ಒಟಿಟಿಗೆ ಬರಲಿದೆ ಉಪ್ಪಿ ನಟನೆಯ ತೆಲುಗು ಸಿನಿಮಾ: ಬಿಡುಗಡೆ ಯಾವಾಗ?

Upendra Telugu Movie: ಉಪೇಂದ್ರ ಸಾಕಷ್ಟು ತೆಲುಗು ಸಿನಿ ಪ್ರಿಯರನ್ನು ಅಭಿಮಾನಿಗಳನ್ನಾಗಿ ಹೊಂದಿದ್ದಾರೆ ಉಪೇಂದ್ರ. ಆಗೊಮ್ಮೆ ಈಗೊಮ್ಮೆ ತೆಲುಗು ಸಿನಿಮಾಗಳಲ್ಲಿಯೂ ನಟಿಸುತ್ತಿರುತ್ತಾರೆ ಉಪೇಂದ್ರ. ಇತ್ತೀಚೆಗಷ್ಟೆ ‘ಆಂಧ್ರ ಕಿಂಗ್ ತಾಲೂಕ’ ಹೆಸರಿನ ತೆಲುಗು ಸಿನಿಮಾನಲ್ಲಿ ಉಪೇಂದ್ರ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಸಿನಿಮಾ ಈಗಾಗಲೇ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಉತ್ತಮ ಪ್ರದರ್ಶನ ಕಂಡಿದೆ. ಇದೀಗ ಇದೇ ಸಿನಿಮಾ ಒಟಿಟಿಗೆ ಬರುತ್ತಿದೆ.

ಒಟಿಟಿಗೆ ಬರಲಿದೆ ಉಪ್ಪಿ ನಟನೆಯ ತೆಲುಗು ಸಿನಿಮಾ: ಬಿಡುಗಡೆ ಯಾವಾಗ?
Andhra King Taluka

Updated on: Dec 20, 2025 | 7:26 PM

ಉಪೇಂದ್ರ (Upendra) ಕನ್ನಡದಲ್ಲಿ ಮಾತ್ರವಲ್ಲ ನೆರೆಯ ತೆಲುಗು ಚಿತ್ರರಂಗದಲ್ಲೂ ಜನಪ್ರಿಯರು. ಸಾಕಷ್ಟು ತೆಲುಗು ಸಿನಿ ಪ್ರಿಯರನ್ನು ಅಭಿಮಾನಿಗಳನ್ನಾಗಿ ಹೊಂದಿದ್ದಾರೆ ಉಪೇಂದ್ರ. ಆಗೊಮ್ಮೆ ಈಗೊಮ್ಮೆ ತೆಲುಗು ಸಿನಿಮಾಗಳಲ್ಲಿಯೂ ನಟಿಸುತ್ತಿರುತ್ತಾರೆ ಉಪೇಂದ್ರ. ಇತ್ತೀಚೆಗಷ್ಟೆ ‘ಆಂಧ್ರ ಕಿಂಗ್ ತಾಲೂಕ’ ಹೆಸರಿನ ತೆಲುಗು ಸಿನಿಮಾನಲ್ಲಿ ಉಪೇಂದ್ರ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಸಿನಿಮಾ ಈಗಾಗಲೇ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿ ಉತ್ತಮ ಪ್ರದರ್ಶನ ಕಂಡಿದೆ. ಇದೀಗ ಇದೇ ಸಿನಿಮಾ ಒಟಿಟಿಗೆ ಬರುತ್ತಿದೆ.

ತೆಲುಗು ಚಿತ್ರರಂಗದ ಜನಪ್ರಿಯ ನಟ ರಾಮ್ ಪೋತಿನೇನಿ ನಾಯಕನಾಗಿ, ಭಾಗ್ಯಶ್ರೀ ಬೋರ್ಸೆ ನಾಯಕಿಯಾಗಿ ನಟಿಸಿರುವ ‘ಆಂಧ್ರ ಕಿಂಗ್ ತಾಲ್ಲೂಕ’ ಸಿನಿಮಾ ನವೆಂಬರ್ 27ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿತ್ತು. ಈ ಸಿನಿಮಾನಲ್ಲಿ ಉಪೇಂದ್ರ ತೆಲುಗು ಚಿತ್ರರಂಗದ ಸ್ಟಾರ್ ನಟನ ಪಾತ್ರದಲ್ಲಿ ನಟಿಸಿದ್ದರು. ಸಿನಿಮಾ ಸ್ಟಾರ್ ನಟ ಹಾಗೂ ಅಭಿಮಾನಿ ನಡುವಿನ ಕತೆಯನ್ನು ಒಳಗೊಂಡಿತ್ತು. ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿ ಬಹಳ ಒಳ್ಳೆಯ ವಿಮರ್ಶೆಗಳನ್ನು ಗಳಿಸಿತ್ತು, ಸಿನಿಮಾನಲ್ಲಿ ರಾಮ್ ಪೋತಿನೇನಿ, ಭಾಗ್ಯಶ್ರೀ ಮತ್ತು ಉಪೇಂದ್ರ ನಟನೆಗೂ ಸಹ ಮೆಚ್ಚುಗೆ ವ್ಯಕ್ತವಾಗಿತ್ತು.

