಎಂಡಬ್ಲ್ಯು ಕಾರನ್ನು ಓಷಾವರದ ಸೊಸೈಟಿಗೆ ಕುಟ್ಟಿದ ನಂತರ, ಸ್ಥಳದಿಂದ ಫೈಸು ಕಾಲ್ಕಿತ್ತಿದ್ದಾರೆ. ನಂತರ ಪೊಲೀಸರು ಅವರನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಗೆ ಸಂಬಂಧಪಟ್ಟಂತೆ ಐಪಿಸಿ ಸೆಕ್ಷನ್ 279 ಹಾಗೂ 336ರ ಅನ್ವಯ ಪ್ರಕರಣವನ್ನು ದಾಖಲಿಸಲಾಗಿದೆ. ಸುದೈವವಶಾತ್ ಪ್ರಕರಣದಲ್ಲಿ ಯಾರಿಗೂ ಹಾನಿಯಾಗಿಲ್ಲ. ಇದಕ್ಕೆ ಸಂಬಂಧಪಟ್ಟಂತೆ ಇನ್ನಷ್ಟೇ ಹೆಚ್ಚಿನ ಮಾಹಿತಿಗಳು ತಿಳಿದುಬರಬೇಕಿದೆ.
ವೈರಲ್ ಆಗಿರುವ ವಿಡಿಯೋ:
#Team07 Actor faisu(faisal shaikh) along with his friends #BMW car which was Rashly on high speed ramp into #AmarJuicecentre AlTabook blgd in #millatnagar #Osihawara spot video, as per sources #Faisu07 was driving the car @MumbaiPolice pls verify & take action @CPMumbaiPolice pic.twitter.com/FFrB4pxMRE
— Mohsin shaikh ?? (@mohsinofficail) November 2, 2021
ಫೈಸಲ್ ಶೇಖ್ ಟಿಕ್ಟಾಕ್ ಮುಖಾಂತರ ಅಪಾರ ಜನಪ್ರಿಯತೆ ಗಳಿಸಿದ್ದು, ಪ್ರಸ್ತುತ ಇನ್ಸ್ಟಾಗ್ರಾಂ ಸೆಲೆಬ್ರಿಟಿಯಲ್ಲಿ ಓರ್ವರಾಗಿದಗ್ದಾರೆ. ಫೈಸುಗೆ 24.4 ಮಿಲಿಯನ್ ಹಿಂಬಾಲಕರಿದ್ದು, ಕೆಲವು ಮ್ಯೂಸಿಕ್ ವಿಡಿಯೋಗಳಲ್ಲೂ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ:
Annatthe: ಅದ್ದೂರಿಯಾಗಿ ಬಿಡುಗಡೆಯಾದ ಅಣ್ಣಾತೆ; ರಜಿನಿ ಫ್ಯಾನ್ಸ್ಗೆ ಡಬಲ್ ಸಂಭ್ರಮ
ಜೊತೆ ಕಲಾವಿದರ ಬಗ್ಗೆ ಪುನೀತ್ ರಾಜಕುಮಾರ್ಗೆ ಇನ್ನಿಲ್ಲದ ಕಾಳಜಿ ಮತ್ತು ಪ್ರೀತಿ, ವಿಡಿಯೋ ನೋಡಿ