ವೈಷ್ಣವಿ ಅವರು ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ದಿನ ಮದುವೆ ವಿಚಾರ ಮಾತನಾಡಿದ್ದರು. ಮೊದಲ ಇನ್ನಿಂಗ್ಸ್ ಮುಗಿಸಿ ಹೊರ ಹೋದ ನಂತರದಲ್ಲಿ ಇದರ ಎಫೆಕ್ಟ್ ಗೊತ್ತಾಗಿದೆ. ಅವರಿಗೆ ಸಾಕಷ್ಟು ಮದುವೆ ಪ್ರಪೋಸಲ್ ಬಂದಿತ್ತು. ಈ ವಿಚಾರ ಕೇಳಿ ಸುದೀಪ್ ಶಾಕ್ ಆಗಿದ್ದಾರೆ.
ಬಿಗ್ ಬಾಸ್ ಮನೆ ಸೇರಿದ ವೈಷ್ಣವಿ ಗೌಡ ಎಲ್ಲರಿಗೂ ಇಷ್ಟವಾಗಿದ್ದರು. ಎಷ್ಟೇ ಕಷ್ಟದ ಸ್ಥಿತಿ ಬಂದರೂ ಅವರು ಸಿಟ್ಟು ಮಾಡಿಕೊಳ್ಳದೇ ಮೌನ ವಹಿಸಿದ್ದೇ ಹೆಚ್ಚು. ಇದು ಅನೇಕರಿಗೆ ಇಷ್ಟವಾಗಿದೆ. ಇದರ ಜತೆಗೆ ವೈಷ್ಣವಿ, ನಾನೂ ಒಂದು ಮದುವೆ ಆಗಬೇಕು ಎಂದು ಪದೇಪದೇ ಹೇಳಿದ್ದರು. ವೈಷ್ಣವಿ ಮನೆಯಿಂದ ಹೊರ ಬರುತ್ತಿದ್ದಂತೆಯೇ, ಸಾಕಷ್ಟು ಜನರು ಮದುವೆ ಆಗೋಕೆ ತುದಿಗಾಲಿನಲ್ಲಿ ನಿಂತಿದ್ದರು.
ಬಿಗ್ ಬಾಸ್ ಎರಡನೇ ಇನ್ನಿಂಗ್ಸ್ ಶುರುವಾಗುವುದಕ್ಕೂ ಮೊದಲು ಸುದೀಪ್ ವೇದಿಕೆ ಮೇಲೆ ವೈಷ್ಣವಿ ಅವರನ್ನು ಮಾತನಾಡಿಸಿದರು. ‘ಬಿಗ್ ಬಾಸ್ ಮನೆಯಲ್ಲಿ ನಾನು ಮದುವೆ ಆಗುತ್ತೇನೆ ಎಂದು ಹೇಳಿದ ವಿಚಾರ ನನ್ನ ಅಮ್ಮನಿಗೆ ಇಷ್ಟವಾಗಿಲ್ಲ. ನೋಡುವವರು ನಮಗೆ ಯಾವುದೇ ಜವಾಬ್ದಾರಿ ಇಲ್ಲ ಅಂದುಕೊಳ್ಳುತ್ತಾರೆ ಎಂಬುದಾಗಿ ಅಮ್ಮ ಹೇಳಿದ್ದಾರೆ’ ಎಂದರು ವೈಷ್ಣವಿ.
ಬಿಗ್ ಬಾಸ್ ಮನೆಯಿಂದ ಹೊರ ಹೋದ ಮೇಲೆ ಎಷ್ಟು ಪ್ರಪೋಸಲ್ ಬಂತು ಎಂದು ಸುದೀಪ್, ವೈಷ್ಣವಿಗೆ ಕೇಳಿದರು. ‘ನಾನು ಹೊರ ಹೋದಮೇಲೆ 200-300 ಮದುವೆ ಪ್ರಪೋಸಲ್ ಬಂತು. ಈ ಬಾರಿ ಮನೆಯಲ್ಲಿ ಮದುವೆ ಸುದ್ದಿ ಮಾತನಾಡಲ್ಲ. ಅಮ್ಮ ಬೇಜಾರು ಮಾಡ್ಕೋತಾರೆ’ ಎಂದರು ಅವರು. ವೈಷ್ಣವಿ ಮಾತನ್ನು ಕೇಳಿ ಸುದೀಪ್ ಅಚ್ಚರಿ ಹೊರ ಹಾಕಿದರು. ‘ಇಷ್ಟು ಪ್ರಪೋಸ್ನಲ್ಲಿ ಯಾರೂ ಇಷ್ಟವಾಗಿಲ್ಲವಾ’ ಎಂದು ಸುದೀಪ್ ಮರು ಪ್ರಶ್ನೆ ಎಸೆದರು., ‘ನಾನು ಯಾವ ಪ್ರಪೋಸಲ್ ಕೂಡ ನೋಡಿಲ್ಲ. ನಂಗೆ ಆ ವೈಬ್ ಸಿಕ್ಕಿಲ್ಲ’ ಎಂದು ವೈಷ್ಣವಿ ಮಾತು ಮುಗಿಸಿದರು.
ಇದನ್ನೂ ಓದಿ: 2 ಲಕ್ಷ ಮೌಲ್ಯದ ಬ್ರ್ಯಾಂಡೆಡ್ ಬ್ಯಾಗ್ ತಂದ ಬಿಗ್ ಬಾಸ್ ಸ್ಪರ್ಧಿ; ಸಿಟ್ಟಾದ ಅಮ್ಮ ಬ್ಯಾಗ್ ಹೇಗೆ ಎಸೆದ್ರು?
‘ಭಾಷಣ ಚೆನ್ನಾಗಿ ಮಾಡ್ತೀರಾ’; ಬಿಗ್ ಬಾಸ್ ವೇದಿಕೆ ಮೇಲೆ ದಿವ್ಯಾ ಉರುಡುಗಗೆ ಸುದೀಪ್ ಎಚ್ಚರಿಕೆ