AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದಂಕಿಯಲ್ಲಿ ಕುಂಟಿದ ‘ಉಸ್ತಾದ ಭಗತ್ ಸಿಂಗ್’ ಕಲೆಕ್ಷನ್; ‘ಹರಿ ಹರ ವೀರ ಮಲ್ಲು’ಗಿಂತ ಹೀನಾಯ

ಪವನ್ ಕಲ್ಯಾಣ್ ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಹೀನಾಯ ಪ್ರದರ್ಶನ ನೀಡಿದೆ. ನಾಲ್ಕು ದಿನಗಳಲ್ಲಿ 60 ಕೋಟಿ ಗಳಿಸಲು ವಿಫಲವಾಗಿದ್ದು, ಎರಡನೇ ದಿನದಿಂದ ಸಿಂಗಲ್ ಡಿಜಿಟ್ ಗಳಿಕೆಯಲ್ಲಿ ಕುಂಟುತ್ತಿದೆ. ‘ಧುರಂಧರ್ 2’ ಪ್ರಭಾವದಿಂದ ಹಾಗೂ ಶೋಗಳ ಸಂಖ್ಯೆ ಕಡಿತಗೊಂಡಿರುವುದರಿಂದ ಚಿತ್ರದ ಗಳಿಕೆ ಕುಸಿಯುತ್ತಿದೆ.

ಒಂದಂಕಿಯಲ್ಲಿ ಕುಂಟಿದ ‘ಉಸ್ತಾದ ಭಗತ್ ಸಿಂಗ್’ ಕಲೆಕ್ಷನ್; ‘ಹರಿ ಹರ ವೀರ ಮಲ್ಲು’ಗಿಂತ ಹೀನಾಯ
ಪವನ್
ರಾಜೇಶ್ ದುಗ್ಗುಮನೆ
|

Updated on: Mar 23, 2026 | 3:12 PM

Share

ಪವನ್ ಕಲ್ಯಾಣ್ ನಟನೆಯ ‘ಉಸ್ತಾದ ಭಗತ್ ಸಿಂಗ್’ ಸಿನಿಮಾದ ಗಳಿಕೆ ಹೀನಾಯ ಮಟ್ಟ ತಲುಪಿದೆ. ನಾಲ್ಕು ದಿನಕ್ಕೆ ಚಿತ್ರ ಅಂದುಕೊಂಡಷ್ಟು ಗಳಿಕೆ ಮಾಡಿಲ್ಲ. ನಾಲ್ಕು ದಿನಕ್ಕೆ 60 ಕೋಟಿ ರೂಪಾಯಿ ಗಳಿಕೆ ದಾಟಲು ಕೂಡ ಚಿತ್ರದ ಬಳಿ ಸಾಧ್ಯವಾಗಿಲ್ಲ. ಇನ್ನು, ಎರಡನೇ ದಿನದಿಂದ ಸಿಂಗಲ್ ಡಿಜಿಟಲ್​ನಲ್ಲೇ ಸಿನಿಮಾ ಕುಂಟುತ್ತಾ ಸಾಗುತ್ತಿದೆ. ಈ ಮೊದಲು ರಿಲೀಸ್ ಆಗಿ ಸೋತ ‘ಹರಿ ಹರ ವೀರ ಮಲ್ಲು’ ಚಿತ್ರಕ್ಕಿಂತ ಈ ಸಿನಿಮಾದ ಸ್ಥಿತಿ ಹೀನಾಯವಾಗಿದೆ.

‘ಧುರಂಧರ್ 2’ ಸಿನಿಮಾ ಸೂಪರ್ ಹಿಟ್ ಆಗಿದೆ. ಉತ್ತರ ಭಾರತ ಮಾತ್ರವಲ್ಲದೆ, ದಕ್ಷಿಣ ಭಾರತದಲ್ಲೂ ಸಿನಿಮಾ ಅಬ್ಬರಿಸುತ್ತಿದೆ. ಈ ಸಿನಿಮಾ ರಿಲೀಸ್ ಆದ ದಿನವೇ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ತೆರೆಗೆ ಬಂತು.‘ಧುರಂಧರ್ 2’ ಪ್ರಭಾವ ‘ಉಸ್ತಾದ್ ಭಗತ್ ಸಿಂಗ್’ ಮೇಲೆ ಆಗುತ್ತಿದೆ. ಪವನ್ ಚಿತ್ರ ಮೊದಲ ದಿನ 34 ಕೋಟಿ ರೂಪಾಯಿ ಗಳಿಕೆ ಮಾಡಿತು. ಆದರೆ, ದಿನ ಕಳೆದಂತೆ ಸಿನಿಮಾದ ಅಬ್ಬರ ಕಡಿಮೆ ಆಗಿದೆ. ಭಾನುವಾರವೂ ಚಿತ್ರ ಡಬಲ್ ಡಿಜಿಟ್ ಗಳಿಸಲು ಸಾಧ್ಯವಾಗುತ್ತಿಲ್ಲ.

