ಕೊರೊನಾ ವೈರಸ್ ತನ್ನ ರಣ ಕೇಕೆಯನ್ನು ಮುಂದುವರಿಸಿದೆ. ಮೊದಲನೇ ಅಲೆಗಿಂತ ಎರಡನೇ ಅಲೆ ಭೀಕರವಾಗಿ ಕಾಡುತ್ತಿದೆ. ಈಗಾಗಲೇ ಚಿತ್ರರಂಗದ ಸಾಕಷ್ಟು ಮಂದಿ ಕೊರೊನಾಗೆ ಮೃತಪಟ್ಟಿದ್ದಾರೆ. ಈಗ ಹಿರಿಯ ನಟ ಹಾಗೂ ನಿರ್ದೆಶಕ ಲಲಿತ್ ಬಹಲ್ ಕೊರೊನಾಗೆ ಮೃತಪಟ್ಟಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು.
ಲಲಿತ್ ಮಗ ಹಾಗೂ ನಿರ್ದೆಶಕ ಕಣು ಬಹಲ್ ಈ ವಿಚಾರವನ್ನು ಅಧಿಕೃತಗೊಳಿಸಿದ್ದಾರೆ. ಮಾಧ್ಯಮಗಳ ಜತೆ ಮಾತನಾಡಿರುವ ಕಣು, ನನ್ನ ತಂದೆ ಕಳೆದ ಒಂದು ವಾರದಿಂದ ಕೊರೊನಾದಿಂದ ಬಳಲುತ್ತಿದ್ದರು. ಅವರಿಗೆ ಹೃದಯ ಸಂಬಂಧಿ ಕಾಯಿಲೆ ಸೇರಿದಂತೆ ಸಾಕಷ್ಟು ತೊಂದರೆಗಳು ಇದ್ದವು. ಹೀಗಾಗಿ, ಅವರಿಗೆ ಕೊರೊನಾ ಕಾಣಿಸಿಕೊಂಡಿದ್ದರಿಂದ ಆರೋಗ್ಯ ಮತ್ತಷ್ಟು ಹದಗೆಟ್ಟಿತ್ತು. ಹೀಗಾಗಿ, ಅವರನ್ನು ದೆಹಲಿಯ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಲಲಿತ್ ರಂಗಭೂಮಿ ಹಿನ್ನೆಲೆಯಿಂದ ಬಂದವರು. ನಂತರ ದೂರದರ್ಶನಕ್ಕಾಗಿ ಸಾಕಷ್ಟು ಟೆಲಿ ಫಿಲ್ಮ್ಗಳನ್ನು ಅವರು ನಿರ್ಮಾಣ ಹಾಗೂ ನಿರ್ದೇಶನ ಮಾಡಿದರು. ತಿತ್ಲಿ, ಅಮೇಜಾನ್ ಪ್ರೈಂ ವಿಡಿಯೋದ ಮೇಡ್ ಇನ್ ಹೆವನ್, ಜಡ್ಜ್ಮೆಂಟಲ್ ಹೈ ಕ್ಯಾ ಮುಂತಾದ ಪ್ರಾಜೆಕ್ಟ್ಗಳಲ್ಲಿ ನಟಿಸಿದ್ದಾರೆ.
Extremely saddened by the demise of one of my dearest and most respected Co-actors, Lalit Behl jee. Who, so brilliantly played the father in @MuktiBhawan! I feel the loss of my father again! Dear Kanu I am so very sorry for your loss! pic.twitter.com/wfbj22yQgd
— Adil hussain (@_AdilHussain) April 23, 2021
ಕೊರೊನಾ ಕಾರಣದಿಂದ ಚಿತ್ರರಂಗದ ಅನೇಕರು ಸಾವಿನ ಹಾದಿ ಹಿಡಿಯುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ ಹಿರಿಯ ನಟ ಕಿಶೋರ್ ನಂದಲಸ್ಕರ್ ಅವರು ಕೊವಿಡ್ನಿಂದ ಮೃತರಾದರು. ಗುರುವಾರ (ಏ.22) ರಾತ್ರಿ ಹಿರಿಯ ಸಂಗೀತ ನಿರ್ದೇಶಕ ಶ್ರವಣ್ ರಾಥೋಡ್ ನಿಧನರಾದರು. ಅಲ್ಲದೆ ಅಮಿತ್ ಮಿಸ್ತ್ರೀ ಹೃದಯಾಘಾತದಿಂದ ನಿಧನರಾಗಿದ್ದು ಬಾಲಿವುಡ್ಗೆ ಮೇಲಿಂದ ಮೇಲೆ ಕಹಿ ಸುದ್ದಿ ಕೇಳಿಬರುತ್ತಿದೆ.
ಇದನ್ನೂ ಓದಿ: Shravan Rathod: ಖ್ಯಾತ ಸಂಗೀತ ನಿರ್ದೇಶಕ ಶ್ರವಣ್ ರಾಥೋಡ್ ಕೊರೊನಾ ವೈರಸ್ನಿಂದ ನಿಧನ; ಚಿತ್ರರಂಗಕ್ಕೆ ಆಘಾತ