Vasishta – Haripriya: ಶೂಟಿಂಗ್ ಸೆಟ್​​ನಲ್ಲಿ ಜತೆಯಾಗಿ ಕಾಣಿಸಿಕೊಂಡ ವಸಿಷ್ಠ ಸಿಂಹ – ಹರಿಪ್ರಿಯ

| Updated By: ಅಕ್ಷಯ್​ ಪಲ್ಲಮಜಲು​​

Updated on: Dec 10, 2022 | 11:33 AM

ತಮ್ಮ ನಿಶ್ಚಿತಾರ್ಥ ಸಂಭ್ರಮದ ನಂತರ ಶೂಟಿಂಗ್ ಸೆಟ್​ಗೆ ಹರಿಪ್ರಿಯ ಎಂಟ್ರಿ ನೀಡಿದ್ದಾರೆ. ಶೂಟಿಂಗ್​​ನಲ್ಲಿ ಬ್ಯೂಸಿಯಾಗಿರುವ ವಸಿಷ್ಠ. ಲವ್ ಲಿ ಸಿನಿಮಾ ಮೂಲಕ ಸಖತ್ ಆಗಿ ಎಂಟ್ರಿ ನೀಡಿದ್ದಾರೆ. love ಲಿ ಸಿನೆಮಾ ಚಿತ್ರೀಕರಣ ಉಡುಪಿಯಲ್ಲಿ ನಡೆಯುತ್ತಿದ್ದು, ಸೆಟ್​​ಗೆ ಹರಿಪ್ರಿಯ ಬಂದಿದ್ದು, ಅಲ್ಲಿ ಹರಿಪ್ರಿಯ ಕುಶಲೋಪರಿ ವಿಚಾರಿಸಿದ್ದಾರೆ.

Vasishta - Haripriya: ಶೂಟಿಂಗ್ ಸೆಟ್​​ನಲ್ಲಿ ಜತೆಯಾಗಿ ಕಾಣಿಸಿಕೊಂಡ ವಸಿಷ್ಠ ಸಿಂಹ - ಹರಿಪ್ರಿಯ
Vasishta - Haripriya
Follow us on

ಇತ್ತೀಚೆಗಷ್ಟೇ ನಿಶ್ಚಿತಾರ್ಥದ ಮಾಡಿಕೊಂಡ ವಸಿಷ್ಠ ಸಿಂಹ (Vasishta Simha) ಶೂಟಿಂಗ್ ಮೂಡ್​ನಲ್ಲಿದ್ದಾರೆ. ತಮ್ಮ ನಿಶ್ಚಿತಾರ್ಥ ಸಂಭ್ರಮದ ನಂತರ ಶೂಟಿಂಗ್ ಸೆಟ್​ಗೆ ಹರಿಪ್ರಿಯ (Haripriya) ಎಂಟ್ರಿ ನೀಡಿದ್ದಾರೆ. ಶೂಟಿಂಗ್​​ನಲ್ಲಿ ಬ್ಯೂಸಿಯಾಗಿರುವ ವಸಿಷ್ಠ. ಲವ್ ಲಿ ಸಿನಿಮಾ ಮೂಲಕ ಸಖತ್ ಆಗಿ ಎಂಟ್ರಿ ನೀಡಿದ್ದಾರೆ. love ಲಿ ಸಿನಿಮಾ ಚಿತ್ರೀಕರಣ ಉಡುಪಿಯಲ್ಲಿ ನಡೆಯುತ್ತಿದ್ದು, ಸೆಟ್​​ಗೆ ಹರಿಪ್ರಿಯ ಬಂದಿದ್ದು, ಅಲ್ಲಿ ಹರಿಪ್ರಿಯ ಕುಶಲೋಪರಿ ವಿಚಾರಿಸಿದ್ದಾರೆ.

