‘ಬಿಲ್ಲ ರಂಗ ಬಾಷಾ’ ಚಿತ್ರಕ್ಕೆ ಮುಹೂರ್ತ ಫಿಕ್ಸ್; ನಡೆದಿದೆ ದೊಡ್ಡ ಪ್ಲ್ಯಾನ್
ಕಿಚ್ಚ ಸುದೀಪ್ ಅವರು 'ಬಿಲ್ಲ ರಂಗ ಬಾಷಾ' ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಈ ಚಿತ್ರದ ಶೂಟಿಂಗ್ ಮಾರ್ಚ್ ಮೂರನೇ ವಾರದಲ್ಲಿ ಆರಂಭವಾಗುವ ನಿರೀಕ್ಷೆಯಿದೆ. ಅನೂಪ್ ಭಂಡಾರಿ ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕಾಗಿ ಬೃಹತ್ ಸೆಟ್ ನಿರ್ಮಾಣ ಮಾಡಲಾಗಿದ್ದು, 8 ಎಕರೆ ಜಾಗದಲ್ಲಿ ವಿದೇಶಿ ಶೈಲಿಯ ಸೆಟ್‌ಗಳನ್ನು ನಿರ್ಮಿಸಲಾಗಿದೆ.

ಕಿಚ್ಚ ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ಹಿಟ್ ಆಗಿದೆ. ಈಗ ಅವರು ಬಿಗ್ ಬಾಸ್ ಆ್ಯಂಕರಿಂಗ್ ಕೂಡ ಪೂರ್ಣಗೊಳಿಸಿದ್ದು, ಶೀಘ್ರವೇ ಅವರು ‘ಬಿಲ್ಲ ರಂಗ ಬಾಷಾ’ ಚಿತ್ರದ ಕೆಲಸಗಳಲ್ಲಿ ಶೀಘ್ರವೇ ತೊಡಗಿಕೊಳ್ಳಲಿದ್ದಾರೆ. ಈ ಚಿತ್ರಕ್ಕೆ ಅನೂಪ್ ಭಂಡಾರಿ ನಿರ್ದೇಶನ ಮಾಡುತ್ತಿದ್ದು, ಸಿನಿಮಾ ಬಗ್ಗೆ ದೊಡ್ಡ ಅಪ್ಡೇಟ್ ಒಂದನ್ನು ನೀಡಲಾಗಿದೆ.
ಕಿಚ್ಚ ಸುದೀಪ್ ಹಾಗೂ ಅನೂಪ್ ಈ ಮೊದಲು ‘ವಿಕ್ರಾಂತ್ ರೋಣ’ ಚಿತ್ರದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದರು. ಇದಾದ ಬಳಿಕ ‘ಬಿಲ್ಲ ರಂಗ ಬಾಷಾ’ ಚಿತ್ರದ ಕೆಲಸಗಳಲ್ಲಿ ಇವರು ತೊಡಗಿಕೊಳ್ಳಬೇಕಿತ್ತು. ಆದರೆ, ಕಾರಣಾಂತರಗಳಿಂದ ಸಿನಿಮಾದ ಕೆಲಸ ವಿಳಂಬ ಆಗಿದೆ. ಈಗ ಸುದೀಪ್ ಅವರು ಈ ಚಿತ್ರದ ಶೂಟ್ನಲ್ಲಿ ಭಾಗಿ ಆಗಲು ರೆಡಿ ಆಗುತ್ತಿದ್ದಾರೆ.
#BRBMovie Joining hands with @KicchaSudeep sir & The Makers of Hanuman @primeshowtweets, to bring to you ‘A Tale From The Future’. Unveiling the Official Title Logo and Concept video on Baadshah’s Birthday. #BillaRangaBaasha – First Blood @Niran_Reddy @chaitanyaniran… pic.twitter.com/4oZQEkMUA7
— Anup Bhandari (@anupsbhandari) September 2, 2024
ಕಿಚ್ಚ ಸುದೀಪ್ ಅವರು ‘ಸಿಸಿಎಲ್’ ಬ್ಯುಸಿ ಇದ್ದಾರೆ. ಅವರು ‘ಕರ್ನಾಟಕ ಬುಲ್ಡೋಜರ್ಸ್’ ಪರ ಆಟ ಆಡುತ್ತಿದ್ದಾರೆ. ಹಲವು ಹಂತಗಳಲ್ಲಿ ಪಂದ್ಯಗಳು ನಡೆಯಲಿವೆ. ಮುಂದಿನ ಕೆಲ ವಾರ ಸುದೀಪ್ ಸಿಸಿಎಲ್ನಲ್ಲಿ ಬ್ಯುಸಿ ಇರಲಿದ್ದಾರೆ. ಆ ಬಳಿಕ ‘ಬಿಲ್ಲ ರಂಗ ಬಾಷಾ’ ಸಿನಿಮಾ ಕೆಲಸಗಳಲ್ಲಿ ಸುದೀಪ್ ತೊಡಗಿಕೊಳ್ಳಲಿದ್ದಾರೆ.
ಇದನ್ನೂ ಓದಿ: ‘ಬಿಲ್ಲ ರಂಗ ಬಾಷಾ’ ಚಿತ್ರ ಅನೌನ್ಸ್; ಇದು 2209ರಲ್ಲಿ ನಡೆಯೋ ಕಥೆ
ಅದ್ದೂರಿ ವೆಚ್ಚದ ಸೆಟ್
‘ಬಿಲ್ಲ ರಂಗ ಬಾಷಾ’ ಚಿತ್ರಕ್ಕಾಗಿ ಅದ್ದೂರಿ ವೆಚ್ಚದ ಸೆಟ್ ನಿರ್ಮಾಣ ಮಾಡಲಾಗುತ್ತಿದೆ. ಬೆಂಗಳೂರಿನ ನೈಸ್ ರಸ್ತೆಯ ಬಳಿ ಯುಐ ಸೆಟ್ ಹಾಕಲಾಗಿತ್ತು. ಇದೇ ಜಾಗದಲ್ಲಿ ‘ಬಿಲ್ಲ ರಂಗ ಬಾಷಾ’ ಸೆಟ್ ಹಾಕಲಾಗಿತ್ತು. 8 ಎಕರೆ ಜಾಗದಲ್ಲಿ ವಿದೇಶಿ ರಸ್ತೆಗಳ ಸೆಟ್ ತಲೆ ಎತ್ತುತ್ತಿದೆ. ಕಲಾ ನಿರ್ದೇಶಕ ಶಿವಕುಮಾರ್ ಸೆಟ್ ಹಾಕುವ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ.
ಐದು ದೊಡ್ಡ ಸೆಟ್
‘ಬಿಲ್ಲ ರಂಗ ಬಾಷಾ’ ಚಿತ್ರದ ಶೇ. 70ರಷ್ಟು ಶೂಟ್ ಸೆಟ್ನಲ್ಲೇ ಸಾಗಲಿದೆ. ನಾಲ್ಕರಿಂದ ಐದು ಬಿಗ್ ಬಜೆಟ್ ಸೆಟ್ ಮಾಡಲು ಪ್ಲ್ಯಾನ್ ನಡೆದಿದೆ. ಮಾರ್ಚ್ ಮೂರನೇ ವಾರದಿಂದ ಬಿಲ್ಲ ರಂಗ ಬಾಷಾ ಶೂಟಿಂಗ್ ಆರಂಭ ಆಗುವ ಸಾಧ್ಯತೆ ಇದೆ. ಸುದೀಪ್ ಅವರು ಇದಕ್ಕಾಗಿ ದಪ್ಪ ಆಗುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.