AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನ್ನಡಕ್ಕೆ ಮೊದಲ ಬಾರಿ ಡಬ್​ ಆಯ್ತು ಗುಜರಾತಿ ಚಿತ್ರ; ಜುಲೈ 7ರಂದು ‘ರಾಯರು ಬಂದರು ಮಾವನ ಮನೆಗೆ’ ರಿಲೀಸ್

Rayaru Bandaru Mavana Manege: ಸಿನಿಮಾಗಳು ಈಗ ಭಾಷೆಯ ಗಡಿಯನ್ನು ಮೀರುತ್ತಿವೆ. ಬೇರೆ ಬೇರೆ ರಾಜ್ಯಗಳ ಚಿತ್ರರಂಗಗಳು ಡಬ್ಬಿಂಗ್​ ಮೊರೆ ಹೋಗುತ್ತಿವೆ. ಗುಜರಾತಿ ಭಾಷೆಯ ಸಿನಿಮಾ ಕೂಡ ಕನ್ನಡಕ್ಕೆ ಡಬ್​ ಆಗಿ ತೆರೆಗೆ ಬರಲು ಸಜ್ಜಾಗಿದೆ.

ಕನ್ನಡಕ್ಕೆ ಮೊದಲ ಬಾರಿ ಡಬ್​ ಆಯ್ತು ಗುಜರಾತಿ ಚಿತ್ರ; ಜುಲೈ 7ರಂದು ‘ರಾಯರು ಬಂದರು ಮಾವನ ಮನೆಗೆ’ ರಿಲೀಸ್
‘ರಾಯರು ಬಂದರು ಮಾವನ ಮನೆಗೆ’ ಸಿನಿಮಾ ಪೋಸ್ಟರ್​
ಮದನ್​ ಕುಮಾರ್​
|

Updated on: Jun 05, 2023 | 4:26 PM

Share

‘ರಾಯರು ಬಂದರು ಮಾವನ ಮನೆಗೆ’ ಎಂದ ತಕ್ಷಣ ‘ಮೈಸೂರು ಮಲ್ಲಿಗೆ’ ಸಿನಿಮಾ ನೆನಪಾಗುತ್ತದೆ. ಈಗ ‘ರಾಯರು ಬಂದರು ಮಾವನ ಮನೆಗೆ’ ಶೀರ್ಷಿಕೆಯಲ್ಲೊಂದು ಹೊಸ ಸಿನಿಮಾ ಬಿಡುಗಡೆ ಆಗಲು ಸಜ್ಜಾಗಿದೆ. ಹಾಗಂತ ಇದು ಕನ್ನಡದ ಸಿನಿಮಾ ಅಲ್ಲ! ವಿಶೇಷ ಏನಂದರೆ ಇದು ಗುಜರಾತಿ ಸಿನಿಮಾ (​Gujarati Movie). ‘ವರ್​ ಪಧಾರವೋ ಸಾವಧಾನ್​’ (​Var Padharavo Saavdhan) ಎಂಬುದು ಇದರ ಮೂಲ ಟೈಟಲ್. ಜುಲೈ​ 7ರಂದು ಈ ಚಿತ್ರ ಗುಜರಾತಿ ಭಾಷೆಯಲ್ಲಿ ಬಿಡುಗಡೆ ಆಗಲಿದೆ. ಇದೇ ಸಿನಿಮಾ ಕನ್ನಡಕ್ಕೂ ಡಬ್​ ಆಗಿದೆ. ಕನ್ನಡದಲ್ಲಿ ಈ ಸಿನಿಮಾಗೆ ‘ರಾಯರು ಬಂದರು ಮಾವನ ಮನೆಗೆ’ ಎಂದು ಶೀರ್ಷಿಕೆ ಇಡಲಾಗಿದೆ. ಇದು ಪ್ಯಾನ್​ ಇಂಡಿಯಾ ಸಿನಿಮಾಗಳ (​Pan India Cinema) ಕಾಲ. ಬೇರೆ ಬೇರೆ ಭಾಷೆಯ ಚಿತ್ರಗಳನ್ನು ಕನ್ನಡಕ್ಕೆ ಡಬ್​ ಆಗುತ್ತಿದೆ. ಅಚ್ಚರಿ ಎಂದರೆ ಇದೇ ಮೊದಲ ಬಾರಿಗೆ ಗುಜರಾತಿ ಭಾಷೆಯ ಸಿನಿಮಾ ಕನ್ನಡಕ್ಕೆ ಡಬ್​ ಆಗಿ ತೆರೆಕಾಣುತ್ತಿದೆ.

ಸಿನಿಮಾಗಳು ಈಗ ಭಾಷೆಯ ಗಡಿಯನ್ನು ಮೀರುತ್ತಿವೆ. ಬೇರೆ ಬೇರೆ ರಾಜ್ಯಗಳ ಚಿತ್ರರಂಗಗಳು ಡಬ್ಬಿಂಗ್​ ಮೊರೆ ಹೋಗುತ್ತಿವೆ. ಗುಜರಾತಿ ಭಾಷೆಯ ಸಿನಿಮಾ ಕೂಡ ಕನ್ನಡಕ್ಕೆ ಡಬ್​ ಆಗುವ ಕಾಲ ಈಗ ಬಂದಿದೆ. ‘ವರ್​ ಪಧಾರವೋ ಸಾವಧಾನ್​’ ಸಿನಿಮಾವನ್ನು ‘ರಾಯರು ಬಂದರು ಮಾವನ ಮನೆಗೆ’ ಶೀರ್ಷಿಕೆಯಡಿ ಕನ್ನಡಕ್ಕೆ ತರುತ್ತಿರುವುದು ನಿರ್ಮಾಪಕ ಜಾಕ್ ಮಂಜು. ‘ವಿಕ್ರಾಂತ್​ ರೋಣ’ ಸಿನಿಮಾ ನಿರ್ಮಾಣ ಮಾಡಿದ್ದ ಜಾಕ್​ ಮಂಜು ಅವರು ಕಿಚ್ಚ ಸುದೀಪ್​ಗೆ ಆಪ್ತರು. ತಮ್ಮ ‘ಶಾಲಿನಿ ಆರ್ಟ್ಸ್​’ ಬ್ಯಾನರ್ ಮೂಲಕ ‘ರಾಯರು ಬಂದರು ಮಾವನ ಮನೆಗೆ’ ಸಿನಿಮಾವನ್ನು ಅವರು ಕನ್ನಡದ ಪ್ರೇಕ್ಷಕರ ಎದುರು ತರುತ್ತಿದ್ದಾರೆ.

