Urfi Javed: ಪಬ್ಲಿಕ್​ನಲ್ಲೇ ಜಾರಿದ ಉರ್ಫಿ ಜಾವೇದ್ ಸೀರೆ ಸೆರಗು: ಅಕ್ಕಾ ಸೇಫ್ಟಿ ಪಿನ್ ಹಾಕೊಳ್ಳಿ ಎಂದು ಸಲಹೆ ಕೊಟ್ಟ ನೆಟ್ಟಿಗರು

| Updated By: ಗಂಗಾಧರ​ ಬ. ಸಾಬೋಜಿ

Updated on: Dec 11, 2022 | 9:15 PM

ಉರ್ಫಿ ಜಾವೇದ್ ಅವರು ಸಾರ್ವಜನಿಕವಾಗಿ ಸೀರೆಯುಟ್ಟು ಕಾಣಿಸಿಕೊಂಡಿದ್ದು, ಆದರೆ ಸೀರೆ ಸೆರಗು ಮಾತ್ರ ಅವರ ಮೈಮೇಲೆ ನಿಲ್ಲದೆ ಪರದಾಡಿದ್ದಾರೆ.

Urfi Javed: ಪಬ್ಲಿಕ್​ನಲ್ಲೇ ಜಾರಿದ ಉರ್ಫಿ ಜಾವೇದ್ ಸೀರೆ ಸೆರಗು: ಅಕ್ಕಾ ಸೇಫ್ಟಿ ಪಿನ್ ಹಾಕೊಳ್ಳಿ ಎಂದು ಸಲಹೆ ಕೊಟ್ಟ ನೆಟ್ಟಿಗರು
Urfi Javed
Follow us on

ನಟಿ ಉರ್ಫಿ ಜಾವೇದ್ (Urfi Javed)​ ಬಗ್ಗೆ ಎಷ್ಟು ಹೇಳಿದರು ಅದು ಕಡಿಮೆಯೇ. ಅವರು ತಮ್ಮ ಅಸಾಂಪ್ರದಾಯಿಕ ಫ್ಯಾಷನ್​ ಬಟ್ಟೆಗಳನ್ನು ಧರಿಸುವುದರಿಂದ ಸದಾ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಉರ್ಫಿ ಜಾವೇದ್ ಅವರು ಪಾರದರ್ಶಕ ಉಡುಗೆಯನ್ನು ಧರಿಸಿ ಕ್ಯಾಮರಾಗಳಿಗೆ ಪೋಸ್​​ ನೀಡುವ ಮೂಲಕ ನೆಟ್ಟಿಗರ (Netizens) ಹುಬ್ಬೇರಿಸುವಂತೆ ಮಾಡಿದ್ದರು. ಇನ್ನು ಕೆಲವರು ನಟಿಯ ಬೋಲ್ಡ್​​ ಲುಕ್​ ನೋಡಿ ನಿಮ್ಮ ಧೈರ್ಯವನ್ನು ಮೆಚ್ಚಲೇಬೇಕು ಎಂದಿದ್ದರು. ಕೆಲ ಸೆಲಿಬ್ರಿಟಿಗಳು ಕೂಡ ಬಟ್ಟೆಯ ವಿಚಾರವಾಗಿ ಉರ್ಫಿ ಜಾವೇದ್ ಅವರನ್ನು ಫಾಲೋ ಮಾಡುತ್ತಿದ್ದಾರೆ. ಸದ್ಯ ಉರ್ಫಿ ಜಾವೇದ್ ಅವರು ಸೀರೆಯುಟ್ಟು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು, ಆದರೆ ಸೀರೆ ಸೆರಗು ಮಾತ್ರ ಅವರ ಮೈಮೇಲೆ ನಿಲ್ಲದೆ ಪರದಾಡಿದ್ದಾರೆ. ಈ ಕುರಿತಾಗಿ ಒಂದು ವಿಡಿಯೋ ವೈರಲ್​ ಆಗಿದೆ.

