ಬಿಡುಗಡೆ ಆಗುತ್ತಿದೆ ‘ಟಾಕ್ಸಿಕ್’ ಸಿನಿಮಾ ಇಂಗ್ಲೀಷ್ ಆವೃತ್ತಿ: ಇರಲಿದೆ ಕೆಲ ಬದಲಾವಣೆ

‘ಟಾಕ್ಸಿಕ್’ ಸಿನಿಮಾದ ಭಾರತೀಯ ಭಾಷಾ ಆವೃತ್ತಿಯ ಸಿನಿಮಾಗಳು ಬಿಡುಗಡೆ ಆಗಿ ವಾರಕ್ಕೂ ಹೆಚ್ಚು ಸಮಯವಾಗಿದೆ. ಆದರೆ ‘ಟಾಕ್ಸಿಕ್’ ಸಿನಿಮಾವನ್ನು ಇಂಗ್ಲೀಷ್​​ನಲ್ಲಿಯೂ ಚಿತ್ರೀಕರಣ ಮಾಡಲಾಗಿತ್ತು. ಇದೀಗ ಭಾರತೀಯ ಭಾಷೆಯ ಸಿನಿಮಾಗಳು ಬಿಡುಗಡೆ ಆಗಿ 10 ದಿನಗಳ ಬಳಿಕ ಇಂಗ್ಲೀಷ್ ಆವೃತ್ತಿಯನ್ನು ರಿಲೀಸ್ ಮಾಡಲಾಗುತ್ತಿದೆ. ಈ ಸಿನಿಮಾಕ್ಕೆ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿರಲಿದೆ? ಎಲ್ಲೆಲ್ಲಿ ಸಿನಿಮಾ ರಿಲೀಸ್ ಆಗಲಿದೆ? ಮಾಹಿತಿ ಇಲ್ಲಿದೆ...

ಬಿಡುಗಡೆ ಆಗುತ್ತಿದೆ ‘ಟಾಕ್ಸಿಕ್’ ಸಿನಿಮಾ ಇಂಗ್ಲೀಷ್ ಆವೃತ್ತಿ: ಇರಲಿದೆ ಕೆಲ ಬದಲಾವಣೆ
Toxic Movie

Updated on: Sep 03, 2026 | 2:54 PM

ಮುಖ್ಯಾಂಶಗಳು

  • ಟಾಕ್ಸಿಕ್ ಸಿನಿಮಾ ರಿಲೀಸ್ ಆಗಿ ವಾರಕ್ಕೂ ಹೆಚ್ಚು ಸಮಯವಾಯ್ತು
  • ಟಾಕ್ಸಿಕ್ ಸಿನಿಮಾದ ಇಂಗ್ಲೀಷ್ ಆವೃತ್ತಿ ಇದೀಗ ರಿಲೀಸ್ ಆಗುತ್ತಿದೆ.
  • ಈ ಇಂಗ್ಲೀಷ್ ಆವೃತ್ತಿಯಲ್ಲಿ ಕೆಲ ಬದಲಾವಣೆಗಳು ಸಹ ಇರಲಿವೆ.

ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಭಾರತದಲ್ಲಿ ಅಥವಾ ಭಾರತೀಯ ಭಾಷೆಗಳಲ್ಲಿ ಬಿಡುಗಡೆ ಆಗಿ ಹತ್ತು ದಿನಗಳಾಗುತ್ತಾ ಬಂತು. ಈ ಸಿನಿಮಾದ ಚಿತ್ರೀಕರಣವನ್ನು ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಏಕಕಾಲಕ್ಕೆ ಮಾಡಲಾಗಿತ್ತು. ಕನ್ನಡದಲ್ಲಿ ಚಿತ್ರೀಕರಿಸಲಾದ ಸಿನಿಮಾವನ್ನು ಆ ಬಳಿಕ ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಗಳಿಗೆ ಡಬ್ಬಿಂಗ್ ಮಾಡಲಾಗಿತ್ತು. ಭಾರತೀಯ ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆದ ಸುಮಾರು 10 ದಿನಗಳ ಬಳಿಕ ಸಿನಿಮಾದ ಇಂಗ್ಲೀಷ್ ಆವೃತ್ತಿ ರಿಲೀಸ್ ಆಗಲಿದೆ.

‘ಟಾಕ್ಸಿಕ್’ ಸಿನಿಮಾದ ಇಂಗ್ಲೀಷ್ ಆವೃತ್ತಿಯು ನಾಳೆ ಅಂದರೆ ಸೆಪ್ಟೆಂಬರ್ 4ರಂದು ಬಿಡುಗಡೆ ಆಗಲಿದೆ. ಇಂಗ್ಲೀಷ್ ಆವೃತ್ತಿಯ ವಿದೇಶಗಳಲ್ಲಿ ಬಿಡುಗಡೆ ಆಗುತ್ತಿದ್ದು, ಜೊತೆಗೆ ಭಾರತದ ಕೆಲವು ಆಯ್ದ ನಗರಗಳಲ್ಲಿ ಬಿಡುಗಡೆ ಆಗಲಿದೆ. ‘ಟಾಕ್ಸಿಕ್’ ಸಿನಿಮಾದ ಭಾರತೀಯ ಭಾಷೆಯ ಆವೃತ್ತಿ ಈಗಾಗಲೇ ಭರ್ಜರಿ ಗಳಿಕೆ ಮಾಡುತ್ತಿದ್ದು, ಇದೀಗ ಇಂಗ್ಲೀಷ್ ಆವೃತ್ತಿಯು ಆ ಗಳಿಕೆಯ ಬ್ಯಾಟನ್ ಅನ್ನು ಮುಂದಕ್ಕೆ ತೆಗೆದುಕೊಂಡು ಹೋಗುವ ನಿರೀಕ್ಷೆ ಚಿತ್ರತಂಡದ್ದು.

