ಜೀವನದ ಮರೆಯಲಾಗದ ಕ್ಷಣ ಹಂಚಿಕೊಂಡ ಬಿಗ್ ಬಾಸ್ ವಿನ್ನರ್ ಹನುಮಂತ
ಹನುಮಂತ ಲಮಾಣಿ ಅವರು ಬಿಗ್ ಬಾಸ್ ಕನ್ನಡದಲ್ಲಿ ಗೆದ್ದ ನಂತರ ತಮ್ಮ ಅಭಿಮಾನಿಗಳೊಂದಿಗೆ ಅವರ ಗೆಲುವಿನ ಅನುಭವವನ್ನು ಹಂಚಿಕೊಂಡಿದ್ದಾರೆ. ಸುದೀಪ್ ಅವರೊಂದಿಗಿನ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡು, ಅವರ ಜೀವನದ ಅತ್ಯಂತ ಮರೆಯಲಾಗದ ಕ್ಷಣವೆಂದು ಉಲ್ಲೇಖಿಸಿದ್ದಾರೆ. ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಪ್ರವೇಶಿಸಿದ ಅವರು, ತಮ್ಮ ಜನಪ್ರಿಯತೆಯನ್ನು ಗಣನೀಯವಾಗಿ ಹೆಚ್ಚಿಸಿಕೊಂಡಿದ್ದಾರೆ.

ಹನುಮಂತ ಲಮಾಣಿ ಅವರು ಹಲವು ರಿಯಾಲಿಟಿ ಶೋಗಳ ಮೂಲಕ ಗುರುತಿಸಿಕೊಂಡರು. ಅವರಿಗೆ ‘ಬಿಗ್ ಬಾಸ್’ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿತು. ಈ ರಿಯಾಲಿಟಿ ಶೋ ಬಳಿಕ ಅವರ ಜನಪ್ರಿಯತೆ ಹೆಚ್ಚಾಗಿದೆ. ಈಗ ಅವರು ಸೋಶಿಯಲ್ ಮೀಡಿಯಾದಲ್ಲಿ ಮರೆಯಲಾಗದ ಕ್ಷಣವನ್ನು ಹಂಚಿಕೊಂಡಿದ್ದಾರೆ. ಬಿಗ್ ಬಾಸ್ ಗೆದ್ದ ಬಳಿಕ ಅವರು ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ ಅನ್ನೋದು ವಿಶೇಷ. ಆ ಬಗ್ಗೆ ಈ ಸ್ಟೋರಿಯಲ್ಲಿ ವಿವರಿಸುತ್ತಿದ್ದೇವೆ.
ಹನುಮಂತ ಅವರು ಸದ್ಯ ಹೊಸ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಅವರು ಬಿಗ್ ಬಾಸ್ ಗೆದ್ದ ಕ್ಷಣವಿದೆ. ಸುದೀಪ್ ಅವರು ಹನುಮಂತ ಅವರ ಕಪ್ ಎತ್ತುತ್ತಾ ಇರುವ ದೃಶ್ಯ ಇದೆ. ಮತ್ತೊಂದು ಫೋಟೋದಲ್ಲಿ ಹನುಮಂತ ಅವರು ಸುದೀಪ್ ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆಯುತ್ತಿರುವ ಫೋಟೋ ಇದೆ. ಮೂರನೇ ಫೋಟೋದಲ್ಲಿ ಸುದೀಪ್ ಅವರು ಹನುಮಂತ ಅವರನ್ನು ಹಗ್ ಮಾಡುತ್ತಿದ್ದಾರೆ. ಈ ಫೋಟೋನ ಫ್ಯಾನ್ಸ್ ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಈ ಫೋಟೋಗೆ ‘ಜೀವನದ ಸುಂದರ ಮರೆಯಲಾಗದ ಕ್ಷಣ’ ಎಂದು ಹನುಮಂತ ಕ್ಯಾಪ್ಶನ್ ನೀಡಿದ್ದಾರೆ.
ಹನುಮಂತ ಅವರು ವೈಲ್ಡ್ ಕಾರ್ಡ್ ಮೂಲಕ ದೊಡ್ಮನೆಗೆ ಬಂದರು. ವೈಲ್ಡ್ ಕಾರ್ಡ್ನಲ್ಲಿ ಬಂದು ಕಪ್ ಗೆಲ್ಲುತ್ತಾರೆ ಎಂದು ಆರಂಭದಲ್ಲಿ ಯಾರೂ ಊಹಿಸಿರಲಿಲ್ಲ. ದಿನ ಕಳೆದಂತೆ ಆಟ ತೋರಿಸಿ ಅವರು ಗೆದ್ದು ತೋರಿಸಿದ್ದಾರೆ. ಅವರ ಹಿಂಬಾಲಕರ ಸಂಖ್ಯೆ ಕೂಡ ಹೆಚ್ಚಿದೆ.
View this post on Instagram
ಹನುಮಂತ ಅವರು ಬಿಗ್ ಬಾಸ್ ಮನೆಗೆ ಬರುವಾಗ ಕೇವಲ ಒಂದೂವರೆ ಇಂದ ಎರಡು ಲಕ್ಷ ಹಿಂಬಾಲಕರನ್ನು ಹೊಂದಿದ್ದರು. ಈಗ ಆ ಸಂಖ್ಯೆ ಐದೂವರೆ ಲಕ್ಷಕ್ಕೆ ಏರಿಕೆ ಆಗಿದೆ. ಅವರನ್ನು ಇನ್ಸ್ಟಾಗ್ರಾಮ್ನಲ್ಲಿ 5.63 ಲಕ್ಷ ಹಿಂಬಾಲಕರನ್ನು ಪಡೆದಿದ್ದಾರೆ. ಇದು ಅವರಿಗೆ ಸಾಕಷ್ಟು ಜನಪ್ರಿಯತೆಗೆ ಸಿಕ್ಕ ಉದಾಹರಣೆ ಆಗಿದೆ.
ಇದನ್ನೂ ಓದಿ: ವೇದಿಕೆ ಮೇಲೆ ಹನುಮಂತನ ಕೆಣಕಲು ಬಂದ ನಿವೇದಿತಾ, ಅನುಪಮಾ ಗಪ್ ಚುಪ್
ಹನುಮಂತ ಅವರು ಸದ್ಯ ‘ಬಾಯ್ಸ್ vs ಗರ್ಲ್ಸ್’ ರಿಯಾಲಿಟಿ ಶೋನ ಭಾಗವಾಗಿದ್ದಾರೆ. ಪ್ರತಿ ವೀಕೆಂಡ್ನಲ್ಲಿ ಕಲರ್ಸ್ ಕನ್ನಡದಲ್ಲಿ ಈ ಶೋ ಪ್ರಸಾರ ಕಾಣುತ್ತಿದೆ. ಈ ರಿಯಾಲಿಟಿ ಶೋ ಮೂಲಕ ಅಭಿಮಾನಿ ಬಳಗವನ್ನು ಅವರು ಮತ್ತಷ್ಟು ಏರಿಸಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.