ನಟಿ ಉರ್ಫಿ ಜಾವೇದ್ ಅವರು ಯಾವಾಗಲೂ ಸುದ್ದಿಯಲ್ಲಿ ಇರಲು ಬಯಸುತ್ತಾರೆ. ಅವರು ‘ಫಾಲೋ ಕರ್ ಲೋ ಯಾರ್’ ಹೆಸರಿನ ಶೋ ಮಾಡಿದ್ದಾರೆ. ಇದರಲ್ಲಿ ಹಲವು ವಿಚಾರಗಳನ್ನು ಅವರು ರಿವೀಲ್ ಮಾಡಿದ್ದಾರೆ. ಅವರು ಖಾಸಗಿ ಜೀವನದ ಬಗ್ಗೆಯೂ ಮಾತನಾಡಿದ್ದಾರೆ. ಅವರು ಕಳೆದ ಮೂರು ವರ್ಷಗಳಿಂದ ದೈಹಿಕ ಸಂಪರ್ಕ ಮಾಡಿಲ್ಲಂವಂತೆ. ಇದಕ್ಕೆ ಅವರು ನೀಡಿದ ಕಾರಣ ಮಾತ್ರ ವಿಚಿತ್ರವಾಗಿದೆ.
‘ನಾನು ಕಳೆದ ಮೂರು ವರ್ಷಗಳಿಂದ ಸೆ* ಮಾಡಿಲ್ಲ. ನಾನು ಈ ಮೂರು ವರ್ಷಗಳಲ್ಲಿ ಯಾರಿಗೂ ಕಿಸ್ ಕೂಡ ಮಾಡಿಲ್ಲ. ಯಾವುದೇ ಪುರುಷನ ಜೊತೆ ರೊಮ್ಯಾಂಟಿಕ್ ಆಗಿ ಮಾತನಾಡಿಲ್ಲ’ ಎಂದಿದ್ದಾರೆ ಅವರು. ಹಾಗಾದರೆ ಇದಕ್ಕೆ ಒಂದು ಕಾರಣ ಇರಬೇಕಲ್ಲ. ಇದನ್ನು ಕೂಡ ಅವರು ವಿವರಿಸಿದ್ದಾರೆ. ‘ನಾನೇಕೆ ದೈಹಿಕ ಸಂಪರ್ಕ ನಡೆಸಿಲ್ಲ ಎಂಬುದಕ್ಕೂ ಒಂದು ಕಾರಣ ಇದೆ. ನನ್ನ ಬಳಿ ಎಲ್ಲಿಯವರೆಗೆ ಪ್ರೈವೆಟ್ ಜೆಟ್ ಇರುವುದಿಲ್ಲವೋ ಅಲ್ಲಿಯವರೆಗೆ ನಾನು ಟೆಂಪ್ಟ್ ಆಗುವುದಿಲ್ಲ ಎಂದು ನಾನು ಮೂರು ವರ್ಷಗಳ ಹಿಂದೆ ಪ್ರತಿಜ್ಞೆ ಮಾಡಿದ್ದೆ’ ಎಂದಿದ್ದಾರೆ ಅವರು.
‘ನಾನು ಸ್ವಾಭಿಮಾನಿ. ನಾನು ನನ್ನ ಜೀವನದಲ್ಲಿ ಎಲ್ಲವನ್ನು ನಾನೇ ಮಾಡಿಕೊಂಡಿದ್ದೇನೆ. ನನ್ನ ಪಾರ್ಟ್ನರ್ ಜೊತೆ ದುರ್ಬಲನಾಗಿ ಕಾಣಿಸಿಕೊಳ್ಳಲು ಇಷ್ಟಪಡಲ್ಲ’ ಎಂದಿದ್ದಾರೆ ಉರ್ಫಿ. ಈ ಮೂಲಕ ತಾವು ಎಷ್ಟು ಸ್ವಾಭಿಮಾನಿ ಎಂಬುದನ್ನು ಅವರು ತೋರಿಸಿಕೊಂಡಿದ್ದಾರೆ.
ಇದನ್ನೂ ಓದಿ: ಸೀರೆಯ ಅವತಾರವನ್ನೇ ಬದಲಾಯಿಸಿದ ಉರ್ಫಿ ಜಾವೇದ್; ಇನ್ನೇನು ಕಾದಿದೆಯೋ..
ಈ ಮೊದಲು ಉರ್ಫಿ ಜಾವೇದ್ ಅವರು ಪರಾಸ್ ಕಲ್ನಾವತ್ ಜೊತೆ ಸಂಬಂಧ ಹೊಂದಿದ್ದರು. 2017ರಿಂದ 2022ರವರೆಗೆ ಸುತ್ತಾಟ ನಡೆಸಿದ್ದರು. ಆ ಬಳಿಕ ಇವರದ್ದು ಬ್ರೇಕಪ್ ಆಯಿತು. ಬಿಗ್ ಬಾಸ್ ಒಟಿಟಿಗೆ ಕಾಲಿಟ್ಟ ಬಳಿಕ ಅವರ ಖ್ಯಾತಿ ಹೆಚ್ಚಾಯಿತು. ಅಲ್ಲಿಂದ ಅವರು ಚಿತ್ರ ವಿಚಿತ್ರ ಬಟ್ಟೆ ಹಾಕೋಕೆ ಆರಂಭಿಸಿದರು. ಅವರು ತಮ್ಮ ಖಾಸಗಿ ಭಾಗಗಳನ್ನು ತೋರಿಸಲು ಯಾವುದೇ ಮುಜುಗರ ಮಾಡಿಕೊಳ್ಳುವುದಿಲ್ಲ. ಇತ್ತೀಚೆಗೆ ಒಳ ಉಡುಪು ಹಾಕದೆ ಡ್ರೆಸ್ ಹಾಕಿ ರಸ್ತೆಗೆ ಇಳಿದಿದ್ದ ವಿಡಿಯೋ ವೈರಲ್ ಆಗಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:45 am, Tue, 27 August 24