ಶರಣ್ ಜನ್ಮದಿನ: ಟ್ರಕ್ ಕ್ಲೀನರ್ ಆಗಿದ್ದ ವ್ಯಕ್ತಿ ಈಗ ಬೇಡಿಕೆಯ ಹೀರೋ
ಶರಣ್ ಓರ್ವ ಯಶಸ್ವಿ ಕನ್ನಡ ನಟ. ತಮ್ಮ ಜೀವನದಲ್ಲಿ ಹಲವು ಸವಾಲುಗಳನ್ನು ಎದುರಿಸಿದ್ದಾರೆ. ಲಾರಿ ಕ್ಲೀನರ್ ಆಗಿ ಕೆಲಸ ಮಾಡಿದ ಅನುಭವವನ್ನು ಹೊಂದಿರುವ ಅವರು, ತಮ್ಮ ಕಠಿಣ ಪರಿಶ್ರಮ ಮತ್ತು ನಿರಂತರ ಪ್ರಯತ್ನದಿಂದ ಚಿತ್ರರಂಗದಲ್ಲಿ ಯಶಸ್ಸು ಕಂಡಿದ್ದಾರೆ. ‘ಛೂ ಮಂತರ್’ ಚಿತ್ರದ ಯಶಸ್ಸು ಅವರ ವೃತ್ತಿಜೀವನದ ಒಂದು ಮೈಲುಗಲ್ಲು.

ನಟ ಶರಣ್ ಅವರು ಕನ್ನಡ ಚಿತ್ರರಂಗದ ಬೇಡಿಕೆಯ ಹೀರೋ. ಅವರಿಗೆ ಕನ್ನಡ ಚಿತ್ರರಂಗದಲ್ಲಿ ಅವರಿಗೆ ದೊಡ್ಡ ಮಟ್ಟದಲ್ಲಿ ಬೇಡಿಕೆ ಇದೆ. ಅವರಿಗೆ ಇಂದು (ಆಗಸ್ಟ್ 6) ಜನ್ಮದಿನ. ಅವರ ನಟನೆಯ ‘ಛೂ ಮಂತರ್’ ಈ ವರ್ಷ ರಿಲೀಸ್ ಆಗಿ ಯಶಸ್ಸು ಕಂಡಿದೆ. ಶರಣ್ ಅವರಿಗೆ ಸಖತ್ ಬೇಡಿಕೆ ಇದೆ. ಒಂದು ಕಾಲದಲ್ಲಿ ಟ್ರಕ್ ಕ್ಲೀನರ್ ಆಗಿದ್ದ ಅವರು ನಂತರ ಟ್ರಕ್ ಖರೀದಿ ಮಾಡಿಕೊಳ್ಳಬೇಕು ಎಂದುಕೊಂಡಿದ್ದರು. ಈಗ ಚಿತ್ರರಂಗದಲ್ಲಿ ಅವರು ಬೇಡಿಕೆ ಉಳಿಸಿಕೊಂಡಿದ್ದಾರೆ.
ಶರಣ್ ಕುಟುಂಬ ಕಲಾ ಸೇವೆ ಮಾಡುತ್ತಾ ಬಂದಿದೆ. ಅವರ ಕುಟುಂಬದವರು ‘ಗುಬ್ಬಿ ಕಂಪನಿ’ಯಲ್ಲಿ ಕೆಲಸ ಮಾಡುತ್ತಿದ್ದರು. ಅವರ ಸಹೋದರಿ ಶ್ರುತಿ ಕನ್ನಡದ ಹಿರಿಯ ನಟಿ ಆಗಿದ್ದಾರೆ. ಚಿತ್ರರಂಗಕ್ಕೆ ಕಾಲಿಡುವುದಕ್ಕೂ ಮೊದಲು ಅವರು ಬೇರೆ ಬೇರೆ ಕೆಲಸ ಹುಡುಕುತ್ತಿದ್ದರು. ಈ ಬಗ್ಗೆ ಅವರು ಬರೆದುಕೊಂಡಿದ್ದರು.
