ಸಂಕಷ್ಟದಲ್ಲಿ ಖ್ಯಾತ ನಿರ್ಮಾಣ ಸಂಸ್ಥೆ; ಇದೆ 31 ಲಕ್ಷ ರೂಪಾಯಿ ಬಾಕಿ

| Updated By: ರಾಜೇಶ್ ದುಗ್ಗುಮನೆ

Updated on: Jun 29, 2024 | 12:35 PM

‘ಮಿಷನ್ ರಾಣಿಗಂಜ್’ ನಿರ್ದೇಶಕ ಟೀನು ದೇಸಾಯಿಗೆ ನೀಡಬೇಕಿದ್ದ 33.13 ಲಕ್ಷ ರೂಪಾಯಿ ಹಣವನ್ನು ಪೂಜಾ ಎಂಟರ್​ಟೇನ್​ಮೆಂಟ್ ಬಾಕಿ ಉಳಿಸಿಕೊಂಡಿದೆ. ಇದರ ಜೊತೆಗೆ 250 ಸಿಬ್ಬಂದಿಗೆ ಒಟ್ಟೂ 31.78 ಲಕ್ಷ ರೂಪಾಯಿ ಹಣವನ್ನು ಅವರು ಪಾವತಿ ಮಾಡಬೇಕಿದೆ. ಮೊದಲಿನಿಂದಲೂ ಈ ಬಗ್ಗೆ ಬೇಡಿಕೆ ಇಡುತ್ತಾ ಬಂದರೂ ಅವರು ಇದನ್ನು ಪಾವತಿಸೋಕೆ ಮುಂದಾಗಿಲ್ಲ.

ಸಂಕಷ್ಟದಲ್ಲಿ ಖ್ಯಾತ ನಿರ್ಮಾಣ ಸಂಸ್ಥೆ; ಇದೆ 31 ಲಕ್ಷ ರೂಪಾಯಿ ಬಾಕಿ
ವಶು-ಅಕ್ಷಯ್
Follow us on

ಬಾಲಿವುಡ್​ನ ಖ್ಯಾತ ನಿರ್ಮಾಣ ಸಂಸ್ಥೆ ‘ಪೂಜಾ ಎಂಟರ್​ಟೇನ್​ಮೆಂಟ್’ ಸಂಕಷ್ಟದಲ್ಲಿ ಇದೆ. ಈ ಸಂಸ್ಥೆಯ ಒಡೆಯ ವಶು ಭಗ್ನಾನಿ ಅವರು ಈ ವರದಿಯನ್ನು ಅಲ್ಲಗಳೆಯುತ್ತಲೇ ಬರುತ್ತಿದ್ದಾರೆ. ಆದರೆ, ಈ ಸಂಸ್ಥೆ ತುಂಬಾನೇ ದೊಡ್ಡ ತೊಂದರೆಯಲ್ಲಿ ಇದೆ ಎನ್ನಲಾಗಿದೆ. ‘ಮಿಷನ್ ರಾಣಿಗಂಜ್’ ನಿರ್ದೇಶಕ ಟೀನು ದೇಸಾಯಿಗೆ ಇನ್ನೂ ಪೂರ್ತಿ ಹಣ ಕೊಟ್ಟಿಲ್ಲ.  ಇದರ ಜೊತೆಗೆ ‘ಮಿಷನ್ ರಾಣಿಗಂಜ್’, ‘ಬಡೇ ಮೊಯಾ ಚೋಟೆ ಮಿಯಾ’ ತಂಡದಲ್ಲಿ ಕೆಲಸ ಮಾಡಿದವರಿಗೂ ಹಣ ಸಿಕ್ಕಿಲ್ಲ.

ಟೀನು ದೇಸಾಯಿಗೆ ನೀಡಬೇಕಿದ್ದ 33.13 ಲಕ್ಷ ರೂಪಾಯಿ ಹಣವನ್ನು ಪೂಜಾ ಎಂಟರ್​ಟೇನ್​ಮೆಂಟ್ ಬಾಕಿ ಉಳಿಸಿಕೊಂಡಿದೆ. ಇದರ ಜೊತೆಗೆ 250 ಸಿಬ್ಬಂದಿಗೆ ಒಟ್ಟೂ 31.78 ಲಕ್ಷ ರೂಪಾಯಿ ಹಣವನ್ನು ಅವರು ಪಾವತಿ ಮಾಡಬೇಕಿದೆ. ಮೊದಲಿನಿಂದಲೂ ಈ ಬಗ್ಗೆ ಬೇಡಿಕೆ ಇಡುತ್ತಾ ಬಂದರೂ ಅವರು ಇದನ್ನು ಪಾವತಿಸೋಕೆ ಮುಂದಾಗಿಲ್ಲ. ಈ ಬಗ್ಗೆ ದೂರು ಕೂಡ ದಾಖಲಾಗಿದೆ.

