ನಿಲ್ಲುತ್ತಿಲ್ಲ ಉದಿತ್ ನಾರಾಯಣ್ ಹಾವಳಿ; ಕಾನ್ಸರ್ಟ್​ ವೇಳೆ ಮತ್ತೋರ್ವ ಅಭಿಮಾನಿಯ ತುಟಿಗೆ ಚುಂಬನ

|

Updated on: Feb 06, 2025 | 7:02 AM

ಗಾಯಕ ಉದಿತ್ ನಾರಾಯಣ್ ಅವರು ಕಾನ್ಸರ್ಟ್ ವೇಳೆ ಅಭಿಮಾನಿಗಳಿಗೆ ಕಿಸ್ ಮಾಡಿದ ಎರಡನೇ ವೈರಲ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮೊದಲ ಘಟನೆಯ ನಂತರವೂ ಇದೇ ರೀತಿಯ ಘಟನೆ ನಡೆದಿರುವುದು ಟೀಕೆಗೆ ಕಾರಣವಾಗಿದೆ. ಅವರನ್ನು ಕೆಲವರು ರಸಿಕರ ರಾಜ ಎಂದರೆ, ಇನ್ನು ಕೆಲವರು ಈ ರೀತಿಯ ವರ್ತನೆಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದ್ದಾರೆ.

ನಿಲ್ಲುತ್ತಿಲ್ಲ ಉದಿತ್ ನಾರಾಯಣ್ ಹಾವಳಿ; ಕಾನ್ಸರ್ಟ್​ ವೇಳೆ ಮತ್ತೋರ್ವ ಅಭಿಮಾನಿಯ ತುಟಿಗೆ ಚುಂಬನ
ಉದಿತ್ ನಾರಾಯಣ್
Follow us on

ಗಾಯಕ ಉದಿತ್ ನಾರಾಯಣ್ ಅವರು ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿ ಇದ್ದಾರೆ. ಅವರು ಕಾನ್ಸರ್ಟ್ ವೇಳೆ ಮಹಿಳಾ ಅಭಿಮಾನಿಯ ತುಟಿಗೆ ಚುಂಬಿಸಿದ ವಿಡಿಯೋ ವೈರಲ್ ಆಗಿತ್ತು. ಇದು ಭಾರೀ ಆಕ್ರೋಶಕ್ಕೆ ಕಾರಣ ಆಗಿತ್ತು. ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಟೀಕೆ ಮಾಡಲಾಯಿತು. ತಮ್ಮನ್ನು ತಾವು ಸಮರ್ಥಿಸಿಕೊಳ್ಳುವಾಗ ‘ಈ ರೀತಿಯ ಘಟನೆಗಳು ನಡೆಯುತ್ತವೆ’ ಎಂದು ಅವರು ಹೇಳಿದ್ದರು. ಈಗ ಅವರ ಮತ್ತೊಂದು ವಿಡಿಯೋ ವೈರಲ್ ಆಗಿದೆ.

ಉದಿತ್ ನಾರಾಯಣ್ ಅವರು ಸಾಕಷ್ಟು ಕಾನ್ಸರ್ಟ್​ಗಳನ್ನು ನೀಡುತ್ತಾರೆ. ಆದರೆ, ಈ ವಿಚಾರದಲ್ಲಿ ಅವರು ಸುದ್ದಿ ಆಗಿದ್ದು ಕಡಿಮೆ. ಈಗ ಅವರು ಅಭಿಮಾನಿಗಳಿಗೆ ಕಿಸ್ ಮಾಡುತ್ತಾ ಸುದ್ದಿ ಆಗುತ್ತಿದ್ದಾರೆ. ಈ ಮೊದಲು ವೈರಲ್ ಆದ ವಿಡಿಯೋದ ಸದ್ದು ತಣ್ಣಗಾಗುವ ಮೊದಲೇ ಅವರ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ಟೀಕೆಗೆ ಗುರಿಯಾಗಿದ್ದಾರೆ.