ಭಾರತದಲ್ಲಿ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ 60 ಕೋಟಿ ರೂಪಾಯಿ ಗಳಿಸಿದೆ. ಮೊದಲ ದಿನ ಈ ಚಿತ್ರ 34 ಕೋಟಿ ರೂಪಾಯಿ ಗಳಿಸಿದ್ದಷ್ಟೇ ಬಂತು. ಶುಕ್ರವಾರ ಸಿನಿಮಾ 9 ಕೋಟಿ ರೂಪಾಯಿ ಗಳಿಸಿತು. ಶನಿವಾರ ಕೂಡ 9 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ವಿಚಿತ್ರ ಎಂದರೆ, ಭಾನುವಾರ ಕೂಡ ಚಿತ್ರಕ್ಕೆ 8 ಕೋಟಿ ರೂಪಾಯಿ ಗಳಿಕೆ ಆಗಿದೆ.

ಸಿನಿಮಾಗೆ ಮೊದಲ ದಿನ 4,607 ಶೋ ನೀಡಲಾಗಿದೆ. ಎರಡನೇ ದಿನ 3,447, ಮೂರನೇ ದಿನ 3,340 ಹಾಗೂ ಭಾನುವಾರ 3200 ಶೋಗಳನ್ನು ಮಾತ್ರ ನೀಡಲಾಗಿದೆ. ದಿನಕಳೆದಂತೆ ಸಿನಿಮಾಗೆ ಶೋಗಳ ಸಂಖ್ಯೆ ಕಡಿಮೆ ಮಾಡಲಾಗಿದೆ. ಇದನ್ನು ‘ಧುರಂಧರ್ 2’ ಚಿತ್ರಕ್ಕೆ ನೀಡಲಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: ಸದ್ದಿಲ್ಲದೆ ಒಟಿಟಿಗೆ ಬಂತು ‘ಹರಿ ಹರ ವೀರ ಮಲ್ಲು’: ಎಲ್ಲಿ ನೋಡಬಹುದು?

