
ಆಂಧ್ರ ಪ್ರದೇಶ ಡಿಸಿಎಂ ಹಾಗೂ ನಟ ಪವನ್ ಕಲ್ಯಾಣ್ (Pawan Kalyan), ‘ಹರಿ ಹರ ವೀರ ಮಲ್ಲು’ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಆರು ದಿನಗಳ ಶೆಡ್ಯೂಲ್ ಇದಾಗಿದೆ. ಆಂಧ್ರ ವಿಧಾನಸಭೆ ಚುನಾವಣೆ ಘೋಷಣೆಗೆ ಮುಂಚೆ ಆರಂಭಿಸಲಾಗಿದ್ದ ಸಿನಿಮಾ ಚಿತ್ರೀಕರಣ ಇನ್ನೂ ಮುಗಿದಿಲ್ಲ, ಹಲವಾರು ಅಡೆ-ತಡೆಗಳ ಬಳಿಕ ಈಗ ಚಿತ್ರೀಕರಣ ಪೂರ್ಣಗೊಳಿಸುವ ನಿರ್ಧಾರ ಮಾಡಲಾಗಿದೆ. ಸಿನಿಮಾ ಚಿತ್ರೀಕರಣ ಪ್ರಾರಂಭ ಆಗಿದೆಯಾದರೂ ಪವನ್ ಕಲ್ಯಾಣ್ ಅಭಿಮಾನಿಗಳಿಗೆ ಹೊಸ ಆತಂಕ ಶುರುವಾಗಿದೆ.
‘ಹರಿ ಹರ ವೀರ ಮಲ್ಲು’ ಸಿನಿಮಾ ಸೆಟ್ನಲ್ಲಿ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಕಾಣಿಸಿಕೊಂಡಿದ್ದಾರೆ. ಇದು ಪವನ್ ಅಭಿಮಾನಿಗಳ ಆತಂಕ್ಕೆ ಕಾರಣವಾಗಿದೆ. ‘ಹರಿ ಹರ ವೀರ ಮಲ್ಲು’ ಸಿನಿಮಾಕ್ಕೆ ಈಗಾಗಲೇ ಇಬ್ಬರು ನಿರ್ದೇಶಕರಿದ್ದಾರೆ. ಕೃಷ್ಣ ಜಗರಲಮುಡಿ ಅಲಿಯಾಸ್ ಕೃಷ್ ಮತ್ತು ಜ್ಯೋತಿ ಕೃಷ್ಣ. ಈ ಇಬ್ಬರೂ ‘ಹರಿ ಹರ ವೀರ ಮಲ್ಲು’ ಸಿನಿಮಾ ನಿರ್ದೇಶಿಸಿದ್ದಾರೆ. ಈಗ ತ್ರಿವಿಕ್ರಮ್ ಶ್ರೀನಿವಾಸ್ ಸಹ ಈ ಸಿನಿಮಾಕ್ಕೆ ಕೈ ಹಾಕಿದ್ದಾರೆ ಎನ್ನಲಾಗುತ್ತಿದೆ. ಮೂರು ನಿರ್ದೇಶಕರು ಸೇರಿ ಸಿನಿಮಾ ಹಾಳು ಮಾಡುತ್ತಾರೇನೋ ಎಂಬ ಅನುಮಾನ ಅಭಿಮಾನಿಗಳದ್ದು.
ಇದನ್ನೂ ಓದಿ:ಹತ್ತಿರ ಕರೆದು ಆಂಧ್ರ ಡಿಸಿಎಂ ಪವನ್ ಕಲ್ಯಾಣ್ಗೆ ಚಾಕೋಲೇಟ್ ಕೊಟ್ಟ ಪ್ರಧಾನಿ ಮೋದಿ
ಮತ್ತೊಂದು ಭಯವೆಂದರೆ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನ ಮಾಡದೆ ಆದರೆ ಪವನ್ ಸಿನಿಮಾಕ್ಕೆ ತೆರೆ ಮರೆಯಲ್ಲಿ ಕೆಲಸ ಮಾಡಿದ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಗಮನ ಸೆಳೆಯಲು ವಿಫಲವಾಗಿವೆ. ‘ಭಿಮ್ಲಾ ನಾಯಕ್’, ಜಯಂತ್ ಸಿ ಪರಾಂಜೆ ನಿರ್ದೇಶನ ಮಾಡಿದ್ದ ‘ತೀನ್ ಮಾರ್’ ಸಿನಿಮಾ ಇನ್ನೂ ಕೆಲ ಸಿನಿಮಾಗಳಿಗೆ ತ್ರಿವಿಕ್ರಮ್ ಸಂಭಾಷಣೆಗಾರ, ಕತೆಗಾರರಾಗಿ ಕೆಲಸ ಮಾಡಿದ್ದರು. ಆದರೆ ಆ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಒಳ್ಳೆಯ ಪ್ರದರ್ಶನ ಕಂಡಿಲ್ಲ. ಇದು ಸಹ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. ‘ವಕೀಲ್ ಸಾಬ್’ ಸಿನಿಮಾಕ್ಕೂ ತ್ರಿವಿಕ್ರಮ್ ಸಂಭಾಷಣೆ ಬರೆದಿದ್ದರು ಆ ಸಿನಿಮಾ ಹಿಟ್ ಆಗಿತ್ತು.
ತ್ರಿವಿಕ್ರಮ್ ಶ್ರೀನಿವಾಸ್ ಮತ್ತು ಪವನ್ ಕಲ್ಯಾಣ್ ಬಲು ಆಪ್ತ ಮಿತ್ರರು. ಪವನ್ ಕಲ್ಯಾಣ್ ರಾಜಕೀಯ ಪ್ರವೇಶಿಸಿದ ಆರಂಭದಲ್ಲಿ ತ್ರಿವಿಕ್ರಮ್ ಶ್ರೀನಿವಾಸ್ ಸಾಕಷ್ಟು ಸಲಹೆಗಳನ್ನು ನೀಡುತ್ತಿದ್ದರಂತೆ. ಅವರಿಗೆ ಭಾಷಣದ ಪಾಯಿಂಟರ್ಸ್ಗಳನ್ನು ಸಹ ಹಾಕಿಕೊಡುತ್ತಿದ್ದರಂತೆ. ಈಗಲೂ ಸಹ ಪವನ್ ಹಾಗೂ ತ್ರಿವಿಕ್ರಮ್ ಶ್ರೀನಿವಾಸ್ ಬಲು ಆಪ್ತ ಮಿತ್ರರು. ಪವನ್ ಅತಿಯಾಗಿ ನಂಬಿ ಸಲಹೆ ಪಡೆಯುವ ಮಿತ್ರರಲ್ಲಿ ತ್ರಿವಿಕ್ರಮ್ ಶ್ರೀನಿವಾಸ್ ಪ್ರಮುಖರು. ಪವನ್ಗಾಗಿ ತ್ರಿವಿಕ್ರಮ್ ‘ಜಲ್ಸಾ’, ‘ಅತ್ತಾರಿಂಟಿಕಿ ದಾರೇದಿ’ ಮತ್ತು ‘ಅಜ್ಞಾತನವಾಸಿ’ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ‘ಜಲ್ಸಾ’, ‘ಅತ್ತಾರಿಂಟಿಕಿ ದಾರೇದಿ’ ಸೂಪರ್ ಹಿಟ್ ಆದರೆ ‘ಅಜ್ಞಾತವಾಸಿ’ ಅಟ್ಟರ್ ಫ್ಲಾಪ್ ಆಗಿತ್ತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