AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Abhishek – Aviva Engagement: ಅಭಿಷೇಕ್ ಅಂಬರೀಶ್​ ನಿಶ್ಚಿತಾರ್ಥಕ್ಕೆ ಮುಹೂರ್ತ ಫಿಕ್ಸ್..! ​ನಾಳೆ ನಡೆಯಲಿದೆ ಅದ್ಧೂರಿ ಕಾರ್ಯಕ್ರಮ

ಅಭಿಷೇಕ್ ಹಾಗು ಅವಿವಾ ನಿಶ್ಚಿತಾರ್ಥ ಬಗ್ಗೆ ಬಾರಿ ಚರ್ಚೆಯ ನಡುವೆ ಇದೀಗ ಅಭಿಷೇಕ್ ಹಾಗು ಅವಿವಾ ನಿಶ್ಚಿತಾರ್ಥಕ್ಕೆ ಗ್ರ್ಯಾಂಡ್ ತಯಾರಿ ನಡೆಸಲಾಗುತ್ತಿದೆ. ರೆಬೆಲ್ ಸ್ಟಾರ್ ಅಂಬರೀಶ್ ಅವರ ಪುತ್ರನ ನಿಶ್ಚಿತಾರ್ಥಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು ನಾಳೆ (ಡಿಸೆಂಬರ್ 11) ನಿಶ್ಚಿತಾರ್ಥ ನಡೆಯಲಿದೆ.

Abhishek - Aviva Engagement: ಅಭಿಷೇಕ್ ಅಂಬರೀಶ್​ ನಿಶ್ಚಿತಾರ್ಥಕ್ಕೆ ಮುಹೂರ್ತ ಫಿಕ್ಸ್..! ​ನಾಳೆ ನಡೆಯಲಿದೆ ಅದ್ಧೂರಿ ಕಾರ್ಯಕ್ರಮ
Abhishek - Aviva Engagement
TV9 Web
| Edited By: |

Updated on:Dec 10, 2022 | 2:41 PM

Share

ಅಭಿಷೇಕ್ (Abhishek Ambarish) ಹಾಗೂ ಅವಿವಾ ನಿಶ್ಚಿತಾರ್ಥ (Engagement) ಬಗ್ಗೆ ಬಾರಿ ಚರ್ಚೆಯ ನಡೆಯುತ್ತಿರುವ ಸಂದರ್ಭದಲ್ಲಿ ಅಭಿಮಾನಿಗಳಿಗೆ  ಇದೀಗ ಸಿಹಿಸುದ್ದಿ ನೀಡಿದ್ದಾರೆ.  ಅಭಿಷೇಕ್ ಹಾಗು ಅವಿವಾ ನಿಶ್ಚಿತಾರ್ಥಕ್ಕೆ ಗ್ರ್ಯಾಂಡ್ ತಯಾರಿ ನಡೆಸಲಾಗುತ್ತಿದೆ. ರೆಬೆಲ್ ಸ್ಟಾರ್ ಅಂಬರೀಶ್ ಅವರ ಪುತ್ರನ ನಿಶ್ಚಿತಾರ್ಥಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು ನಾಳೆ (ಡಿಸೆಂಬರ್ 11) ನಿಶ್ಚಿತಾರ್ಥ ನಡೆಯಲಿದೆ. ರೆಬೆಲ್ ಸ್ಟಾರ್ ಅಂಬರೀಶ್ ಅವಿವಾ ಅವರನ್ನು ವರಿಸಲಿದ್ದಾರೆ. ಅಭಿಷೇಕ್ ಅವರ ತಾಯಿ ಸಂಸದೆ ಸುಮಲತಾ ಅಂಬರೀಶ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಈಗಾಗಲೇ ಎಲ್ಲ ತಯಾರಿಗಳನ್ನು ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಈಗಾಗಲೇ ಅಭಿಷೇಕ್ ಕಲ್ಯಾಣಕ್ಕೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ಕುಟುಂಬಸ್ತರು ಈಗಾಗಲೇ ಸದ್ದಿಲ್ಲದೇ ಉಂಗುರ ಪೂಜೆ ಮಾಡಿಕೊಂಡಿದ್ದಾರೆ. ಅಂಬರೀಶ್ ಸುಮಲತ ವಿವಾಹ ವಾರ್ಷಿಕೋತ್ಸವದ ದಿನ ಉಂಗುರ ಪೂಜೆ ಮಾಡಲಾಗಿತ್ತು ಎಂದು ಹೇಳಲಾಗಿದೆ. ಡಿಸೆಂಬರ್ 11 ರಂದು ನಿಶ್ಚಿತಾರ್ಥಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು, ಅವಿವಾ ಬಿದ್ದಪ್ಪ ಜೊತೆ ಅಭಿಷೇಕ್ ಸಪ್ತಪದಿ ತುಳಿಯಲಿದ್ದಾರೆ. ನಾಳೆ ಖಾಸಗಿ ಹೋಟೇಲ್​​ನಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮ ನಡೆಯಲಿದೆ. ಸಂಕ್ರಾತಿ ನಂತರ ಮದುವೆ ದಿನವನ್ನು ಘೋಷಣೆ ಮಾಡಲಿದ್ದಾರೆ ಎನ್ನಲಾಗುತ್ತಿದೆ.

ಇದನ್ನು ಓದಿ: ‘ಅಭಿಷೇಕ್​ ಮದುವೆ ವದಂತಿ ಸುಳ್ಳು’; ಟಿವಿ9 ಡಿಜಿಟಲ್​ಗೆ ಸ್ಪಷ್ಟನೆ ನೀಡಿದ ಸುಮಲತಾ ಅಂಬರೀಷ್​

ಬಹುಕಾಲದ ಗೆಳತಿ ಜೊತೆ ಅಭಿಷೇಕ್ ವಿವಾಹವಾಗಲಿದ್ದಾರೆ. ಅಭಿ ಮತ್ತು ಅವಿವಾ ಮೊದಲು ಭೇಟಿ ಆದ ಹೋಟೆಲ್​ನಲ್ಲಿ ಉಂಗುರ ಬದಲಾಯಿಸಿಕೊಳ್ಳಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಶಿವಣ್ಣ ,ರಾಕಿಂಗ್ ಸ್ಟಾರ್ ಯಶ್ ದಂಪತಿ, ದುನಿಯಾ ಸೂರಿ ಸೇರಿದಂತೆ ಸಾಕಷ್ಟು ಸ್ಯಾಂಡಲ್​​ವುಡ್ ಗಣ್ಯರು ನಾಳೆ ಎಂಗೇಜ್ ಮೆಂಟ್ ನಲ್ಲಿ ಭಾಗಿ ಆಗಲಿದ್ದಾರೆ. ಹುಡುಗಿ ಕಡೆಯಿಂದ 50 ಮಂದಿ ಹುಡುಗನ ಕಡೆಯಿಂದ 50 ಒಟ್ಟು 100 ಜನ ನಿಶ್ಚಿತಾರ್ಥದಲ್ಲಿ ಭಾಗಿಯಾಗಲಿದ್ದಾರೆ.  ಈ ಕಾರ್ಯಕ್ರಮ ಕೇವಲ ಕುಟುಂಬಸ್ಥರು ಆಪ್ತರ ಸಮ್ಮುಖದಲ್ಲಿ ನಡೆಯಲಿದೆ ನಿಶ್ಚಿತಾರ್ಥ ನಡೆಯಲಿದೆ.

ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:58 pm, Sat, 10 December 22