ಚೇತನ್ ಕೇಶವ್ ನಿರ್ದೇಶನದ ಲವ್ ಲಿ ಸಿನಿಮಾ ಈಗಾಗಲೇ ಸಖತ್ ಸೌಂಡ್ ಮಾಡುತ್ತಿದೆ. ವಸಿಷ್ಠ ಸಿಂಹ ಅವರ ಹೊಸ ಸಿನಿಮಾ ‘Love..ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ನಟ ವಸಿಷ್ಠ ಸಿಂಹ ಅವರು ಹಲವು ಚಿತ್ರಗಳಲ್ಲಿ ಬ್ಯುಸಿ ಆಗಿದ್ದಾರೆ. ನಾಯಕ ನಟನಾಗಿ, ಖಳನಟನಾಗಿ, ಗಾಯಕನಾಗಿ, ಆಡಿಯೋ ಕಂಪನಿ ಮಾಲಿಕನಾಗಿ.. ಹೀಗೆ ಅವರು ಹಲವು ಕೆಲಸಗಳಲ್ಲಿ ಅವರು ತೊಡಗಿಕೊಂಡಿದ್ದಾರೆ. ಇದೀಗ Love..ಲಿ ಸಿನಿಮಾದಲ್ಲಿ ಅವರು ಹೀರೋ ಆಗಿ ನಟಿಸುತ್ತಿದ್ದಾರೆ. ಶೀರ್ಷಿಕೆ ಮೂಲಕವೇ ಈ ಚಿತ್ರ ಗಮನ ಸೆಳೆದಿದೆ. ಕೆಲವೇ ದಿನಗಳ ಹಿಂದೆ ಈ ಸಿನಿಮಾಗೆ ಮುಹೂರ್ತ ನೆರವೇರಿಸಲಾಗಿತ್ತು.

ಇದನ್ನು ಓದಿ:ಹರಿಪ್ರಿಯಾ-ವಸಿಷ್ಠ ಸಿಂಹ ಎಂಗೇಜ್​ಮೆಂಟ್ ಫೋಟೋಸ್ ಇಲ್ಲಿವೆ

ವಸಿಷ್ಠ ಸಿಂಹ ಅವರ ಲುಕ್​ ನೋಡಿ ಫ್ಯಾನ್ಸ್​ ಫಿದಾ ಆಗಿದ್ದರು. ಈ ಸಿನಿಮಾದ ಪೋಸ್ಟರ್​ ಸಖತ್ ಸುದ್ದಿ ಮಾಡುತ್ತಿದೆ. ‘Love..ಲಿ’ ಸಿನಿಮಾದ ಕಥೆಯ ಬಗ್ಗೆ ಭಾರಿ ಕೌತುಕ ಮೂಡಿಸುವಲ್ಲಿ ಈ ಪೋಸ್ಟರ್​ ಯಶಸ್ವಿ ಆಗಿದೆ. ಎಲ್ಲ ಬಗೆಯ ಪಾತ್ರಗಳಿಗೂ ಸೈ ಎಂಬಂತಿರುವ ನಟ ವಸಿಷ್ಠ ಸಿಂಹ. ಈಗಾಗಲೇ ಅವರು ಅನೇಕ ಸಿನಿಮಾಗಳ ಮೂಲಕ ಜನಮೆಚ್ಚುಗೆ ಗಳಿಸಿದ್ದಾರೆ. Love..ಲಿ ಅಭಿಮಾನಿಗಳಲ್ಲಿ ಒಂದು ಸಂಭ್ರಮ ಸೃಷ್ಟಿ ಮಾಡಿದೆ.

ವಸಿಷ್ಠ ಅವರು Love..ಲಿ ಚಿತ್ರೀಕರಣಕ್ಕಾಗಿ ಉಡುಪಿಗೆ ಬಂದಿದ್ದಾರೆ ಜೊತೆಗೆ ಹರಿಪ್ರಿಯ ನಿಶ್ಚಿತಾರ್ಥದ ನಂತರ ವಸಿಷ್ಠ ಅವರ ಶೂಟಿಂಗ್ ಸೆಟ್​ಗೆ ಬಂದಿದ್ದಾರೆ, ಅಲ್ಲಿ ಸಿನಿಮಾ ಇತರರ ಜೊತೆಗೆ ಮಾತಕಥೆಗಳನ್ನು ನಡೆಸಿದ್ದಾರೆ, ಜೊತೆಗೆ ಸಿನಿಮಾಕ್ಕೆ ಶುಭ ಹಾರೈಸಿದ್ದಾರೆ.

ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 11:29 am, Sat, 10 December 22