ಮಾರ್ಚ್​ 2023ರಲ್ಲಿ ‘ಮಿಷನ್ ರಾಣಿಗಂಜ್​’ ನಿರ್ದೇಶಕ ಟೀನು ದೇಸಾಯಿ ಅವರು ದೂರು ದಾಖಲು ಮಾಡಿದರು. ಬಾಕಿ ಹಣ ಪಾವತಿಸುತ್ತಿಲ್ಲ ಎಂದು ದೂರು ನೀಡಿದ್ದರು. ನಿರ್ದೇಶನಕ್ಕೆ ಅವರಿಗೆ 4.03 ಕೋಟಿ ರೂಪಾಯಿ ಬರಬೇಕಿತ್ತು. ಆದರೆ, ಸಿಕ್ಕಿದ್ದು 3.70 ಕೋಟಿ ರೂಪಾಯಿ ಮಾತ್ರ. ಹೀಗಾಗಿ ಬಾಕಿ ಹಣ ಪಾವತಿಸುವಂತೆ ಅವರು ಪದೇ ಪದೇ ಕೇಳಿಕೊಂಡಿದ್ದರು.

ವಶು ಭಗ್ನಾನಿ ಅವರು ಇತ್ತೀಚೆಗೆ ಮಗ ಜಾಕಿ ಭಗ್ನಾನಿ ಮದುವೆಯನ್ನು ಅದ್ದೂರಿಯಾಗಿ ಮಾಡಿದ್ದರು. ಇದನ್ನು ಉಲ್ಲೇಖಿಸಿ ಸಿಬ್ಬಂದಿ ದೂರು ನೀಡುತ್ತಿದ್ದಾರೆ. ಆದಾಗ್ಯೂ ವಶು ಅವರ ಕಡೆಯಿಂದ ಯಾವುದೇ ಉತ್ತರ ಸಿಕ್ಕಿಲ್ಲ. ‘ಬಡೇ ಮಿಯಾ ಚೋಟೆ ಮಿಯಾ’ ಸಿನಿಮಾ ರಿಲೀಸ್ ಆದ ಬಳಿಕ ಹಣ ನೀಡೋ ಭರವಸೆ ನೀಡಲಾಗಿತ್ತು. ಆದರೆ, ಈ ಚಿತ್ರವೂ ಸೋತಿರುವುದರಿಂದ ಪೂಜಾ ಎಂಟರ್​ಟೇನ್​ಮೆಂಟ್ ಮತ್ತಷ್ಟು ತೊಂದರೆಗೆ ಸಿಲುಕಿದೆ.

ಇದನ್ನೂ ಓದಿ: ಇನ್ನಷ್ಟು ಗ್ಲಾಮರಸ್​ ಆಗಿ ಕಾಣಿಸಿಕೊಂಡ ‘ಅರ್ಜುನ್​ ರೆಡ್ಡಿ’ ನಟಿ ಶಾಲಿನಿ ಪಾಂಡೆ

ಪೂಜಾ ಎಂಟರ್​ಟೇನ್​ಮೆಂಟ್ ಸ್ವಂತ ಕಚೇರಿಯನ್ನು ಮಾರಿ 250 ಕೋಟಿ ರೂಪಾಯಿ ಸೆಟಲ್ ಮಾಡಲಾಗಿದೆ ಎಂದು ವರದಿ ಆಗಿದೆ. ಶೇ. 80 ಸಿಬ್ಬಂದಿಯನ್ನು ಕಂಪನಿಯಿಂದ ತೆಗೆಯಲಾಗಿದೆ ಎನ್ನಲಾಗಿದೆ. ಆದರೆ, ಇದೆಲ್ಲವನ್ನೂ ವಶು ಅವರು ಅಲ್ಲಗಳೆಯುತ್ತಿದ್ದಾರೆ. ತಾವು ಸಂಕಷ್ಟದಲ್ಲಿ ಇಲ್ಲ ಎಂದು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:47 am, Sat, 29 June 24