ಉದಿತ್ ನಾರಾಯಣ್ ಅವರು ವೇದಿಕೆ ಮೇಲೆ ಹಾಡುತ್ತಿದ್ದರು. ಆಗ ಮಹಿಳಾ ಅಭಿಮಾನಿಗಳು ಸೆಲ್ಫಿ ತೆಗೆದುಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಈ ಸಮಯವನ್ನು ಬಳಸಿಕೊಂಡ ಉದಿತ್ ಅವರು, ಓರ್ವ ಅಭಿಮಾನಿಯ ಕೆನ್ನೆಗೆ ಮುತ್ತಿಟ್ಟರು. ಮತ್ತೋರ್ವ ಫ್ಯಾನ್​ಗೆ ತುಟಿಗೆ ಕಿಸ್ ಮಾಡಿದ್ದಾರೆ. ‘ಉದಿತ್ ನಾರಾಯಣ್ ಅವರ ಮತ್ತೊಂದು ವಿಡಿಯೋ’ ಎಂದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ.

ಸದ್ಯ ಉದಿತ್ ನಾರಾಯಣ್ ಅವರನ್ನು ಅನೇಕರು ಟೀಕೆ ಮಾಡಿದ್ದಾರೆ. ಇನ್ನೂ ಕೆಲವರು ಅವರನ್ನು ‘ರಸಿಕರ ರಾಜ’ ಎಂದು ಕರೆದಿದ್ದಾರೆ. ಇನ್ನೂ ಕೆಲವರು ಈ ರೀತಿಯ ವರ್ತನೆಗೆ ಕಡಿವಾಣ ಹಾಕಬೇಕು ಎಂದಿದ್ದಾರೆ. ಕೆಲವರು ಮೀಮ್​ಗಳನ್ನು ಮಾಡಿದ್ದು, ‘ಗಾಡ್​ಫಾದರ್ ಆಫ್ ಇಮ್ರಾನ್ ಹಷ್ಮಿ’ ಎಂದೆಲ್ಲ ಬರೆದುಕೊಂಡಿದ್ದಾರೆ.

ಉದಿತ್ ನಾರಾಯಣ್ ಸ್ಪಷ್ಟನೆ ಏನು?

ಈ ಮೊದಲು ವೈರಲ್ ಆದ ವಿಡಿಯೋ ಬಗ್ಗೆ ಉದಿತ್ ಮಾತನಾಡಿದ್ದರು. ‘ನಾವು ಆ ರೀತಿಯ ಜನ, ಡೀಸೆಂಟ್ ವ್ಯಕ್ತಿತ್ವದ ವ್ಯಕ್ತಿಗಳು. ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಪ್ರೀತಿ ವ್ಯಕ್ತಪಡಿಸುತ್ತಾರೆ. ಅಭಿಮಾನಿ ವ್ಯಕ್ತಪಡಿಸಿದ ಪ್ರೀತಿಗೆ ನಾನು ಪ್ರತಿಕ್ರಿಯಿಸಿದ್ದೆನೇ ವಿನಃ, ಉದ್ದೇಶಪೂರ್ವಕಾಗಿ ಮಾಡಿದ್ದಲ್ಲ. ಇಂಥ ವಿಷಯಗಳಿಗೆ ಯಾರೂ ಹೆಚ್ಚು ಗಮನ ಹರಿಸಬಾರದು’ ಎಂದಿದ್ದರು.

ಇದನ್ನೂ ಓದಿ: ಶ್ರೇಯಾ ಘೋಷಾಲ್​ಗೂ ಅನುಮತಿ ಇಲ್ಲದೇ ಕಿಸ್ ಮಾಡಿದ್ದ ಉದಿತ್ ನಾರಾಯಣ್; ವಿಡಿಯೋ ಸಾಕ್ಷಿ

ಉದಿತ್ ನಾರಾಯಣ್ ಅವರು ಈ ಮೊದಲು ಶ್ರೇಯಾ ಘೋಷಾಲ್ ಅವರಿಗೆ ಕಿಸ್ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು. ಉದಿತ್ ಅವರು ಹಿಂದಿ ಮಾತ್ರವಲ್ಲದೆ ಕನ್ನಡ ಸೇರಿದಂತೆ ಸುಮಾರು 12 ಭಾಷೆಗಳಲ್ಲಿ ಹಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.