AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್ ಪ್ರೋಮೋ ರಿಲೀಸ್; ಕಿಚ್ಚ ಸುದೀಪ್​ ಇರ್ತಾರಾ, ಇರಲ್ವಾ? ಸ್ಪಷ್ಟಪಡಿಸಿದ ಕಲರ್ಸ್

Bigg Boss Kannada Season 11: ಕಿಚ್ಚ ಸುದೀಪ್ ಅವರಿಗೆ ಇಂದು (ಸೆಪ್ಟೆಂಬರ್ 2) ಜನ್ಮದಿನ. ಅದಕ್ಕೂ ಮೊದಲು ಕಲರ್ಸ್ ಕನ್ನಡದ ಕಡೆಯಿಂದ ಹೊಸ ಪ್ರೋಮೋ ಒಂದು ರಿಲೀಸ್ ಆಗಿದೆ. ಈ ಪ್ರೋಮೋದಲ್ಲಿ ಸುದೀಪ್ ಇರುತ್ತಾರೋ ಅಥವಾ ಇಲ್ಲವೋ ಎನ್ನುವ ಬಗ್ಗೆ ಸ್ಪಷ್ಟನೆ ನೀಡಲಾಗಿದೆ.

ಬಿಗ್ ಬಾಸ್ ಪ್ರೋಮೋ ರಿಲೀಸ್; ಕಿಚ್ಚ ಸುದೀಪ್​ ಇರ್ತಾರಾ, ಇರಲ್ವಾ? ಸ್ಪಷ್ಟಪಡಿಸಿದ ಕಲರ್ಸ್
ಸುದೀಪ್
ರಾಜೇಶ್ ದುಗ್ಗುಮನೆ
|

Updated on:Sep 02, 2024 | 7:12 AM

Share

ಕಿಚ್ಚ ಸುದೀಪ್ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಇರ್ತಾರಾ ಅಥವಾ ಇಲ್ಲವಾ ಎನ್ನುವುದು ಯಕ್ಷ ಪ್ರಶ್ನೆಯಾಗಿತ್ತು. ಕೊನೆಗೂ ಇದಕ್ಕೆ ಉತ್ತರ ಸಿಕ್ಕಿದೆ. ಕಲರ್ಸ್ ಕನ್ನಡ ವಾಹಿನಿ ಬಿಗ್ ಬಾಸ್ ಪ್ರೋಮೋ ರಿಲೀಸ್ ಮಾಡಿದೆ. ಹಾಗಂತ ಈ ಪ್ರೋಮೋದಲ್ಲಿ ಸುದೀಪ್ ಅವರ ಎಂಟ್ರಿ ಆಗಿಲ್ಲ. ಆದಾಗ್ಯೂ ಸುದೀಪ್ ಅವರು ಇರುತ್ತಾರೋ ಅಥವಾ ಇಲ್ಲವೋ ಎನ್ನುವ ವಿಚಾರಕ್ಕೆ ಸ್ಪಷ್ಟನೆ ಸಿಕ್ಕಂತೆ ಆಗಿದೆ. ಆ ಬಗ್ಗೆ ಇಲ್ಲಿದೆ ವಿವರ.

‘ಬಿಗ್ ಬಾಸ್ ಕನ್ನಡ ಸೀಸನ್ 10’ ಯಶಸ್ಸು ಕಂಡಿತ್ತು. ನಿರೂಪಕ ಸುದೀಪ್ ಅವರ ಸಿನಿಮಾ ಕೆಲಸಗಳಿಗೆ ಈ ಶೋ ಅಡಚಣೆ ಉಂಟುಮಾಡಿತ್ತು. ಎಲ್ಲೇ ಇದ್ದರೂ ಬಿಗ್ ಬಾಸ್​ಗಾಗಿ ಅವರು ಬೆಂಗಳೂರಿಗೆ ಬರಬೇಕಿತ್ತು. ಈಗ ಅವರು 2-3 ಸಿನಿಮಾಗಳನ್ನು ಒಟ್ಟೊಟ್ಟಿಗೆ ಶೂಟ್ ಮಾಡುವ ಆಲೋಚನೆಯಲ್ಲಿ ಇದ್ದಾರೆ. ಹೀಗಾಗಿ, ಅವರು ಬಿಗ್ ಬಾಸ್​ನಿಂದ ಹೊರಕ್ಕೆ ನಡೆಯಲಿದ್ದಾರೆ ಎನ್ನಲಾಗಿತ್ತು. ಆದರೆ, ಆ ರೀತಿ ಆಗಿಲ್ಲ. ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11’ ನಡೆಸಿಕೊಡಲಿದ್ದಾರೆ.

‘ಬಿಗ್ ಬಾಸ್’ ಪ್ರೋಮೋದಲ್ಲಿ ಲೋಗೋ ರಿವೀಲ್ ಮಾಡಲಾಗಿದೆ ಅಷ್ಟೇ. ಕ್ಯಾಪ್ಶನ್​ನಲ್ಲಿ ‘Kichcha Sudeep’ ಹ್ಯಾಶ್​ಟ್ಯಾಗ್ ಹಾಕಲಾಗಿದೆ. ಇದರಿಂದ ಸುದೀಪ್ ಅವರು ಇರೋದು ಪಕ್ಕಾ ಆಗಿದೆ. ಈ ವಿಡಿಯೋಗೆ ಫ್ಯಾನ್ಸ್ ಕಡೆಯಿಂದ ಭರ್ಜರಿ ಲೈಕ್ಸ್ ಸಿಕ್ಕಿದೆ.

ಇದನ್ನೂ ಓದಿ: ಕಿಚ್ಚ ಸುದೀಪ್​ ಹುಟ್ಟುಹಬ್ಬದ ಸೆಲೆಬ್ರೇಷನ್​ಗೆ ಭರ್ಜರಿಯಾಗಿ ನಡೆದಿದೆ ಫ್ಯಾನ್ಸ್ ತಯಾರಿ

ಸುದೀಪ್ ಅವರಿಗೆ ಇಂದು (ಸೆಪ್ಟೆಂಬರ್ 2) ಜನ್ಮದಿನ. ಈ ವಿಶೇಷ ಕಾರಣಕ್ಕೆ ‘ಬಿಗ್ ಬಾಸ್’ ಪ್ರೋಮೋ ರಿಲೀಸ್ ಮಾಡಿರಬಹುದು ಎಂದು ಫ್ಯಾನ್ಸ್ ಊಹಿಸಿದ್ದಾರೆ. ಈಗಾಗಲೇ ಹೈದರಾಬಾದ್​ನಲ್ಲಿ ಸುದೀಪ್ ಇರುವ ಬಿಗ್ ಬಾಸ್​ನ ಪ್ರೋಮೋಶೂಟ್ ಪೂರ್ಣಗೊಂಡಿದೆಯಂತೆ. ಅದನ್ನು ಯಾವಾಗ ರಿಲೀಸ್ ಮಾಡಲಾಗುತ್ತದೆ ಎಂದು ಫ್ಯಾನ್ಸ್ ಕಾದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 6:58 am, Mon, 2 September 24