Varaha Roopam Song:: “ಕೋರ್ಟ್​ಗೆ ಹೋಗ್ತಿ… ಮೆಟ್ಟಿಲಲ್ಲಿ ತೀರ್ಮಾನ ನಾನು ಕೊಡ್ತೇನೆ” ವೈರಲ್ ಆಗುತ್ತಿದೆ ಕೋರ್ಟ್ ತೀರ್ಪು

| Updated By: ಅಕ್ಷಯ್​ ಪಲ್ಲಮಜಲು​​

Updated on: Nov 28, 2022 | 6:09 PM

ಹೌದು ಕಾಂತಾರದಲ್ಲಿ ಬರುವ "ಕೋರ್ಟ್​ಗೆ ಹೋಗ್ತಿ... ಮೆಟ್ಟಿಲಲ್ಲಿ ತೀರ್ಮಾನ ನಾನು ಕೊಡ್ತೇನೆ" ಎಂಬ ಡೈಲಾಗ್ ಇದೀಗ ಎಲ್ಲ ಕಡೆ ವೈರಲ್ ಆಗುತ್ತಿದೆ, ನಿನ್ನೆ ಕೇರಳದ ಸ್ಥಳೀಯ ಕೋರ್ಟ್ ನೀಡಿದ ತೀರ್ಪಿನ ಆಧಾರದಲ್ಲಿ ಈ ವಿಡಿಯೋ ಮತ್ತು ಫೋಸ್ಟರ್ ವೈರಲ್ ಆಗುತ್ತಿದೆ.

Varaha Roopam Song:: ಕೋರ್ಟ್​ಗೆ ಹೋಗ್ತಿ... ಮೆಟ್ಟಿಲಲ್ಲಿ ತೀರ್ಮಾನ ನಾನು ಕೊಡ್ತೇನೆ ವೈರಲ್ ಆಗುತ್ತಿದೆ ಕೋರ್ಟ್ ತೀರ್ಪು
Viral News
Follow us on

ಕಾಂತಾರ” ಸಿನಿಮಾ (Kantara Movie) ದೇಶ – ವಿದೇಶಗಳ ಸಿನಿಮಾ ರಂಗವನ್ನೇ ಒಂದು ಬಾರಿ ಮುಟ್ಟಿ ನೋಡಿಕೊಳ್ಳುವಂತೆ ಮಾಡಿ. ಕಾಂತಾರದ ಯಶಸ್ಸು ಕನ್ನಡ ಸಿನಿಮಾ ರಂಗದ ಒಂದು ದೊಡ್ಡ ಸಾಧನೆ, ಭಾರತದ ಎಲ್ಲ ಭಾಷೆಯ ಸಿನಿಮಾಗಳಿಗೆ ಮಾದರಿಯಾಗಿ ನಿಂತಿದೆ ಕಾಂತಾರ ಸಿನಿಮಾ, ಕನ್ನಡದಲ್ಲಿ ಒಂದು ಹೊಸ ಅಧ್ಯಾಯವನ್ನು ಸೃಷ್ಟಿ ಮಾಡಿದೆ. ಕಾಂತಾರಕ್ಕೆ ಸಿಕ್ಕ ಯಶಸ್ಸು ಕನ್ನಡ ಚಿತ್ರರಂಗದಲ್ಲಿ ಒಂದು ಹೊಸ ಭರವಸೆಯನ್ನೇ ಮೂಡಿಸಿದೆ.