‘ಚಿತ್ರರಂಗಕ್ಕೆ ಕಾಲಿಡುವ ಮುನ್ನ , ಕೆಲಸ ಹುಡುಕುತ್ತಿದ್ದ ಸಮಯ. ಕೆಲ ಸಮಯ ಲಾರಿ ಕ್ಲೀನರ್ ಆಗಿ ಕೆಲಸ ಮಾಡಿದ್ದುಂಟು. ಆಗ ಲಾರಿ ಕೊಳ್ಳುವ ಕನಸು ಕಂಡಿದ್ದೂ ಉಂಟು. ಆದರೇ ಲಾರಿಯಲ್ಲಿ ಶುರುವಾದ ನನ್ನ ಪಯಣ ಬೆಳ್ಳಿ ಪರದೆಯ ಮೇಲೆ ಬಂದು ನಿಂತಿರುವುದು ಕಂಡರೆ ಆ ಭಗವಂತನ ಲೀಲೆಗೆ’ ಎಂದು ಶರಣ್ ಬರೆದುಕೊಂಡಿದ್ದರು.
View this post on Instagram
ಶರಣ್ ಅವರು ನಟನೆಗೆ ಕಾಲಿಡಬೇಕು ಎಂಬುದು ಅವರ ಕುಟುಂಬದ ಒತ್ತಾಯ ಆಗಿತ್ತು. ಶರಣ್ ಅವರು ಧಾರಾವಾಹಿಗಳಲ್ಲಿ ನಟಿಸಿದರು. ಆ ಬಳಿಕ ಅವರು ಕಾಮಿಡಿಯನ್ ಆಗಿ ಚಿತ್ರರಂಗದಲ್ಲಿ ಕಾಣಿಸಿಕೊಳ್ಳುತ್ತಾ ಬಂದರು. ಹಿರೋ ಆಗುವ ಕನಸು ಕಂಡ ಅವರು ಅದನ್ನು ಮಾಡಿ ತೋರಿಸಿದರು. ಕನ್ನಡದ ಬೇಡಿಕೆಯ ಹೀರೋಗಳಲ್ಲಿ ಅವರು ಒಬ್ಬರಾಗಿದ್ದಾರೆ. ತಮ್ಮದೇ ರೀತಿಯ ಸಿನಿಮಾಗಳನ್ನು ಮಾಡಿ ಅವರು ಭೇಷ್ ಎನಿಸಿಕೊಂಡಿದ್ದಾರೆ. ಹಾಡನ್ನು ಹಾಡುವ ಮೂಲಕವೂ ಶರಣ್ ಗಮನ ಸೆಳೆದಿದ್ದಾರೆ. 100 ಸಿನಿಮಾಗಳಲ್ಲಿ ಪೋಷಕ ಪಾತ್ರ ಮಾಡಿರೋ ಅವರು, 10 ಸಿನಿಮಾಗಳಲ್ಲಿ ಹೀರೋ ಆಗಿ ನಟಿಸಿದ್ದಾರೆ.
ಇದನ್ನೂ ಓದಿ: ‘ಹನುಮಂತನೇ ನನ್ನ ಫೇವರಿಟ್ ಸ್ಪರ್ಧಿ’; ಶರಣ್ ಮಾತಿನಿಂದ ಘಟಾನುಘಟಿಗಳಿಗೆ ಟೆನ್ಷನ್
ಶರಣ್ ನಟನೆಯ ‘ಛೂ ಮಂತರ್’ ಈ ವರ್ಷ ರಿಲೀಸ್ ಆಗಿದೆ. ಈ ಚಿತ್ರದ ಮೂಲಕ ಅವರು ಭೇಷ್ ಎನಿಸಿಕೊಂಡಿದ್ದಾರೆ. ಈ ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆ. ಹಾರರ್ ಶೈಲಿಯಲ್ಲಿ ಮೂಡಿ ಬಂದ ಸಿನಿಮಾ ದೊಡ್ಡ ಯಶಸ್ಸು ಕಂಡಿತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 6:15 am, Thu, 6 February 25