ನಟಿ ಉರ್ಫಿ ಜಾವೇದ್ ಅವರು ಈ ಹಿಂದೆ ಅನೇಕ ಸಂದರ್ಭಗಳಲ್ಲಿ ತಮ್ಮ ಬಟ್ಟೆ ವಿಚಾರವಾಗಿ ಹಲವರಿಂದ ಟೀಕಿಸಲ್ಪಟ್ಟಿದ್ದಾರೆ. ಸುನಿಲ್ ಪಾಲ್, ಹಿಂದೂಸ್ತಾನಿ ಭಾವು, ಚಾಹತ್ ಖನ್ನಾ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಕೂಡ ಉರ್ಫಿ ಜಾವೇದ್ ಅವರ ಬಗ್ಗೆ ಮಾತನಾಡಿದ್ದಾರೆ. ‘ಸ್ಪ್ಲಿಟ್ಸ್‌ವಿಲ್ಲಾ X4’ (Splitsvilla X4) ಶೋನ ಸ್ಪರ್ಧಿ ಸಾಕ್ಷಿ ದ್ವಿವೇದಿ ಅವರು ಕಾರ್ಯಕ್ರಮವೊಂದರಲ್ಲಿ ಉರ್ಫಿ ಜಾವೇದ್ ಅವರ ಬಗ್ಗೆ ಅವಹೇಳನಕಾರಿ ಟೀಕೆಗಳನ್ನು ಮಾಡಿದ್ದರು.

ಸದ್ಯ ಉರ್ಫಿ ಜಾವೇದ್ ಅವರು ವಿಮಾನ ನಿಲ್ದಾಣವೊಂದರಲ್ಲಿ ಪಾಪರಾಜಿಗಳ ಕ್ಯಾಮರಾಗೆ ಪೋಸ್ ನೀಡಿದ್ದಾರೆ. ಇದೇ ಮೊದಲ ಬಾರಿಗೆ ಉರ್ಫಿ ಜಾವೇದ್​ ಅವರು ಬಣ್ಣ ಬಣ್ಣದ ಸೀರೆಯುಟ್ಟು ಕಾಣಿಸಿಕೊಂಡಿದ್ದಾರೆ. ಆದರೆ ಕಹಾನಿ ಮೆ ಟ್ವಿಸ್ಟ್ ಎನ್ನುವಂತೆ ಸೀರೆಯ ಸೆರೆಗು ಮಾತ್ರ ಅವರ ಮೈಮೇಲೆ ನಿಲ್ಲುತ್ತಿಲ್ಲ. ಅವರು ಪ್ರತಿ ಬಾರಿ ಮೇಲೆ ಹಾಕೊಂಡಾಗಲು ಸೀರೆ ಸೆರಗು ಕೆಳಗೆ ಜಾರಿದೆ.

ಇದನ್ನೂ ಓದಿ: Urfi Javed: ಉರ್ಫಿ ಜಾವೇದ್​ ಜತೆ ಹಿಂದುಸ್ತಾನಿ ಭಾವು ಕಿರಿಕ್​; ಈ ರೀತಿ ಬಟ್ಟೆ ಧರಿಸಿದ್ದಕ್ಕೆ ನಟಿಗೆ ಬೆದರಿಕೆ

ಉರ್ಫಿ ಜಾವೇದ್ ಅವರ ಹೊಸ ಅವತಾರ ನೋಡಿದ ನೆಟ್ಟಿಗರು, ಮೊದಲೇ ನೀವು ಬಟ್ಟೆ ಹಾಕಿಕೊಳ್ಳುವುದಿಲ್ಲ. ಇವತ್ತು ಬಟ್ಟೆ ಹಾಕೊಂಡಿದ್ದರು ಅದನ್ನು ಸಂಭಾಳಿಸಲು ಆಗುತ್ತಿಲ್ಲವಲ್ಲ ಎಂದಿದ್ದಾರೆ. ಮತ್ತೊಬ್ಬ ನೆಟ್ಟಗರು ನಿಮಗೆ ಬಟ್ಟೆ ಹಾಕೊಂಡು ರೂಢಿಯಿಲ್ಲ. ಅದಕ್ಕೆ ಸೀರೆ ಸೆರಗು ಜಾರುತ್ತಿದೆ ಎಂದಿದ್ದಾರೆ. ಮತ್ತೆ ಓರ್ವರು ಅಕ್ಕಾ ಅಂಗಡಿಯಲ್ಲಿ ಸೇಫ್ಟಿ ಪಿನ್ ಅಂತ ಸಿಗುತ್ತದೆ, ಅದನ್ನು ಹಾಕೊಂಡರೆ ನಿಮ್ಮ ಸೀರೆ ಸೆರಗು ಜಾರುವುದಿಲ್ಲ ಎಂದು ಕಮೆಂಟ್​ ಮಾಡಿದ್ದಾರೆ.

ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.