‘ರತ್ನಪುರ’, ‘ಜಿತಿ ಲೇ ಜಿಂದಗಿ’ ಎಂಬ ಎರಡು ಹಿಟ್ ಚಿತ್ರಗಳನ್ನು ನೀಡಿರುವ ವಿಫುಲ್ ಶರ್ಮಾ ನಿರ್ದೇಶನದಲ್ಲಿ ‘ರಾಯರು ಬಂದರು ಮಾವನ ಮನೆಗೆ’ ಚಿತ್ರ ತಯಾರಾಗಿದೆ. ಶೈಲೇಶ್ ಧಮೇಲಿಯಾ, ಅನಿಲ್ ಸಂಘವಿ, ಭರತ್ ಮಿಸ್ತ್ರೀ ಬಂಡವಾಳ ಹೂಡಿದ್ದಾರೆ. ಸಾಧು ತುಷಾರ್, ಕಿಂಜಲ್ ರಾಜಪ್ರಿಯಾ, ರಾಗಿ ಜಾನಿ ಮತ್ತು ಕಾಮಿನಿ ಪಾಂಚಾಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಪ್ರಶಾಂತ್ ಬರೋಟ್, ಜಯ್ ಪಾಂಡ್ಯ, ಜೈಮಿನಿ ತ್ರಿವೇದಿ ಮುಂತಾದವರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ.

ಇದನ್ನೂ ಓದಿ: Viduthalai Part 1: ಜನ ಮೆಚ್ಚಿದ ‘ವಿಡುದಲೈ’ ಸಿನಿಮಾ ಈಗ ಕನ್ನಡದಲ್ಲೂ ಲಭ್ಯ; ಜೀ5 ಒಟಿಟಿ ಮೂಲಕ ಪ್ರಸಾರ

ಕನ್ನಡದ ಪ್ರೇಕ್ಷಕರನ್ನು ತಲುಪಲು ಗುಜರಾತಿ ಚಿತ್ರತಂಡ ಸಕಲ ತಯಾರಿ ಮಾಡಿಕೊಂಡಿದೆ. ಜುಲೈ 7ರಂದು ಬಿಡುಗಡೆ ಆಗಲಿರುವ ಈ ಸಿನಿಮಾದ ಕುರಿತು ಮಾಹಿತಿ ಹಂಚಿಕೊಳ್ಳಲು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಅದರಲ್ಲಿ ಇಡೀ ತಂಡ ಭಾಗಿಯಾಗಲಿದೆ. ಜೂನ್​ 9ರಂದು ಸುದ್ದಿಗೋಷ್ಠಿ ನಡೆಯಲಿದ್ದು, ಅಂದು ಹೆಚ್ಚಿನ ವಿವರಗಳು ಸಿಗಲಿದೆ. ಕರುನಾಡಿನಲ್ಲಿ ಈ ಸಿನಿಮಾದ ಪ್ರಚಾರ ಕಾರ್ಯಕ್ಕೆ ವೇದಿಕೆ ಸಜ್ಜಾಗುತ್ತಿದೆ.

ಇದನ್ನೂ ಓದಿ: ಹಿಂದಿಗೆ ಡಬ್, ಮರಾಠಿಗೆ ರಿಮೇಕ್​ ಆದ ‘ಕನ್ನಡತಿ’: ಈ ಧಾರಾವಾಹಿಗೆ ಹೇಗಿದೆ ರೆಸ್ಪಾನ್ಸ್? ಇಲ್ಲಿದೆ ಉತ್ತರ

‘ರಾಯರು ಬಂದರು ಮಾವನ ಮನೆಗೆ’ ಚಿತ್ರವು ಫ್ಯಾಮಿಲಿ ಡ್ರಾಮಾ ಕಥಾಹಂದರ ಹೊಂದಿದೆ. ಮದುವೆ, ಕುಟುಂಬ, ಸಂಬಂಧಗಳ ಸುತ್ತ ಇಡೀ ಸಿನಿಮಾ ಸಾಗಲಿದೆ. ಗುಜರಾತಿ ಸಿನಿಮಾವೊಂದು ಕನ್ನಡದಲ್ಲಿ ಬಿಡುಗಡೆ ಆಗುತ್ತಿರುವುದು ಇದೇ ಮೊದಲು ಎಂಬ ಕಾರಣಕ್ಕೆ ಸಹಜವಾಗಿಯೇ ಕುತೂಹಲ ಮೂಡಿದೆ. ಈ ಚಿತ್ರಕ್ಕೆ ಕರುನಾಡಿನ ಪ್ರೇಕ್ಷಕರಿಂದ ಯಾವ ರೀತಿಯ ಪ್ರತಿಕ್ರಿಯೆ ಸಿಗಲಿದೆ ಎಂಬುದನ್ನು ಕಾದು ನೋಡಬೇಕು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಕೊನೆಗೂ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ
ಕೊನೆಗೂ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