ಸುದೀಪ್ ಜನ್ಮದಿನ: ‘ಅಪ್ಪಂಗೆ ಹುಟ್ಟಿದ್ರೆ ತೊಡೆತಟ್ಟಿ ಬಾರೋ’ ಎಂದ ಮ್ಯಾಕ್ಸ್
‘ಮ್ಯಾಕ್ಸಿಮಮ್ ಮಾಸ್’ ಹಾಡಿಗೆ ಖ್ಯಾತ ಸಂಗೀತ ಸಂಯೋಜಕ ಬಿ. ಅಜನೀಶ್ ಲೋಕನಾಥ್ ಮ್ಯೂಸಿಕ್ ಕೊಟ್ಟಿದ್ದಾರೆ. ಚೇತನ್ ಗಂಧರ್ವ ಅವರು ಈ ಹಾಡನ್ನು ಹಾಡಿದ್ದಾರೆ. ಈ ಹಾಡಿನ ಲಿರಿಕಲ್ ಸಾಂಗ್ ಗಮನ ಸೆಳೆಯುತ್ತಿದೆ. ‘ಅಪ್ಪಂಗೆ ಹುಟ್ಟಿದ್ರೆ ತೊಡೆತಟ್ಟಿ ಬಾರೋ’ ಎಂಬ ಸಾಲುಗಳಿಂದ ಈ ಹಾಡು ಆರಂಭ ಆಗುತ್ತದೆ.
ಕಿಚ್ಚ ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ಬಗ್ಗೆ ಫ್ಯಾನ್ಸ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸಿನಿಮಾ ಯಾವಾಗ ರಿಲೀಸ್ ಆಗಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇದೆ. ಈಗ ಸುದೀಪ್ ಜನ್ಮದಿನದ ಪ್ರಯುಕ್ತ ‘ಮ್ಯಾಕ್ಸ್’ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್ ಆಗಿದೆ. ‘ಮ್ಯಾಕ್ಸಿಮಮ್ ಮಾಸ್’ ಸಾಂಗ್ ರಿಲೀಸ್ ಆಗಲಿದೆ. ಈ ಸಾಂಗ್ನಲ್ಲಿರೋ ಪಂಚಿಂಗ್ ಡೈಲಾಗ್ಗಳು ಗಮನ ಸೆಳೆದಿವೆ.
‘ಮ್ಯಾಕ್ಸಿಮಮ್ ಮಾಸ್’ ಹಾಡನ್ನು ಬರೆದಿದ್ದು ನಿರ್ದೇಶಕ ಅನೂಪ್ ಭಂಡಾರಿ ಅವರು. ‘ಅಪ್ಪಂಗೆ ಹುಟ್ಟಿದ್ರೆ ತೊಡೆತಟ್ಟಿ ಬಾರೋ’ ಎಂಬ ಸಾಲುಗಳಿಂದ ಈ ಹಾಡು ಆರಂಭ ಆಗುತ್ತದೆ. ‘ಪಂಜ ಎತ್ತಿ ಬಿಟ್ಟ ಅಂದ್ರೆ ಒಂದೂವರೆ ಟನ್ ಬಾಸ್, ರಟ್ಟೇಲ್ ಬಾಳ್ ಬಲ ಎದೆಲ್ ಇದೆ ದಮ್ ಬಾಸ್’ ಎಂಬ ಸಾಲುಗಳು ಗಮನ ಸೆಳೆದಿವೆ.
#MaximumMass lyrics leak. ನಾಳೆ ಹಾಡ್ ರಿಲೇಸ್ ಆದಾಗ ಜೊತೇಗ್ ಹಾಡಿ! Quote your favorite line today and let me know if it changes tomorrow after you hear the song. P.S: @AJANEESHB, hope you are not planning to leak the tune 😁. @KicchaSudeep @Max_themovie @vijaykartikeyaa… pic.twitter.com/X6MLU4NIvF
— Anup Bhandari (@anupsbhandari) September 1, 2024
‘ಮ್ಯಾಕ್ಸಿಮಮ್ ಮಾಸ್’ ಹಾಡಿಗೆ ಖ್ಯಾತ ಸಂಗೀತ ಸಂಯೋಜಕ ಬಿ. ಅಜನೀಶ್ ಲೋಕನಾಥ್ ಮ್ಯೂಸಿಕ್ ಕೊಟ್ಟಿದ್ದಾರೆ. ಚೇತನ್ ಗಂಧರ್ವ ಅವರು ಈ ಹಾಡನ್ನು ಹಾಡಿದ್ದಾರೆ. ಎಂಸಿ ಬಿಜ್ಜು ಹಾಡಿಗೆ ರ‍್ಯಾಪ್ ಮಾಡಿದ್ದಾರೆ. ಈ ಹಾಡು ಸದ್ಯ ‘ಸರೆಗಮ ಕನ್ನಡ’ ಯೂಟ್ಯೂಬ್ ಚಾನೆಲ್ ಮೂಲಕ ರಿಲೀಸ್ ಆಗಿದೆ. ಈ ಸಾಂಗ್ ರಿಲೀಸ್ ಆದ ಸ್ವಲ್ಪ ಹೊತ್ತಲ್ಲಿ ಸಾವಿರಾರು ಬಾರಿ ವೀಕ್ಷಣೆ ಕಂಡಿದೆ. ಸುದೀಪ್ ಜನ್ಮದಿನಕ್ಕೆ ಈ ಸಾಂಗ್ ರಿಲೀಸ್ ಆಗಿರೋದು ವಿಶೇಷ.
ಇದನ್ನೂ ಓದಿ: ಮಧ್ಯರಾತ್ರಿ ಹೇಗಿತ್ತು ನೋಡಿ ಕಿಚ್ಚ ಸುದೀಪ್ ಬರ್ತ್ಡೇ ಸೆಲೆಬ್ರೇಷನ್
ಸುದೀಪ್ ಅವರ ನಟನೆಯ ‘ಮ್ಯಾಕ್ಸ್’ ಸಿನಿಮಾ ಈಗಲೇ ರಿಲೀಸ್ ಆಗಬೇಕಿತ್ತು. ಆದರೆ, ಕನ್ನಡದಲ್ಲಿ ಬೇರೆ ಬೇರೆ ಸಿನಿಮಾಗಳು ರಿಲೀಸ್ ಆಗುತ್ತಿವೆ. ಈ ಕಾರಣದಿಂದ ಸುದೀಪ್ ಅವರು ಸಿನಿಮಾ ರಿಲೀಸ್ ದಿನಾಂಕವನ್ನು ಮುಂದೂಡಿಕೊಂಡಿದ್ದಾರೆ ಎನ್ನುವ ಮಾತಿದೆ. ಇದನ್ನು ಸುದೀಪ್ ಕೂಡ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:43 am, Mon, 2 September 24