‘ಟಾಕ್ಸಿಕ್’ ಸಿನಿಮಾದ ಇಂಗ್ಲೀಷ್ ಆವೃತ್ತಿ, ಭಾರತೀಯ ಆವೃತ್ತಿಗಿಂತಲೂ ಕಡಿಮೆ ಅವಧಿಯದ್ದಾಗಿರಲಿದೆ. ಭಾರತೀಯ ಆವೃತ್ತಿಯಲ್ಲಿರುವ ಕೆಲ ಹಾಡುಗಳು, ಕೆಲ ದೃಶ್ಯಗಳು ಇಂಗ್ಲೀಷ್ ಆವೃತ್ತಿಯಲ್ಲಿ ಇರುವುದಿಲ್ಲ ಎನ್ನಲಾಗಿದೆ. ‘ಟಾಕ್ಸಿಕ್’ ಸಿನಿಮಾ ತಂಡವು ಹಾಲಿವುಡ್​​ನ ಅತಿ ದೊಡ್ಡ ನಿರ್ಮಾಣ ಮತ್ತು ವಿತರಣೆ ಸಂಸ್ಥೆ ಆಗಿರುವ ಲಯನ್ಸ್​​ಗೇಟ್ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದು, ಇದೀಗ ಸಿನಿಮಾದ ಇಂಗ್ಲೀಷ್ ಆವೃತ್ತಿಯನ್ನು ಭಾರತದ ಹೊರಗೆ ಲಯನ್ಸ್ ಗೇಟ್ ಅವರೇ ವಿತರಣೆ ಮಾಡುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:‘ಕೆಜಿಎಫ್ ಚಿತ್ರಕ್ಕೂ ಮುನ್ನ ಯಶ್ ಯಾರು?’; ನಿರ್ಮಾಪಕರ ಹೇಳಿಕೆಗೆ ಆರ್‌ಜಿವಿ ಸಮರ್ಥನೆ

‘ಟಾಕ್ಸಿಕ್’ ಸಿನಿಮಾದ ಇಂಗ್ಲೀಷ್ ಆವೃತ್ತಿಯ ಬಿಡುಗಡೆ ಬಗ್ಗೆ ಕೆವಿಎನ್​​ ಪ್ರೊಡಕ್ಷನ್​​ನವರು ಪೋಸ್ಟ್ ಹಂಚಿಕೊಂಡಿದ್ದು, ಈ ಸಿನಿಮಾದ ಅವಧಿ ಕಡಿಮೆ ಇರಲಿದೆ ಎಂದಿದ್ದಾರೆ. ಪೋಸ್ಟ್​​ಗೆ ಕಮೆಂಟ್ ಹಾಕಿರುವ ಹಲವರು, ತಮ್ಮ ತಮ್ಮ ಮಾತೃಭಾಷೆಯಲ್ಲಿ ಸಿನಿಮಾ ಅನ್ನು ಈಗಾಗಲೇ ನೋಡಿದ್ದು, ಇಂಗ್ಲೀಷ್​​ನಲ್ಲಿಯೂ ಒಮ್ಮೆ ನೋಡುವ ಉತ್ಸಾಹ ವ್ಯಕ್ತಪಡಿಸಿದ್ದಾರೆ. ಆದರೆ ಈ ಇಂಗ್ಲೀಷ್ ಆವೃತ್ತಿಯ ಭಾರತದ ಕೆಲವು ಆಯ್ದ ನಗರಗಳಲ್ಲಿ, ಆಯ್ದ ಚಿತ್ರಮಂದಿರಗಳಲ್ಲಿ ಮಾತ್ರವೇ ಪ್ರದರ್ಶನಗೊಳ್ಳಲಿದೆ.

‘ಟಾಕ್ಸಿಕ್’ ಸಿನಿಮಾನಲ್ಲಿ ಯಶ್ ದ್ವಿಪಾತ್ರದಲ್ಲಿ ನಟಿಸಿದ್ದು, ಸಿನಿಮಾನಲ್ಲಿ ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ರುಕ್ಮಿಣಿ ವಸಂತ್, ತಾರಾ ಸುತಾರಿಯಾ ಮತ್ತು ನಯನತಾರಾ ನಾಯಕಿಯರಾಗಿ ನಟಿಸಿದ್ದಾರೆ. ಸಿನಿಮಾ ನಿರ್ದೇಶನವನ್ನು ಗೀತೂ ಮೋಹನ್​​ದಾಸ್ ಮಾಡಿದ್ದಾರೆ. ಸಿನಿಮಾಕ್ಕೆ ಹಿನ್ನೆಲೆ ಸಂಗೀತ ರವಿ ಬಸ್ರೂರು ಅವರದ್ದು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:02 pm, Thu, 3 September 26

Loading...
Unable to load recommendations.
Follow Us