ಅಮೆರಿಕದ ನೌಕಾಸೇನೆ ಅಧಿಕಾರಿಗಳ ಬಾಯಲ್ಲೂ ಬಾಲಿವುಡ್​​​ ಹಾಡು! ಇಲ್ಲಿದೆ ವೈರಲ್​ ವಿಡಿಯೋ

ಒಂದೂವರೆ ನಿಮಿಷ ಅವಧಿಯ ಈ ವಿಡಿಯೋ ಮೂರು ಲಕ್ಷಕ್ಕೂ ಅಧಿಕ ವ್ಯೂಸ್​ ಪಡೆದುಕೊಂಡಿದೆ. 26 ಸಾವಿರಕ್ಕೂ ಹೆಚ್ಚು ಲೈಕ್ಸ್​ ಸಿಕ್ಕಿವೆ. ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

ಅಮೆರಿಕದ ನೌಕಾಸೇನೆ ಅಧಿಕಾರಿಗಳ ಬಾಯಲ್ಲೂ ಬಾಲಿವುಡ್​​​ ಹಾಡು! ಇಲ್ಲಿದೆ ವೈರಲ್​ ವಿಡಿಯೋ
ಅಮೆರಿಕದ ನೌಕಾಸೇನೆ ಅಧಿಕಾರಿಗಳು
Edited By:

Updated on: Mar 29, 2021 | 8:02 PM

ಬಾಲಿವುಡ್​ ಸಿನಿಮಾ ಗೀತೆಗಳು ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತವೆ ಎಂಬುದನ್ನು ಹೊಸದಾಗಿ ಹೇಳಬೇಕಿಲ್ಲ. ಆದರೆ ಅಮೆರಿಕದ ನೌಕಾಸೇನೆಯ ಅಧಿಕಾರಿಗಳು ಕೂಡ ಹಿಂದಿ ಚಿತ್ರದ ಹಾಡುಗಳನ್ನು ಗುನುಗುತ್ತಾರೆ ಎಂಬುದು ಅಚ್ಚರಿಯ ವಿಚಾರ. ಹೌದು, ಅಮೆರಿಕದ ನೌಕಾಸೇನೆ​ ಅಧಿಕಾರಿಗಳು ಶಾರುಖ್​ ಖಾನ್​ ಸಿನಿಮಾದ ಒಂದು ಹಾಡನ್ನು ಹಾಡುತ್ತಿರುವ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್​ ಆಗಿದೆ.

ಅಮೆರಿಕದಲ್ಲಿ ಇರುವ ಭಾರತೀಯ ರಾಯಭಾರಿ ತರಂಜಿತ್​​ ಸಿಂಗ್​ ಅವರ ಜೊತೆ ಇತ್ತೀಚೆಗೆ ಯುಎಸ್​ ನೌಕಾಸೇನಾ ಅಧಿಕಾರಿಗಳ ಸಭೆ ನಡೆಯಿತು. ಆ ವೇಳೆ ಅಲ್ಲಿನ ಅಧಿಕಾರಿಗಳು ‘ಯೇ ಜೋ ದೇಶ್​ ತೇರಾ ಹೈ…’ ಹಾಡನ್ನು ಬಹಳ ಶಿಸ್ತಿನಿಂದ ಹಾಡಿದ್ದಾರೆ. ಅವರಿಗೆ ಸಂಗೀತ ವಾದ್ಯಗಳು ಸಾಥ್​ ನೀಡಿವೆ. ಇದು 2004ರಲ್ಲಿ ಬಿಡುಗಡೆಯಾದ ‘ಸ್ವದೇಸ್​’ ಸಿನಿಮಾದ ಗೀತೆ. ಶಾರುಖ್​ ಖಾನ್​ ನಟನೆಯ ಈ ಚಿತ್ರಕ್ಕೆ ಎ.ಆರ್​. ರೆಹಮಾನ್​ ಸಂಗೀತ ಸಂಯೋಜಿಸಿದ್ದರು.

ನೌಕಾಸೇನೆ ಅಧಿಕಾರಿಗಳು ಈ ಹಾಡನ್ನು ಗುನುಗುತ್ತಿರುವ ವಿಡಿಯೋವನ್ನು ತರಂಜಿತ್​ ಸಿಂಗ್ ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಒಂದೂವರೆ ನಿಮಿಷ ಅವಧಿಯ ಈ ವಿಡಿಯೋ ಮೂರು ಲಕ್ಷಕ್ಕೂ ಅಧಿಕ ವ್ಯೂಸ್​ ಪಡೆದುಕೊಂಡಿದೆ. 26 ಸಾವಿರಕ್ಕೂ ಹೆಚ್ಚು ಲೈಕ್ಸ್​ ಸಿಕ್ಕಿವೆ. ಸಾವಿರಾರು ಜನರು ಇದನ್ನು ಶೇರ್​ ಮಾಡಿಕೊಳ್ಳುತ್ತಿದ್ದು, ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

‘ಭಾರತ ಮತ್ತು ಅಮೆರಿಕದ ಈ ಸಂಬಂಧ ಎಂದಿಗೂ ಹಾಳಾಗಲು ಸಾಧ್ಯವಿಲ್ಲ’ ಎಂದು ತರಂಜಿತ್​ ಸಿಂಗ್ ಸಂದು ಬರೆದುಕೊಂಡಿದ್ದಾರೆ. ಈ ವಿಡಿಯೋ ವೈರಲ್​ ಆಗಿರುವುದು ಸಂಗೀತ ನಿರ್ದೇಶಕ ಎ.ಆರ್​. ರೆಹಮಾನ್​ ಅವರ ಗಮನಕ್ಕೂ ಬಂದಿದೆ. ಅವರು ಕೂಡ ಇದನ್ನು ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದು, ‘ಸ್ವದೇಸ್​ ಎಂದೆಂದಿಗೂ ಆಳ್ವಿಕೆ ನಡೆಸುತ್ತದೆ’ ಎಂದು ಕ್ಯಾಪ್ಷನ್​ ನೀಡಿದ್ದಾರೆ. ಬಾಲಿವುಡ್​ ಸಿನಿಪ್ರೇಮಿಗಳು ಈ ವಿಡಿಯೋಗೆ ಸಿಕ್ಕಾಪಟ್ಟೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.

ಇದನ್ನೂ ಓದಿ: ಅಣ್ಣಾವ್ರ ಹಾಡು ಹೇಳಿ ಕನ್ನಡಿಗರ ಮನ ಗೆದ್ದ ಬಾಲಿವುಡ್​ ನಟ ಗೋವಿಂದ! ಹರ್ಷಿಕಾ ಜತೆಗಿನ ವಿಡಿಯೋ ವೈರಲ್​

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us