ಯಶಸ್ಸಿನ ಹಾದಿಯಲ್ಲಿರುವ ಕಾಂತಾರಕ್ಕೆ ಒಂದಿಷ್ಟು ಸಂಕಷ್ಟಗಳು ಎದುರಾಗಿತ್ತು, ಅದು ಆ ಸಿನಿಮಾದಲ್ಲಿ ಬರುವ “ವರಾಹ ರೂಪಂ” ಹಾಡು, ‘ಕಾಂತಾರ’ ಚಿತ್ರದ ‘ವರಾಹ ರೂಪಂ..’ ಹಾಡು ‘ತೈಕ್ಕುಡಂ ಬ್ರಿಡ್ಜ್​​’ ಬ್ಯಾಂಡ್​ನ ‘ನವರಸಂ..’ ಹಾಡಿನ ಟ್ಯೂನ್ ಅನ್ನು ‘ವರಾಹ ರೂಪಂ..’ನಲ್ಲಿ ಬಳಕೆ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು. ‘ತೈಕ್ಕುಡಂ ಬ್ರಿಡ್ಜ್​’ನವರು ಕೇರಳದ ಕೋಯಿಕ್ಕೋಡ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್​ ‘ವರಾಹ ರೂಪಂ..’ (Varaha Roopam..) ಹಾಡನ್ನು ಪ್ರಸಾರ ಮಾಡದಂತೆ ಮಧ್ಯಂತರ ತಡೆಯಾಜ್ಞೆ ಆದೇಶ ಹೊರಡಿಸಿತ್ತು. ಈ ಸಂಬಂಧ ‘ಹೊಂಬಾಳೆ ಫಿಲ್ಮ್ಸ್’ ಮೇಲ್ಮನವಿ ಸಲ್ಲಿಕೆ ಮಾಡಿತ್ತು. ಇದೀಗ ಕೋರ್ಟ್ ತೀರ್ಪು ಕಾಂತಾರದ ಕಡೆಯಾಗಿದೆ.

ಇದನ್ನು ಓದಿ:Varaha Roopam Song: ‘ವರಾಹ ರೂಪಂ.. ಹಾಡು ಬಳಕೆ ಮಾಡಬಹುದು’; ಕೇರಳ ಕೋರ್ಟ್​ನಿಂದ ಹೊಸ ಆದೇಶ

ಈ ತೀರ್ಪು ಭಾರೀ ವೈರಲ್ ಆಗುತ್ತಿದೆ, ಹೌದು ಕಾಂತಾರದಲ್ಲಿ ಬರುವ “ಕೋರ್ಟ್​ಗೆ ಹೋಗ್ತಿ… ಮೆಟ್ಟಿಲಲ್ಲಿ ತೀರ್ಮಾನ ನಾನು ಕೊಡ್ತೇನೆ” ಎಂಬ ಡೈಲಾಗ್ ಇದೀಗ ಎಲ್ಲ ಕಡೆ ವೈರಲ್ ಆಗುತ್ತಿದೆ, ನಿನ್ನೆ ಕೇರಳದ ಸ್ಥಳೀಯ ಕೋರ್ಟ್ ನೀಡಿದ ತೀರ್ಪಿನ ಆಧಾರದಲ್ಲಿ ಈ ವಿಡಿಯೋ ಮತ್ತು ಫೋಸ್ಟರ್ ವೈರಲ್ ಆಗುತ್ತಿದೆ. ಕಾಂತಾರದ ಈ ಡೈಲಾಗ್ ಭಾರೀ ಸಂಚಲನವನ್ನು ಸೃಷ್ಟಿ ಮಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಚರ್ಚೆಗಳನ್ನು ಸೃಷ್ಟಿ ಮಾಡಿದೆ. ಕೋರ್ಟ್​ಗೆ ಹೋಗ್ತಿ… ಮೆಟ್ಟಿಲಲ್ಲಿ ತೀರ್ಮಾನ ನಾನು ಕೊಡ್ತೇನೆ ಎಂಬ ಡೈಲಾಗ್ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಸೃಷ್ಟಿ ಮಾಡಿದಲ್ಲದೆ, ಇದು ಕಾಂತಾರದ ಗೆಲುವು ಎಂದು ಹೇಳಿದ್ದಾರೆ.

