AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Urfi Javed: ಉರ್ಫಿ ಜಾವೇದ್ ಅರೆಸ್ಟ್ ನಾಟಕ: ನಾಲ್ವರು ನಕಲಿ ಪೊಲೀಸರು ಅರೆಸ್ಟ್

ಉರ್ಫಿ ಜಾವೇದ್ ವಿರುದ್ಧ ಓಶಿವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಕಲಿ ವಿಡಿಯೋ ಮಾಡಿ ಮುಂಬೈ ಪೊಲೀಸರಿಗೆ ಮಾನಹಾನಿ ಮಾಡಿದ್ದಕ್ಕಾಗಿ ಕೇಸ್ ದಾಖಲಿಸಿಕೊಳ್ಳಲಾಗಿದೆ. ಈ ಕುರಿತು ಕಾರ್ಯಾಚರಣೆ ನಡೆಸಿದ ಓಶಿವಾರ ಪೊಲೀಸರು ಇಬ್ಬರು ಮಹಿಳೆಯರು ಮತ್ತು ಇಬ್ಬರು ಪುರುಷರನ್ನು ಬಂಧಿಸಿದ್ದಾರೆ.

Urfi Javed: ಉರ್ಫಿ ಜಾವೇದ್ ಅರೆಸ್ಟ್ ನಾಟಕ: ನಾಲ್ವರು ನಕಲಿ ಪೊಲೀಸರು ಅರೆಸ್ಟ್
ಉರ್ಫಿ
ರಾಜೇಶ್ ದುಗ್ಗುಮನೆ
|

Updated on: Nov 04, 2023 | 1:33 PM

Share

ಉರ್ಫಿ ಜಾವೇದ್ (Urfi Javed) ಅವರನ್ನು ಬಂಧಿಸಿದ ವಿಡಿಯೋ ಇತ್ತೀಚೆಗೆ ವೈರಲ್ ಆಗಿತ್ತು. ತುಂಡುಡುಗೆ ಧರಿಸಿದ್ದಕ್ಕೆ ಅವರನ್ನು ಬಂಧಿಸಲಾಗಿದೆ ಎಂದು ಹೇಳಲಾಗಿತ್ತು. ಈ ವಿಚಾರವಾಗಿ ಅನೇಕರು ಮುಂಬೈ ಪೊಲೀಸರ ವಿರುದ್ಧ ಅಪಸ್ವರ ತೆಗೆದಿದ್ದರು. ಇನ್ನೂ ಕೆಲವರು ಇದು ಉರ್ಫಿ ಆಡಿದ ನಾಟಕ ಎನ್ನಲಾಗಿತ್ತು. ಈ ಪ್ರಕರಣದ ಅಸಲಿಯತ್ತು ಗೊತ್ತಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ಓಶಿವಾರ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಇದರಿಂದಾಗಿ ಉರ್ಫಿಗೆ ಸಂಕಷ್ಟ ಹೆಚ್ಚಾಗುವ ಸಾಧ್ಯತೆ ಇದೆ. ಪ್ರಚಾರಕ್ಕಾಗಿ ಉರ್ಫಿ ಮಾಡಿದ ನಾಟಕ ಇದು ಎಂದು ಹೇಳಲಾಗುತ್ತಿದೆ.