ಇದೀಗ ಈ ಸಿನಿಮಾ ಒಟಿಟಿಗೆ ಬರುತ್ತಿದೆ. ‘ಆಂಧ್ರ ಕಿಂಗ್ ತಾಲೂಕ’ ಸಿನಿಮಾ ಅನ್ನು ಉತ್ತಮ ಮೊತ್ತಕ್ಕೆ ನೆಟ್​​ಫ್ಲಿಕ್ಸ್​ ನವರು ಖರೀದಿ ಮಾಡಿದ್ದಾರೆ. ಸಿನಿಮಾ ಡಿಸೆಂಬರ್ 25ಕ್ಕೆ ಅಂದರೆ ಕ್ರಿಸ್​​ಮಸ್​ ದಿನದಂದು ನೆಟ್​​ಫ್ಲಿಕ್ಸ್​​ನಲ್ಲಿ ಸ್ಟ್ರೀಮಿಂಗ್ ಆರಂಭಿಸಲಿದೆ. ‘ಇಷ್ಟು ದಿನ ಸ್ಟಾರ್ ನಟರ ಬಯೋಪಿಕ್ ನೋಡಿದ್ದೀರ, ಈಗ ಅಭಿಮಾನಿಯ ಬಯೋಪಿಕ್ ನೋಡಿ’ ಎಂದು ‘ಆಂಧ್ರ ಕಿಂಗ್ ತಾಲೂಕ’ದ ಪ್ರಚಾರ ಮಾಡುತ್ತಿದೆ ನೆಟ್​ಫ್ಲಿಕ್ಸ್​.

ಇದನ್ನೂ ಓದಿ:ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ

‘ಆಂಧ್ರ ಕಿಂಗ್ ತಾಲೂಕ’ ಸಿನಿಮಾನಲ್ಲಿ ರಾಮ್ ಪೋತಿನೇನಿ ಸಿನಿಮಾ ನಟನ ಅಭಿಮಾನಿಯ ಪಾತ್ರದಲ್ಲಿ ನಟಿಸಿದ್ದಾರೆ. ಭಾಗ್ಯಶ್ರೀ ಬೋರ್ಸೆ ಚಿತ್ರಮಂದಿರ ಮಾಲೀಕನ ಪುತ್ರಿಯ ಪಾತ್ರದಲ್ಲಿ ನಟಿಸಿದ್ದಾರೆ. ಉಪೆಂದ್ರ, ತೆಲುಗು ಚಿತ್ರರಂಗದ ಸ್ಟಾರ್ ನಟ ಸೂರ್ಯ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ನಿರ್ದೇಶನ ಮಾಡಿರುವುದು ಮಹೇಶ್ ಬಾಬು ಪಚ್ಚಿಗೊಲ್ಲ. ಸ್ಟಾರ್ ನಟನಿಂದ ಅಭಿಮಾನಿ ಹಾಗೂ ಅಭಿಮಾನಿ ಒಬ್ಬನಿಂದ ಸ್ಟಾರ್ ನಟ ಹೇಗೆ ಪರಸ್ಪರ ನೆರವಿಗೆ ಬರುತ್ತಾರೆ, ಇಬ್ಬರೂ ಭೇಟಿಯೇ ಆಗದಿದ್ದರೂ ಇಬ್ಬರ ನಡುವಿನ ಬಂಧ, ಅಭಿಮಾನಿಯ ಸವಾಲು, ಸ್ಟಾರ್ ನಟ ಪ್ರೀತಿ ಹೀಗೆ ಹಲವು ವಿಷಯಗಳನ್ನು ಈ ಸಿನಿಮಾ ಒಳಗೊಂಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