ಇತ್ತೀಚೆಗೆ ರಿಲೀಸ್ ಆದ ‘ಹರಿ ಹರ ವೀರ ಮಲ್ಲು’ ಚಿತ್ರ ಹೀನಾಯವಾಗಿ ಸೋತಿತ್ತು. ಈ ಸಿನಿಮಾ ಕೂಡ ಮೊದಲ ದಿನ 34 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಭಾನುವಾರ ರೀ ಚಿತ್ರದ ಗಳಿಕೆ ಕೊಂಚವಾದರೂ ಏರಿತ್ತು. ಆದರೆ, ‘ಉಸ್ತಾದ್ ಭಗತ್ ಸಿಂಗ್’ ಚಿತ್ರಕ್ಕೆ ಹಾಗಾಗುತ್ತಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಲೋಕಸಭೆಯಲ್ಲಿ ಮಧ್ಯಪ್ರಾಚ್ಯದ ಸಂಘರ್ಷದ ಕುರಿತು ಪ್ರಧಾನಿ ಮೋದಿ ಮಾತು
ಲೋಕಸಭೆಯಲ್ಲಿ ಮಧ್ಯಪ್ರಾಚ್ಯದ ಸಂಘರ್ಷದ ಕುರಿತು ಪ್ರಧಾನಿ ಮೋದಿ ಮಾತು
ವಾಣಿಜ್ಯ ಸಿಲಿಂಡರ್ ಬೇಕಿದ್ದರೆ ಒಂದು ವಾರದೊಳಗೆ ಈ ಕೆಲಸ ಮಾಡಿ!
ವಾಣಿಜ್ಯ ಸಿಲಿಂಡರ್ ಬೇಕಿದ್ದರೆ ಒಂದು ವಾರದೊಳಗೆ ಈ ಕೆಲಸ ಮಾಡಿ!
ಐವರು ಮಹಿಳೆಯರ ಜತೆ ದೈಹಿಕ ಸಂಪರ್ಕ ಬೆಳೆಸಿ ವಂಚಿಸಿದ ಖಾಸಗಿ ಕಂಪನಿ ಎಂಡಿ!
ಐವರು ಮಹಿಳೆಯರ ಜತೆ ದೈಹಿಕ ಸಂಪರ್ಕ ಬೆಳೆಸಿ ವಂಚಿಸಿದ ಖಾಸಗಿ ಕಂಪನಿ ಎಂಡಿ!
ಡ್ಯಾಶ್‌ಕ್ಯಾಮ್‌ನಲ್ಲಿ ಸೆರೆಯಾಯಿತು ಎದೆ ಝಲ್​​ ಎನಿಸೋ ದೃಶ್ಯ
ಡ್ಯಾಶ್‌ಕ್ಯಾಮ್‌ನಲ್ಲಿ ಸೆರೆಯಾಯಿತು ಎದೆ ಝಲ್​​ ಎನಿಸೋ ದೃಶ್ಯ
ವಿಮಾನ ನಿಲ್ದಾಣದ ರನ್​ವೇನಲ್ಲಿ ಟ್ರಕ್​ಗೆ ಡಿಕ್ಕಿ ಹೊಡೆದ ಏರ್ ಕೆನಡಾ ವಿಮಾನ
ವಿಮಾನ ನಿಲ್ದಾಣದ ರನ್​ವೇನಲ್ಲಿ ಟ್ರಕ್​ಗೆ ಡಿಕ್ಕಿ ಹೊಡೆದ ಏರ್ ಕೆನಡಾ ವಿಮಾನ
ರಸ್ತೆ ಹೇಗೆ ದಾಟ್ಬೇಕು ಗೊತ್ತಾ? ಮನುಷ್ಯರಿಗೇ ಪಾಠ ಹೇಳಿದ ಕಾಡಾನೆ ಹಿಂಡು!
ರಸ್ತೆ ಹೇಗೆ ದಾಟ್ಬೇಕು ಗೊತ್ತಾ? ಮನುಷ್ಯರಿಗೇ ಪಾಠ ಹೇಳಿದ ಕಾಡಾನೆ ಹಿಂಡು!
ಕಾಂಗ್ರೆಸ್ ಟಿಕೆಟ್​ ಅಸಮಾಧಾನ: ಬಿಜೆಪಿ ಸೇರಿದ 20ಕ್ಕೂ ಹೆಚ್ಚು ಮುಸ್ಲಿಮರು!
ಕಾಂಗ್ರೆಸ್ ಟಿಕೆಟ್​ ಅಸಮಾಧಾನ: ಬಿಜೆಪಿ ಸೇರಿದ 20ಕ್ಕೂ ಹೆಚ್ಚು ಮುಸ್ಲಿಮರು!
ಬಡವರಿಗೆ ‘ಸರಿಗಮಪ’ದಲ್ಲಿ ಮಣೆ ಎಂದವರಿಗೆ ಪ್ರೋಮೋದಲ್ಲೇ ಖಡಕ್ ಉತ್ತರ
ಬಡವರಿಗೆ ‘ಸರಿಗಮಪ’ದಲ್ಲಿ ಮಣೆ ಎಂದವರಿಗೆ ಪ್ರೋಮೋದಲ್ಲೇ ಖಡಕ್ ಉತ್ತರ
ತುಳಸಿ ಕಟ್ಟೆ ಪ್ರದಕ್ಷಿಣೆ ಹಾಗೂ ಇದರ ಮಹತ್ವವೇನು ಗೊತ್ತಾ?
ತುಳಸಿ ಕಟ್ಟೆ ಪ್ರದಕ್ಷಿಣೆ ಹಾಗೂ ಇದರ ಮಹತ್ವವೇನು ಗೊತ್ತಾ?
ಇಂದು ಈ ರಾಶಿಯ ಪತಿ-ಪತ್ನಿಯರಲ್ಲಿ ಭಿನ್ನಾಭಿಪ್ರಾಯ!
ಇಂದು ಈ ರಾಶಿಯ ಪತಿ-ಪತ್ನಿಯರಲ್ಲಿ ಭಿನ್ನಾಭಿಪ್ರಾಯ!