ಪದ್ಮಭೂಷಣ ಪ್ರಶಸ್ತಿ ಪಡೆದ ಹಿರಿಯ ನಟ ಅನಂತ್ ನಾಗ್​ಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸನ್ಮಾನ

ಪ್ರಸಿದ್ಧ ಕನ್ನಡ ನಟ ಅನಂತ ನಾಗ್ ಅವರಿಗೆ ಕೇಂದ್ರ ಸರ್ಕಾರ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸನ್ಮಾನಿಸಿದರು. 52 ವರ್ಷಗಳಿಂದ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿರುವ ಅನಂತ ನಾಗ್ ಅವರ ಕೊಡುಗೆಯನ್ನು ಜೋಶಿ ಅವರು ಮೆಚ್ಚುಗೆ ಪಡೆದರು.

ಪದ್ಮಭೂಷಣ ಪ್ರಶಸ್ತಿ ಪಡೆದ ಹಿರಿಯ ನಟ ಅನಂತ್ ನಾಗ್​ಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸನ್ಮಾನ
ಅನಂತ್ ನಾಗ್
Edited By:

Updated on: Aug 23, 2025 | 2:53 PM

ಹಿರಿಯ ನಟ ಅನಂತ್ ನಾಗ್ (Anant Nag) ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರು ಕನ್ನಡ ಚಿತ್ರರಂಗಕ್ಕೆ ಹಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರು ಚಿತ್ರರಂಗಕ್ಕೆ ನೀಡಿದ ಕೊಡುಗೆ ಗಮನಿಸಿ ಕೇಂದ್ರ ಸರ್ಕಾರ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. ಈಗ ಬೆಂಗಳೂರಿನಲ್ಲಿ ನಡೆದ ‘ಒಂದು ಕಲಾತ್ಮಕ ಸಂಜೆ’ ಕಾರ್ಯಕ್ರಮದಲ್ಲಿ ಅನಂತ್ ನಾಗ್ ಅವರನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸನ್ಮಾನಿಸಿದ್ದಾರೆ.

ಅನಂತ್ ನಾಗ್ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು 1973ರಲ್ಲಿ. ‘ಸಂಕಲ್ಪ’ ಅವರ ನಟನೆಯ ಮೊದಲ ಚಿತ್ರ. ಅವರು ಬಣ್ಣದ ಲೋಕದಲ್ಲಿ ಕಳೆದ 52 ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಾ ಬರುತ್ತಿದ್ದಾರೆ. ಹಾಸ್ಯ, ಗಂಭೀರ, ಹಾರರ್ ಸೇರಿದಂತೆ ವಿಭಿನ್ನ ಕಥಾ ಹಂದರಗಳ ಸಿನಿಮಾಗಳಲ್ಲಿ ಅನಂತ್ ಕಾಣಿಸಿಕೊಂಡಿದ್ದಾರೆ. ಅವರಿಗೆ ಜೋಶಿ ವಿಶೇಷ ಗೌರವ ಸಲ್ಲಿಕೆ ಮಾಡಿದ್ದಾರೆ.

ಅನಂತ್ ನಾಗ್ ಬಗ್ಗೆ ಜೋಶಿ ಟ್ವೀಟ್

ಅನಂತ್ ನಾಗ್ ಅವರನ್ನು ಸನ್ಮಾನಿಸಿದ ಬಳಿಕ ಮಾತನಾಡಿದ ಜೋಶಿ ಅವರು, ‘75ನೇ ವಯಸ್ಸಿನಲ್ಲೂ ಅನಂತ್ ನಾಗ್ ಕ್ರಿಯಾಶೀಲರಾಗಿದ್ದಾರೆ. ಅವರು ಅತ್ಯುತ್ತಮ ನಟನೆಯ ಮೂಲಕ ಕನ್ನಡಿಗರ ಮನಗೆದ್ದಿದ್ದಾರೆ. ಎಲ್ಲರನ್ನೂ ಅವರು ರಂಜಿಸಿದ್ದಾರೆ’ ಎಂದು ಜೋಶಿ ಹರ್ಷ ವ್ಯಕ್ತಪಡಿಸಿದರು. ಈ ವೇಳೆ ಅನಂತ್ ನಾಗ್ ಪತ್ನಿ ಧರ್ಮಪತ್ನಿ ಹಾಗೂ ಹಿರಿಯ ಕಲಾವಿದೆ ಗಾಯತ್ರಿ ಅನಂತನಾಗ್ ಹಾಗೂ ಗಣಪತಿ ಭಟ್ ಸೇರಿದಂತೆ ಚಿತ್ರರಂಗದ ಕಲಾವಿದರು ಉಪಸ್ಥಿತರಿದ್ದರು.

ಇದನ್ನೂ ಓದಿ: ಅನಂತ್​ನಾಗ್​ಗೆ ಸಿಟ್ಟು ಬರುತ್ತಾ? ಪತ್ನಿ ಗಾಯತ್ರಿ ಹೇಳಿದ ಅಪರೂಪದ ಸಂಗತಿ

ಅನಂತ್​ನಾಗ್ ಅವರಿಗೆ ಈ ಮೊದಲು ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತನಾಡಿದ್ದ ಅವರು, ‘ಪದ್ಮ ಪ್ರಶಸ್ತಿ ಬಂದಿದೆ ಎಂಬುದಕ್ಕಿಂತಲೂ ನೀವೆಲ್ಲರೂ ಸೇರಿ ನನಗೆ ಕೊಡಿಸಿದ್ದೀರಿ, ಅವರು ಕೊಟ್ಟಿದ್ದಾರೆ, ನಾನು ತೆಗೆದುಕೊಂಡು ಬಂದಿದ್ದೇನೆ’ ಎಂದಿದ್ದರು. ಅನಂತ್ ನಾಗ್ ಅವರಿಗೆ ಈ ಗೌರವ ಸಲ್ಲಬೇಕು ಎಂದು ಕನ್ನಡಿಗರು ಹಲವು ವರ್ಷಗಳಿಂದ ಹೇಳುತ್ತಲೇ ಬರುತ್ತಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 2:51 pm, Sat, 23 August 25