ಉರ್ಫಿ ಜಾವೇದ್ ವಿರುದ್ಧ ಓಶಿವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಕಲಿ ವಿಡಿಯೋ ಮಾಡಿ ಮುಂಬೈ ಪೊಲೀಸರಿಗೆ ಮಾನಹಾನಿ ಮಾಡಿದ್ದಕ್ಕಾಗಿ ಕೇಸ್ ದಾಖಲಿಸಿಕೊಳ್ಳಲಾಗಿದೆ. ಈ ಕುರಿತು ಕಾರ್ಯಾಚರಣೆ ನಡೆಸಿದ ಓಶಿವಾರ ಪೊಲೀಸರು ಇಬ್ಬರು ಮಹಿಳೆಯರು ಮತ್ತು ಇಬ್ಬರು ಪುರುಷರನ್ನು ಬಂಧಿಸಿದ್ದಾರೆ. ವಿಡಿಯೋ ಚಿತ್ರೀಕರಣಕ್ಕೆ ಬಳಸಿದ್ದ ಕಾರನ್ನು ಕೂಡ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ಬಟ್ಟೆ ಕಿರಿಕ್; ತುಂಡುಡುಗೆ ಧರಿಸಿದ್ದಕ್ಕೆ ಉರ್ಫಿ ಜಾವೇದ್​ನ ವಶಕ್ಕೆ ಪಡೆದ ಪೊಲೀಸರು

ವಿಡಿಯೋದಲ್ಲೇನಿದೆ?

ಸಣ್ಣ ಬಟ್ಟೆ ಧರಿಸಿದ್ದಕ್ಕೆ ಉರ್ಫಿ ಅವರನ್ನು ಮಹಿಳಾ ಪೊಲೀಸ್ ಸಿಬ್ಬಂದಿ ರೀತಿ ಕಾಣಿಸಿದ ಇಬ್ಬರು ಪ್ರಶ್ನೆ ಮಾಡಿದ್ದಾರೆ. ಜೊತೆಗೆ ಅವರನ್ನು ವಶಕ್ಕೆ ಪಡೆಯುತ್ತಿರುವುದು ವಿಡಿಯೋದಲ್ಲಿದೆ. ಈ ವಿಡಿಯೋ ವೈರಲ್ ಆಗಿತ್ತು. ಸಣ್ಣ ಬಟ್ಟೆ ಹಾಕಿದ್ದಕ್ಕೆ ಅರೆಸ್ಟ್ ಮಾಡೋದು ಏಕೆ ಎಂದು ಅನೇಕರು ಪೊಲೀಸರನ್ನು ಪ್ರಶ್ನೆ ಮಾಡಿದ್ದರು.

ಪೊಲೀಸರು ಹೇಳೋದೇನು?

‘ವಿಡಿಯೋದಲ್ಲಿ ಇರುವವರು ಮುಂಬೈ ಪೊಲೀಸರು ಅಲ್ಲ. ಅದು ನಮ್ಮ ಸಮವಸ್ತ್ರವೂ ಅಲ್ಲ. ತಪ್ಪು ದಾರಿಗೆ ಎಳೆದ ಈ ವಿಡಿಯೋ ಮಾಡಿದವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿದ್ದೇವೆ’ ಎಂದಿದ್ದಾರೆ ಅವರು.

ಮೂಡಿದೆ ಹಲವು ಪ್ರಶ್ನೆ

ಪ್ರಚಾರಕ್ಕಾಗಿ ಉರ್ಫಿ ಅವರೇ ಮಾಡಿಸಿದ ವಿಡಿಯೋನಾ ಅಥವಾ ಬೇರೆಯವರು ಮಾಡಿದ ಪ್ರ್ಯಾಂಕ್ ವಿಡಿಯೋಗೆ ಉರ್ಫಿ ಕುರಿ ಆದರಾ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.

ಬಟ್ಟೆ ವಿಚಾರದಲ್ಲಿ ಉರ್ಫಿಯನ್ನು ಈ ಮೊದಲು ವಶಕ್ಕೆ ಪಡೆಯಲಾಗಿತ್ತು. ಅವರು ವಿದೇಶದಲ್ಲಿ ಸಣ್ಣ ಬಟ್ಟೆ ಧರಿಸಿದ್ದಕ್ಕೆ ಪೊಲೀಸರು ವಶಕ್ಕೆ ಪಡೆದಿದ್ದರು. ಇವರ ವಿರುದ್ಧ ಮುಂಬೈನಲ್ಲಿ ಹಲವು ಪ್ರಕರಣ ದಾಖಲಾಗಿದ್ದವು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