ಕೋರ್ಟ್ ತೀರ್ಪಿನಲ್ಲಿ ಏನಿತು?

‘ನವರಸಂ..’ ಹಾಡಿನಲ್ಲಿರುವ ಟ್ಯೂನ್​ ‘ವರಾಹ ರೂಪಂ..’ನಲ್ಲಿ ಬಳಕೆ ಆಗಿದೆ ಎಂಬ ಅಭಿಪ್ರಾಯವನ್ನು ಪ್ರೇಕ್ಷಕರು ನೀಡಿದರು. ಇದನ್ನು ಗಂಭೀರವಾಗಿ ಸ್ವೀಕರಿಸಿದ ‘ತೈಕ್ಕುಡಂ ಬ್ರಿಡ್ಜ್​​’ ಕೇಸ್ ದಾಖಲು ಮಾಡಿತ್ತು. ಅರ್ಜಿ ವಿಚಾರಣೆ ನಡೆಸಿದ್ದ ಕೇರಳದ ‘ಕೋಯಿಕ್ಕೋಡ್​ ನ್ಯಾಯಾಲಯ..’ ‘ವರಾಹ ರೂಪಂ..’ ಹಾಡಿಗೆ ತಡೆ ನೀಡಿತ್ತು. ಒಪ್ಪಿಗೆ ಇಲ್ಲದೆ ಹಾಡನ್ನು ಬಳಕೆ ಮಾಡುವಂತಿಲ್ಲ ಎಂದು ಹೇಳಿತ್ತು. ಈಗ ನ್ಯಾಯಾಲಯ ಹೊಸ ಆದೇಶ ಹೊರಡಿಸಿದೆ. ಇದರಿಂದ ಚಿತ್ರತಂಡಕ್ಕೆ ರಿಲೀಫ್ ಸಿಕ್ಕಿದೆ.

ವರಾಹ ರೂಪಂ..’ ಹಾಡು ‘ಕಾಂತಾರ’ ಕ್ಲೈಮ್ಯಾಕ್ಸ್​ನಲ್ಲಿ ಬರುತ್ತದೆ. ಈ ಸಾಂಗ್ ಸಾಕಷ್ಟು ಗಮನ ಸೆಳೆದಿತ್ತು. ಹಾಡನ್ನು ಕೇಳಿ ಎಲ್ಲರೂ ಥ್ರಿಲ್ ಆಗಿದ್ದರು. ಕೋರ್ಟ್​ನಿಂದ ಹಾಡಿಗೆ ತಡೆ ಬಿದ್ದಿದ್ದ ಕಾರಣ ಪ್ರೈಮ್​​ನಲ್ಲಿ ಪ್ರಸಾರಕಂಡ ವರ್ಷನ್​​ನಲ್ಲಿ ಹಾಡಿನ ಟೋನ್ ಬದಲಿಸಲಾಗಿದೆ. ‘ವರಾಹ ರೂಪಂ..’ ಹಾಡಿನ ಟೋನ್​ನಲ್ಲಿ ಸಣ್ಣಪುಟ್ಟ ಬದಲಾವಣೆ ಮಾಡಲಾಗಿದೆ. ಇದನ್ನು ಕೇಳಿ ಪ್ರೇಕ್ಷಕರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ಈ ಹಾಡನ್ನು ಮೆಚ್ಚಿಕೊಂಡರೆ, ಇನ್ನೂ ಕೆಲವರು ಹೊಸ ಹಾಡಿನ ಬಗ್ಗೆ ಅಪಸ್ವರ ತೆಗೆದಿದ್ದಾರೆ. ಕೋರ್ಟ್​ನಲ್ಲಿ ನಡೆಯುತ್ತಿರುವ ಕೇಸ್ ವಿಚಾರದಲ್ಲಿ ಹೊಂಬಾಳೆ ಫಿಲ್ಮ್ಸ್​ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

Published On - 11:59 am, Sat, 26 November 22