Trisha Kar Madhu: ಯುವ ನಟಿಯ ಖಾಸಗಿ​ ವಿಡಿಯೋ ಲೀಕ್​; ‘ದೇವರು ಎಲ್ಲವನ್ನೂ ನೋಡುತ್ತಿರುತ್ತಾನೆ’ ಎಂದ ನಟಿ

ತ್ರಿಷಾ ಓರ್ವ ಹುಡುಗನೊಂದಿಗೆ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ತುಂಬಾನೇ ಖಾಸಗಿಯಾಗಿದೆ. ಇಬ್ಬರ ನಡುವೆ ನಡೆದ ಸಂಭಾಷಣೆಯ ಆಡಿಯೋ ರೆಕಾರ್ಡ್​​ಗಳನ್ನು ಯೂಟ್ಯೂಬ್‌ನಲ್ಲಿ ಹಂಚಿಕೊಳ್ಳಲಾಗಿದೆ. ತ್ರಿ

Trisha Kar Madhu: ಯುವ ನಟಿಯ ಖಾಸಗಿ​ ವಿಡಿಯೋ ಲೀಕ್​; ‘ದೇವರು ಎಲ್ಲವನ್ನೂ ನೋಡುತ್ತಿರುತ್ತಾನೆ’ ಎಂದ ನಟಿ
ಯುವ ನಟಿಯ ಖಾಸಗಿ​ ವಿಡಿಯೋ ಲೀಕ್​; ‘ದೇವರು ಎಲ್ಲವನ್ನೂ ನೋಡುತ್ತಿರುತ್ತಾನೆ’ ಎಂದ ನಟಿ
Edited By:

Updated on: Aug 17, 2021 | 11:27 AM

ಭೋಜ್‌ಪುರಿಯ ಹಾಟ್ ಆ್ಯಂಡ್​ ಬೋಲ್ಡ್ ನಟಿ ಎಂದು ಪರಿಗಣಿಸಲ್ಪಟ್ಟಿರುವ ತ್ರಿಷಾ ಕರ್​ ಮಧು ಆಗಾಗ ತಮ್ಮ ವಿಡಿಯೋ ಸಾಂಗ್​ ಮೂಲಕ ಸುದ್ದಿಯಾಗುತ್ತಿರುತ್ತಾರೆ. ಅವರು ಸಾಮಾಜಿಕ ಜಾಲತಾಣದಲ್ಲಿಯೂ ತುಂಬಾನೇ ಆ್ಯಕ್ಟೀವ್. ಈಗ ಅವರು ಮತ್ತೊಮ್ಮೆ ಚರ್ಚೆಯಾಗಿದ್ದಾರೆ. ಅವರ ಖಾಸಗಿ ವಿಡಿಯೋ ಲೀಕ್​ ಆಗಿದೆ. ಈ ಕುರಿತು, ಸ್ವತಃ ತ್ರಿಷಾ ಕೂಡ ಲೈವ್‌ಗೆ ಬಂದು ಮಾತನಾಡಿದ್ದಾರೆ.

ತ್ರಿಷಾ ಓರ್ವ ಹುಡುಗನೊಂದಿಗೆ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ತುಂಬಾನೇ ಖಾಸಗಿಯಾಗಿದೆ. ಇಬ್ಬರ ನಡುವೆ ನಡೆದ ಸಂಭಾಷಣೆಯ ಆಡಿಯೋ ರೆಕಾರ್ಡ್​​ಗಳನ್ನು ಯೂಟ್ಯೂಬ್‌ನಲ್ಲಿ ಹಂಚಿಕೊಳ್ಳಲಾಗಿದೆ. ತ್ರಿಷಾ ಜತೆ ವಿಡಿಯೋದಲ್ಲಿ ಇದ್ದಿದ್ದು ಯಾರು ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ. ಇದು ನಟಿಯ ಕೋಪಕ್ಕೆ ಕಾರಣವಾಗಿದೆ. ಅಲ್ಲದೆ, ವಿಡಿಯೋ ಲೀಕ್​ ಮಾಡಿದ್ದು ಯಾರು ಎನ್ನುವ ಪ್ರಶ್ನೆ ಕೂಡ ಮೂಡಿದೆ.

ಈ ಬಗ್ಗೆ  ತ್ರಿಷಾ ಫೇಸ್​ಬುಕ್​ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ‘ದೇವರು ಎಲ್ಲವನ್ನೂ ನೋಡುತ್ತಿರುತ್ತಾನೆ. ನನ್ನ ಖಾಸಗಿ ವೀಡಿಯೊವನ್ನು ವೈರಲ್ ಮಾಡಲಾಗಿದೆ.  ಯಾರಾದರೂ ನಿಮ್ಮ ಸಹೋದರಿಯನ್ನು ಮದುವೆಯಾಗಿ ಮರುದಿನ ಹನಿಮೂನ್ ವಿಡಿಯೋ ವೈರಲ್ ಮಾಡಿದರೆ ನಿಮಗೆ ಹೇಗನಿಸುತ್ತದೆ?’ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ತ್ರಿಷಾಗೆ ಈಗಿನ್ನು 27 ವರ್ಷ. ಅವರು ಬಂಗಾಳಿ ಮೂಲದವರು. ಭೋಜ್‌ಪುರಿಯ ಅನೇಕ ಹಾಡುಗಳಲ್ಲಿ ತ್ರಿಷಾ ನಟಿಸಿದ್ದಾರೆ. ಅವರ ಹಾಟ್​​ ಆ್ಯಂಡ್​ ಬೋಲ್ಡ್​ ಲುಕ್​ ಪ್ರೇಕ್ಷಕರಿಗೆ ಇಷ್ಟವಾಗಿದೆ. ಅವರಿಗೆ ಪಡ್ಡೆ ಹುಡುಗರ ದೊಡ್ಡ ಅಭಿಮಾನಿ ಬಳಗವೇ ಇದೆ.

ನಟಿಯರ ಖಾಸಗಿ ವಿಡಿಯೋ ಸೋರಿಕೆಯಾಗುತ್ತಿರುವುದು ಇದೇ ಮೊದಲಲ್ಲ. ಬಾಲಿವುಡ್​​ನಲ್ಲಿ ಛಾಪು ಮೂಡಿಸಿರುವ ರಾಧಿಕಾ ಆಪ್ಟೆ ಅವರ ಖಾಸಗಿ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸೋರಿಕೆಯಾಗಿತ್ತು. ಇದಾದ ನಂತರದಲ್ಲಿ ಅವರು ತುಂಬಾನೇ ಅಪ್ಸೆಟ್​ ಆಗಿದ್ದರು. ಈ ಬಗ್ಗೆ ಸಂದರ್ಶನದಲ್ಲಿ ರಾಧಿಕಾ ಹೇಳಿಕೊಂಡಿದ್ದರು.

ಇನ್ನೂ ಓದಿ: ವೈಯಕ್ತಿಕ ದ್ವೇಷ, ಖಾಸಗಿ ವಿಡಿಯೋ ಸೋರಿಕೆ; ವಿವಾದಗಳಿಂದಲೇ ಸುದ್ದಿಯಲ್ಲಿದ್ದ ಶ್ರೀಲಂಕಾ ಕ್ರಿಕೆಟಿಗನ ಬಗ್ಗೆ ನಿಮಗೆಷ್ಟು ಗೊತ್ತು?

Published On - 3:36 pm, Thu, 12 August 21