‘ಬಿಲ್ಲ ರಂಗ ಬಾಷಾ’ ಚಿತ್ರ ಅನೌನ್ಸ್; ಇದು 2209ರಲ್ಲಿ ನಡೆಯೋ ಕಥೆ
‘ವಿಕ್ರಾಂತ್ ರೋಣ’ ಚಿತ್ರ 2022ರಲ್ಲಿ ರಿಲೀಸ್ ಆಯಿತು. ಸುದೀಪ್ ಹಾಗೂ ಅನೂಪ್ ಭಂಡಾರಿ ಇದರಲ್ಲಿ ಒಟ್ಟಾಗಿ ಕೆಲಸ ಮಾಡಿದ್ದರು. ಈ ಸಿನಿಮಾದಲ್ಲಿ ರೆಟ್ರೋ ಕಥೆಯನ್ನು ಹೇಳಲಾಗಿತ್ತು. ಈಗ ಸಿನಿಮಾ ಮೆಚ್ಚುಗೆ ಪಡೆಯಿತು. ಈಗ ಸುದೀಪ್ ಅವರ ಸಿನಿಮಾದಲ್ಲಿ ಭವಿಷ್ಯದ ಕಥೆ ಇರಲಿದೆ.
ಕಿಚ್ಚ ಸುದೀಪ್ ನಟನೆಯ ‘ಬಿಲ್ಲ ರಂಗ ಬಾಷಾ’ ಚಿತ್ರದ ಬಗ್ಗೆ ಫ್ಯಾನ್ಸ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಚಿತ್ರದ ಬಗ್ಗೆ ಈ ಮೊದಲಿನಿಂದಲೂ ಸುದ್ದಿ ಹರಿದಾಡುತ್ತಲೇ ಇತ್ತು. ಕೊನೆಗೂ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಸಿನಿಮಾದ ಟೈಟಲ್ ಅನೌನ್ಸ್ಮೆಂಟ್ ಅಧಿಕೃತವಾಗಿ ಆಗಿದೆ. ಇದು 2209ರಲ್ಲಿ ನಡೆಯೋ ಕಥೆ ಅನ್ನೋದನ್ನು ರಿವೀಲ್ ಮಾಡಲಾಗಿದೆ. ಅಂದರೆ ಈ ಸಿನಿಮಾದಲ್ಲಿ ಭವಿಷ್ಯದ ಕಥೆಯನ್ನು ಹೇಳಲು ನಿರ್ದೇಶಕ ಅನೂಪ್ ಭಂಡಾರಿ ರೆಡಿ ಆಗಿದ್ದಾರೆ.
‘ವಿಕ್ರಾಂತ್ ರೋಣ’ ಚಿತ್ರದಲ್ಲಿ ಸುದೀಪ್ ಹಾಗೂ ಅನೂಪ್ ಭಂಡಾರಿ ಒಟ್ಟಾಗಿ ಕೆಲಸ ಮಾಡಿದ್ದರು. ಈ ಸಿನಿಮಾದಲ್ಲಿ ರೆಟ್ರೋ ಕಥೆಯನ್ನು ಹೇಳಲಾಗಿತ್ತು. ಈಗ ಸಿನಿಮಾ ಮೆಚ್ಚುಗೆ ಪಡೆಯಿತು. ಈಗ ಸುದೀಪ್ ಅವರ ಸಿನಿಮಾದಲ್ಲಿ ಭವಿಷ್ಯದ ಕಥೆ ಇರಲಿದೆ. ಸದ್ಯ ನಾವು 2024ನೇ ಇಸ್ವಿಯಲ್ಲಿದ್ದೇವೆ. ಈ ಚಿತ್ರ ರಿಲೀಸ್ ಆಗೋದು 2025ರಲ್ಲಿ. ಈ ಸಿನಿಮಾದ ಕಥೆ 100 ವರ್ಷ ಮುಂದಿನದ್ದು.
1924ರಿಂದ ಈಚರೆಗೆ 100 ವರ್ಷಗಳಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಯಾರೂ ಊಹಿಸದ ತಂತ್ರಜ್ಞಾನಗಳು ಬಂದಿವೆ. ಅದೇ ರೀತಿ ಮುಂದಿನ 100 ವರ್ಷಗಳಲ್ಲಿ ಇನ್ನಷ್ಟು ಬದಲಾವಣೆಗಳು ಆಗಬಹುದು. ಇದೇ ಕಲ್ಪನೆಯಲ್ಲಿ ‘ಬಿಲ್ಲ ರಂಗ ಬಾಷಾ’ ಸಿನಿಮಾ ಮೂಡಿ ಬರುತ್ತಿದೆ. ಈ ಚಿತ್ರದ ಬಗ್ಗೆ ಫ್ಯಾನ್ಸ್ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಳ್ಳುವಂತೆ ಆಗಿದೆ.
#BRBMovie Joining hands with @KicchaSudeep sir & The Makers of Hanuman @primeshowtweets, to bring to you ‘A Tale From The Future’. Unveiling the Official Title Logo and Concept video on Baadshah’s Birthday. #BillaRangaBaasha – First Blood @Niran_Reddy @chaitanyaniran… pic.twitter.com/4oZQEkMUA7
— Anup Bhandari (@anupsbhandari) September 2, 2024
ಇದನ್ನೂ ಓದಿ: ಸುದೀಪ್ ಬರ್ತ್ಡೇಗಿಲ್ಲ ‘ಬಿಲ್ಲ ರಂಗ ಬಾಷಾ’ ಅಪ್ಡೇಟ್; ಕಾರಣ ತಿಳಿಸಿದ ಅನೂಪ್ ಭಂಡಾರಿ
ಇಂದು (ಸೆಪ್ಟೆಂಬರ್ 2) ಸುದೀಪ್ ಜನ್ಮದಿನ. ಆ ಪ್ರಯುಕ್ತ ಅನೂಪ್ ಭಂಡಾರಿ ಅವರು ಈ ಚಿತ್ರದ ಟೈಟಲ್ ಅನಾವರಣ್ ಮಾಡಿದ್ದಾರೆ. ಟೈಟಲ್ ಅನೌನ್ಸ್ ಮಾಡುವಾಗ ಅವರು ಸಿನಿಮಾ ಹೇಗಿರಬಹುದು ಎನ್ನುವುದರ ಸಣ್ಣ ಝಲಕ್ ತೋರಿಸಿದ್ದಾರೆ. ಇದರಲ್ಲಿ ಗ್ರಾಫಿಕ್ಸ್ ಪಾತ್ರ ಹೆಚ್ಚಿರಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.