ವೈಷ್ಣವಿಗೆ ತುರ್ತಾಗಿ ಗಂಡ ಬೇಕಂತೆ! ಬಿಗ್​ ಬಾಸ್​ ಮನೆಯಲ್ಲಿ ಸನ್ನಿಧಿಯ ಹೊಸ ಬೇಡಿಕೆ

ಬಿಗ್​ ಬಾಸ್​ ಮನೆ ಸೇರಿಕೊಂಡಿರುವ ಚಕ್ರವರ್ತಿ ಚಂದ್ರಚೂಡ್​ಗೆ ಭವಿಷ್ಯ ಹೇಳುವ ಕಲೆ ಗೊತ್ತಿದೆಯಂತೆ! ಹೀಗಾಗಿ, ಅವರು ಬಿಗ್​ ಬಾಸ್​ನ ಪ್ರತಿ ಸ್ಪರ್ಧಿ ಬಳಿ ಹೋಗಿ ಭವಿಷ್ಯ ಹೇಳಿದ್ದಾರೆ.

ವೈಷ್ಣವಿಗೆ ತುರ್ತಾಗಿ ಗಂಡ ಬೇಕಂತೆ! ಬಿಗ್​ ಬಾಸ್​ ಮನೆಯಲ್ಲಿ ಸನ್ನಿಧಿಯ ಹೊಸ ಬೇಡಿಕೆ
ವೈಷ್ಣವಿ ಗೌಡ
Edited By:

Updated on: Apr 12, 2021 | 8:46 AM

ವೈಷ್ಣವಿ ಗೌಡ ಬಿಗ್​ ಬಾಸ್​ ಮನೆಗೆ ಪ್ರವೇಶಿಸಿದ ಆರಂಭದ ದಿನಗಳಲ್ಲಿ ಸಾಕಷ್ಟು ಸೈಲೆಂಟ್​ ಆಗಿದ್ದರು. ನಂತರ ಅವರು ಕ್ರಶ್​ ಬಗ್ಗೆ ಹೇಳಿಕೊಂಡಿದ್ದರು. ಈಗ ಅವರು ಬಿಗ್​ ಬಾಸ್​ ಮನೆಯಲ್ಲಿ ಗಂಡ ಬೇಕು ಎಂದು ಗೋಗರೆಯುತ್ತಿದ್ದಾರೆ. ಇದನ್ನು ಕೇಳಿ ಎಲ್ಲರೂ ಅಚ್ಚರಿ ಹೊರ ಹಾಕಿದ್ದಾರೆ.

ಬಿಗ್​ ಬಾಸ್​ ಮನೆ ಸೇರಿಕೊಂಡಿರುವ ಚಕ್ರವರ್ತಿ ಚಂದ್ರಚೂಡ್​ಗೆ ಭವಿಷ್ಯ ಹೇಳುವ ಕಲೆ ಗೊತ್ತಿದೆಯಂತೆ! ಹೀಗಾಗಿ, ಅವರು ಬಿಗ್​ ಬಾಸ್​ನ ಪ್ರತಿ ಸ್ಪರ್ಧಿ ಬಳಿ ಹೋಗಿ ಭವಿಷ್ಯ ಹೇಳಿದ್ದಾರೆ.

ನಿಧಿ ಬಳಿ ಹೋಗಿ, ನಿಮಗೆ ಮದುವೆ ಆಗುತ್ತೆ. ಗಂಡು ಮಗು ಜನಿಸುತ್ತದೆ. ನಿಮ್ಮ ಹಾರ್ಟ್​ ತುಂಬಾನೇ ಒಳ್ಳೆಯದು. ವಯಸ್ಸು 80ರ ಮೇಲಾಗುತ್ತದೆ ಎಂದು ಚಂದ್ರಚೂಡ್​ ಭವಿಷ್ಯ ನುಡಿದರು. ಈ ವಿಚಾರವನ್ನು ಕೇಳಿ ನಿಧಿ ತುಂಬಾನೇ ಖುಷಿ ಆದರು.

ರಘು ಬಳಿ ಹೋಗಿ, ನಿನಗೆ ಯಾವುದರ ಮೇಲೂ ನಂಬಿಕೆ ಇಲ್ಲ. ರೇಖೆಗಳೇ ಇದನ್ನು ಹೇಳುತ್ತವೆ ಎಂದರು ಚಂದ್ರಚೂಡ್​. ಬ್ರೋ ಗೌಡ ಅವರದ್ದು ಜೂಜಿನ ಕೈ. ಜೂಜು ಆಡಿದರೆ ಹಣ ಬರುತ್ತದೆ ಎಂದರು ಅವರು. ಪ್ರಶಾಂತ್​ ಅವರನ್ನು ಮರಳುಗಾಡಿನಲ್ಲಿ ಬಿಟ್ಟರೂ ಅವರು ಮರಳಿ ಮಾರಿ ಬದುಕುತ್ತಾರೆ ಎಂದರು.

10 ಚಕ್ರದ ಹೆಣ್ಣುಮಗಳು ಯಾರು ಎಂದು ಕೇಳಿದರು ಚಂದ್ರಚೂಡ್​. ಇದಕ್ಕೆ ವೈಷ್ಣವಿ ನಾನೇ ಎಂದರು. ಆಗ ಮಾತನಾಡಿದ ಚಂದ್ರಚೂಡ್​, ನೀವು ಸಮಾಜಕ್ಕೆ ಒಳ್ಳೆಯದು ಮಾಡಬೇಕು. ದೇಶಕ್ಕಾಗಿ ದುಡಿಯಬೇಕು ಎಂದರು. ಆಗ ವೈಷ್ಣವಿ, ನನಗೆ ಮದುವೆ ಆಗಬೇಕು. ವಿವಾಹವಾಗಿ ದೇಶಸೇವೆ ಮಾಡಬಹುದೇ ಎಂದು ಕೇಳಿದರು. ನಿನಗೆ ಮದುವೆ ಆಗಲ್ಲ ಎಂದು ಚಂದ್ರಚೂಡ್​ ಕಡ್ಡಿ ಮುರಿದಂತೆ ಹೇಳಿದರು. ಆಗ ವೈಷ್ಣವಿ ನನಗೆ ಗಂಡ ಬೇಕು ಎಂದು ಹಠ ಹಿಡಿದರು. ಮದುವೆ ಮಾಡ್ಕೊಳ್ಳಮ್ಮ, ಯಾರು ಬೇಡ ಎಂದರು ಎಂದು ಚಂದ್ರಚೂಡ್​ ನಕ್ಕರು. ಇದನ್ನು ಕೇಳಿ ಮನೆ ಮಂದಿ ಎಲ್ಲರೂ ನಗೆ ಗಡಲಲ್ಲಿ ತೇಲಿದರು.

ಇದನ್ನೂ ಓದಿ:  ನಿಮ್ಮೇಲೆ ಕ್ರಶ್​ ಆಗಿದೆ; ವೈಷ್ಣವಿ ಎದುರು ಫೀಲಿಂಗ್ಸ್​ ಹೇಳಿಕೊಂಡ ರಘು!

Bigg Boss Kannada: ವೈಷ್ಣವಿ ಪ್ರೀತಿಸುತ್ತಿದ್ದ ಹುಡುಗ ಇನ್ನೊಬ್ಬಳ ಕೈಹಿಡಿದುಕೊಂಡು ಸಿಕ್ಕಿ ಬಿದ್ದಿದ್ದ! ಇದು ಸನ್ನಿಧಿ ಲವ್​ ಸ್ಟೋರಿ ರಹಸ್ಯ!

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us